ಬೆಂಗಳೂರು:(ಜು.4): Justice Sandesh: ಬೆಂಗಳೂರು ನಗರ ಡಿಸಿ ಕಚೇರಿಯ ಭ್ರಷ್ಟಾಚಾರ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಹೆಚ್.ಪಿ ಸಂದೇಶ್ ಅವರು ಸ್ಪೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ನ್ಯಾಯಮೂರ್ತಿ ಹೆಚ್.ಪಿ ಸಂದೇಶ್ ಅವರು ಎಸಿಬಿಯನ್ನ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ವರ್ಗಾವಣೆಯ ಬೆದರಿಕೆ ಹಾಕಲಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಸ್ವತಃ ನ್ಯಾ. ಹೆಚ್.ಪಿ ಸಂದೇಶ್ ಅವರು ಪ್ರತಿಕ್ರಿಯಿಸಿದ್ದು ನಾನು ವರ್ಗಾವಣೆ ಬೆದರಿಕೆ ಎದುರಿಸಲು ಸಿದ್ಧನಿದ್ದೇನೆ. ಜನರ ಬಳತಿಗಾಗಿ ಸಿದ್ದನಿದ್ದೇನೆ ನಿಮ್ಮ ಎಸಿಬಿ ಎಡಿಜಿಪಿ ತುಂಬಾ ಪವರ್ಫುಲ್ ಆಗಿದ್ದರಂತೆ. ಓರ್ವ ವ್ಯಕ್ತಿ ಇದನ್ನು ನನ್ನ ಸಹ ನ್ಯಾಯಮೂರ್ತಿಗೆ ಹೇಳಿದ್ದಾರೆ ಎಂದು ನನಗೆ ಮತ್ತೊಬ್ಬ ನ್ಯಾಯಮೂರ್ತಿಯವರು ತಿಳಿಸಿದ್ದಾರೆ.
ವರ್ಗಾವಣೆ ಮಾಡಿಸುವ ಬೆದರಿಕೆಯನ್ನು ಆದೇಶದಲ್ಲಿ ಬರಸುತ್ತಿದ್ದೇನೆ. ನನಗೆ ಯಾವುದೇ ಹೆದರಿಕೆ ಇಲ್ಲ. ಬೆಕ್ಕಿಗೆ ಗಂಟೆ ಕಟ್ಟಲು ಸಿದ್ಧನಿದ್ದೇನೆ. ನ್ಯಾಯಮೂರ್ತಿ ಆದಮೇಲೆ ನಾನು ಒಂದಿಂಚು ಆಸ್ತಿ ಮಾಡಿಲ್ಲ ನನ್ನ ಹುದ್ದೆ ಹೋದರು ಚಿಂತೆ ಇಲ್ಲ. ನಾನು ರೈತನ ಮಗ ಭೂಮಿ ಉಳುಮೆ ಮಾಡಿಕೊಂಡು ಬದುಕುತ್ತೇನೆ ನಾನು ಯಾವುದೇ ರಾಜಕೀಯ ಪಕ್ಷಕ್ಕೂ ಸೇರುವುದಿಲ್ಲ ರಾಜಕೀಯ ಸಿದ್ಧಾಂತಕ್ಕೂ ಬದ್ಧನಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಕಳೆದ ಎಸಿಬಿ ಕಲೆಕ್ಷನ್ ಸೆಂಟರ್ ಆಗಿದೆ ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಸಿಕ್ಕಿಬಿದ್ದವರ ಮೇಲೆ ಬಿ ರಿಪೋರ್ಟ್ ಹಾಕುತ್ತಿದೆ ಅಂತಿಮ ವರದಿಗಳ ಮಾಹಿತಿ ನೀಡುವಂತೆ ಹಾಯ್ ಕೋರ್ಟ್ ಸೂಚನೆ ನೀಡಿತ್ತು ಆದರೆ ಸರ್ಕಾರ ಮಾಹಿತಿಯನ್ನು ಒದಗಿಸದೆ ವಿಭಾಗಿಯ ಪೀಠಕ್ಕೆ ನೀಡಲಾಗಿದೆ ಎಂದು ಕಾರಣ ಹೇಳಿದ್ದಕ್ಕೆ ಎಸಿಬಿ ಪರ ವಕೀಲರನ್ನು ನ್ಯಾಯಮೂರ್ತಿ ಸಂದೇಶ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಡಿಸಿ ಕಚೇರಿಯಲ್ಲಿ ಕಲೆಕ್ಷನ್ ಮಾಡುವುದಕ್ಕೋಸ್ಕರ ಗುತ್ತಿಗೆ ಆಧಾರದಲ್ಲಿ ಎರಡನೇ ಆರೋಪಿಯನ್ನ ನೇಮಿಸಲಾಗಿದೆ. ನೀವು ಸಾರ್ವಜನಿಕರನ್ನ ರಕ್ಷಿಸುತ್ತಿದ್ದೀರೋ ಅಥವಾ ಕಳಂಕಿತರನ್ನು ರಕ್ಷಿಸುತ್ತಿದ್ದೀರಾ, ಕರಿ ಕೋರ್ಟ್ ಇರುವುದು ಆರೋಪಿಗಳನ್ನು ರಕ್ಷಿಸುವುದಕಲ್ಲ ಭ್ರಷ್ಟಾಚಾರ ಕ್ಯಾನ್ಸ. ರ್ ಆಗಿಬಿಟ್ಟಿದೆ ನಾಲ್ಕನೇ ಹಂತಕ್ಕೆ ಹೋಗಬಾರದು. ಬೇಲಿಯ ಎದ್ದು ಹೊಲ ಮೇಯ್ದರೆ ನಾವೇನು ಮಾಡುವುದು ಎಂದು ಹೇಳಿದ್ದಾರೆ
ನ್ಯಾಯಮೂರ್ತಿಗೆ ವರ್ಗಾವಣೆ ಬೆದರಿಕೆ ಹಾಕುವ ಮಟ್ಟಕ್ಕೆ ತಲುಪಿದ್ದೀರಿ ಎಂದರೆ ಏನು ಅರ್ಥ? ಭ್ರಷ್ಟಾಚಾರದಲ್ಲಿ ಇಡೀ ರಾಜ್ಯವೇ ಹೊತ್ತಿ ಉರಿಯುತ್ತಿದೆ ಎಸಿಬಿ ಏನು ಮಾಡುತ್ತಿದೆ ಬಿ ರಿಪೋರ್ಟ್ ಮಾಡಲು ಹಿಂದೆ ಸರಿಯುತ್ತಿದ್ದೀರಿ ಏಕೆ? ವಿಟಮಿನ್ ಎಮ್ ಇದ್ದರೆ ಮಾತ್ರ ಎಲ್ಲರನ್ನೂ ರಕ್ಷಿಸುತ್ತಿರಿ. ದುಡ್ಡು ಕೊಟ್ಟು ಪೋಸ್ಟಿಂಗ್ ಮಾಡಿಸಿಕೊಳ್ಳುವುದು ನಿಲ್ಲಿಸಿದರೆ ಎಲ್ಲವೂ ಸರಿ ಹೋಗುತ್ತದೆ ಎಂದು ಎಸಿಬಿ ವಿರುದ್ಧ ನ್ಯಾಯಮೂರ್ತಿ ಹೆಚ್.ಪಿ ಸಂದೇಶ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.