Prajwal Devaraj Birthday: (ಜು.4): ಡೈನಾಮಿಕ್ ಪ್ರಿನ್ಸ್ ಎಂದೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ಪ್ರಜ್ವಲ್ ದೇವರಾಜ್ ತಂದೆ ಡೈನಾಮಿಕ್ ಕಿಂಗ್ ಅದ್ರೆ ಮಗ ಡೈನಾಮಿಕ್ ಪ್ರಿನ್ಸ್ ಆಗಿ ತೆರೆ ಮೇಲೆ ಮಿಂಚಿ ಸಿನಿ ಅಭಿಮಾನಿ ಬಳಗವನ್ನೇ ಸಂಪಾದಿಸಿದ್ದಾರೆ. ಹೌದು…
ಅಂದ ಹಾಗೆ ಇಂದು ಪ್ರಜ್ವಲ್ ಅವರ ಹುಟ್ಟು ಹಬ್ಬ…..
ಇವರು ಜುಲೈ 4,1987 ತಂದೆ ದೇವರಾಜ್ ತಾಯಿ ಚಂದ್ರಲೇಖಾರವರ ಮುದ್ದಿನ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದ ಇವರು ತಂದೆಯಂತೆ ಸಿನಿಮಾದ ಕಂಡೆ ಹೆಚ್ಚಿನ ಒಲವು ಇಟ್ಟುಕೊಂಡು2007 ರಂದು ತರೆಕಂಡ ಸಿಕ್ಸರ್ ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿ ಎಂಟ್ರಿ ಕೊಟ್ಟು ಸುವರ್ಣ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಚೊಚ್ಚಲ ನಟ ಪ್ರಶಸ್ತಿಯನ್ನು ಸಹಾ ಪಡೆಯುತ್ತರೆ. ನಂತರ ಇವರು ಗಂಗೆ ಬಾರೆ ತುಂಗೆ ಬಾರೆ, ಮೆರವಣಿಗೆ, ಜೀವ , ಮುರಳಿ ಮೀಟ್ಸ್ ಮೀರಾ , ಲೈಫ್ ಜೊತೆ ಒಂದ್ ಸೆಲ್ಫಿ, ಜೆಂಟಲ್ ಮ್ಯಾನ್, ಚೌಕ ಅನೇಕ ಚಿತ್ರ ಗಳಲ್ಲಿ ನಾಯಕನಾಗಿ ಅಭಿನಯಿಸಿ ಹೊರ ಹೊಮ್ಮುತ್ತಿದ್ದಾರೆ. ಪ್ರಜ್ವಲ್ ದೇವರಾಜ್ ಅಲಿಯಾಸ್ ಡೈನಾಮಿಕ್ ಪ್ರಿನ್ಸ್.
— prajwal devaraj (@PrajwalDevaraj) July 1, 2021
ಸದ್ಯ ಲೋಹಿತ್ ನಿರ್ದೇಶನದ ಮಾಫಿಯಾದಲ್ಲಿ ಪ್ರಜ್ವಲ್ ಬ್ಯುಸಿಯಾಗಿದ್ದು, ಹುಟ್ಟು ಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳಿಗಾಗಿ ವಿಡಿಯೋವೊಂದನ್ನು ನಟ ಹಂಚಿಕೊಂಡಿದ್ದು, ಈ ಬಾರಿ ಹುಟ್ಟುಹಬ್ಬ ಆಚರಣೆ ಬೇಡ ಎಂದಿದ್ದಾರೆ. ಹೌದು, ಇತ್ತೀಚೆಗಷ್ಟೇ ಪ್ರಜ್ವಲ್ ಅವರ ಅಪ್ಪಟ ಅಭಿಮಾನಿ ಸತೀಶ್ ಎಂಬುವವರು ನಿಧನರಾಗಿದ್ದು, ಈ ಹಿನ್ನಲೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ನಟ ಪ್ರಜ್ವಲ್ ದೇವರಾಜ್ ತಿಳಿಸಿದ್ದಾರೆ.
