Miss India 2022: (ಜು.4):ಕನ್ನಡತಿ, ಕರ್ನಾಟಕ ಮೂಲದ, ಮುಂಬೈನಲ್ಲಿ ನೆಲೆಸಿರುವ 21 ವರ್ಷದ (Sini Shetty)ಸಿನಿ ಶೆಟ್ಟಿ ಅವರು 2022ರ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಕಿರೀಟ ತೊಟ್ಟಿದ್ದಾರೆ.
ಸಿನಿ ಶೆಟ್ಟಿ ಅವರು ಭರತನಾಟ್ಯಂ ನೃತ್ಯಗಾರ್ತಿ (bharatanatyam) ಕೂಡ ಆಗಿದ್ದಾರೆ. ಇನ್ನು ರಾಜಸ್ಥಾನದ ರೂಬಲ್ ಶೇಖಾವತ್ ಮೊದಲ ರನ್ನರ್ ಅಪ್ ಆಗಿದ್ದರೆ, ಉತ್ತರ ಪ್ರದೇಶದ ಶಿನತಾ ಚೌಹಾಣ್ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.. ಭರತನಾಟ್ಯ ಕಲಾವಿಧೆಯಾಗಿದ್ದ ಇವರು, ಮುಂದೆ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.ಮಿಸ್ ಇಂಡಿಯಾ 2022 ರನ್ನರ್ ಅಪ್ ರುಬಲ್ ಶೇಖಾವತ್ ನೃತ್ಯ, ನಟನೆ, ಚಿತ್ರಕಲೆಯಂತಹ ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದಾರೆ ಮತ್ತು ಬ್ಯಾಡ್ಮಿಂಟನ್ ಇಷ್ಟಪಡುತ್ತಾರೆ.

ಸಿನಿ ಶೆಟ್ಟಿ ಮುಂಬೈನಲ್ಲಿ ಜನಿಸಿದರು. ಆದರೆ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ ಮೂಲದವರು ಮತ್ತು ಪ್ರಸ್ತುತ ಚಾರ್ಟರ್ಡ್ ಫೈನಾನ್ಷಿಯಲ್ ಅನಾಲಿಸ್ಟ್ ವೃತ್ತಿಪರ ಕೋರ್ಸ್ ಮಾಡುತ್ತಿದ್ದಾರೆ. ಹೀಗಿದ್ದರೂ ಅವರಿಗೆ ನೃತ್ಯ ಎಂದರೆ ಬಹಳ ಅಚ್ಚುಮೆಚ್ಚು. ಅವರು ನಾಲ್ಕನೇ ವಯಸ್ಸಿನಲ್ಲಿ ನೃತ್ಯ ಮಾಡಲು ಪ್ರಾರಂಭಿಸಿದ್ದು, ಹದಿನಾಲ್ಕು ವರ್ಷದವರಿದ್ದಾಗ ತನ್ನ ಅರಂಗೇತ್ರಂ ಮತ್ತು ಭರತನಾಟ್ಯವನ್ನು ಪೂರ್ಣಗೊಳಿಸಿದರು.ಮಿಸ್ ಇಂಡಿಯಾ ಸ್ಪರ್ಧೆಗೆ ಮಲೈಕಾ ಅರೋರಾ, ನೇಹಾ ಧೂಪಿಯಾ, ಡಿನೋ ಮೊರಿಯಾ, ಮಿಥಾಲಿ ರಾಜ್ ಮುಂತಾದವರು ಜೂರಿಗಳಾಗಿದ್ದರು.