ವಿಡಿಯೋದಲ್ಲಿ, ಈ ವರ್ಷವೂ ಕೂಡ ನಾನು ಬತ್್ಡೇ ಆಚರಿಸಿಕೊಳ್ಳುತ್ತಿಲ್ಲ. ಪ್ರತಿ ವಷ್ ನನ್ನ ದಿನವನ್ನು ಹಬ್ಬವಾಗಿ ನೀವು ಸಲೆಬ್ರೇಟ್ ಮಾಡುತ್ತಿದ್ದೀರಿ. ನನಗೆ ಸಾಕಷ್ಟು ಪ್ರೀತಿಯನ್ನ ನೀಡಿದ್ದೀರಿ. ಕಳೆದ ಬಾರಿ ಕೂಡ ಕೊರೊನಾ ಕಾರಣದಿಂದ ನನ್ನ ಜನ್ಮದಿನವನ್ನು ಆಚರಿಸಿಕೊಂಡಿರಲಿಲ್ಲ. ಅಭಿಮಾನಿಗಳು ನನಗೆ ನೀಡುವ ಪ್ರಿತಿಯನ್ನು ನಾನು ಮರಳಿ ಕೊಡಬೇಕು. ಇತ್ತೀಚೆಗಷ್ಟೇ ನನಗೆ ಬಹಳ ಆಪ್ತವಾಗಿದ್ದ ನನ್ನ ಅಭಿಮಾನಿ ಸತೀಶ್ ನಮ್ಮೆಲ್ಲರನ್ನು ಬಿಟ್ಟು ಹೋಗಿದ್ದಾರೆ. ಹಾಗಾಗಿ ಈ ವರ್ಷ ಹುಟ್ಟುಹಬ್ಬ ಬೇಡ ಎಂದು ಪ್ರಜ್ವಲ್ ಅಭಿಮಾನಿಗಳ ಬಳಿ ಮನವಿ ಮಾಡಿದ್ದಾರೆ. ಅಭಿಮಾನಿಗಳಿಗೆ ಸ್ವಲ್ಪ ಬೇಸರವಾಗಿದ್ದರೂ ಸಹ ನೆಚ್ಚಿನ ನಟನಿಗೆ ಈ ಅದ್ಭುತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಾಸ್ ಪೋಸ್ಟರ್ ಮೂಲಕ ಜನ್ನ ದಿನಕ್ಕೆ ‘ವೀರಂ’ ‘ಮಾಫಿಯಾ’ ತಂಡ ವಿಶ್

ಪ್ರಜ್ವಲ್ ದೇವರಾಜ್ ಈಗ ಪಕ್ಕಾ ಮಾಸ್ ಲುಕ್ ನಲ್ಲಿ ಪ್ರೇಕ್ಷಕರ ಮುಂದೆ ಬರಲು ಸಿದ್ದರಾಗಿದ್ದರೆ. ನಟ ಪ್ರಜ್ವಲ್ ದೇವರಾಜ್ ಅವರು ಹಲವು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಆ ಪೈಕಿ ‘ವೀರಂ’ ಮತ್ತು ‘ಮಾಫಿಯಾ’ ಸಿನಿಮಾಗಳ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಖದರ್ ಕುಮಾರ್ ನಿರ್ದೇಶನ, ಶಶಿಧರ್ ಕೆ.ಎಂ. ಅವರ ನಿರ್ಮಾಣದಲ್ಲಿ ‘ವೀರಂ’ ಸಿನಿಮಾ ಮೂಡಿಬರುತ್ತಿದೆ. ಇನ್ನು, ‘ಮಾಫಿಯಾ’ ಚಿತ್ರಕ್ಕೆ ಲೋಹಿತ್ ಎಚ್. ಅವರು ನಿರ್ದೇಶನ ಮಾಡುತ್ತಿದ್ದಾರೆ. ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬ. ಆ ಪ್ರಯುಕ್ತ ಈ ಎರಡೂ ಸಿನಿಮಾ ತಂಡಗಳಿಂದ ಒಂದು ದಿನ ಮೊದಲೇ ಮಾಸ್ ಆದಂತಹ ಪೋಸ್ಟರ್‌ಗಳನ್ನು ಬಿಡುಗಡೆ ಮಾಡುವುದರ . ಆ ಮೂಲಕ ‘ಡೈನಾಮಿಕ್ ಪ್ರಿನ್ಸ್’ ಹುಟ್ಟುಹಬ್ಬಕ್ಕೆ ಶುಭ ಕೋರಲಾಗಿದೆ. ಈ ಪೋಸ್ಟರ್‌ಗಳು ಸೋಷಿಯಲ್ ವಿಡೀಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹೀಗೆಪ್ರಜ್ವಲ್ ದೇವರಾಜ್ ಸಾಲು ಸಾಲು ಸಿನಿಮಗಳಲ್ಲಿ ಅಭಿನಯಿಸಿ ಮೂಲಕ ಸಿನಿ ಪ್ರೇಕ್ಷರರನ್ನು ರಂಜಿಸಲಿ ಅನ್ನೋಂದೆ ನಮ್ಮ ಆಶಯ……
once again ಸೆಕ್ಯೂಲರ್ ಟಿವಿ ಕಡೆಯಿಂದ ಪ್ರಜ್ವಲ್ ದೇವರಾಜ್ ಅಲಿಯಾಸ್ ಡೈನಾಮಿಕ್ ಪ್ರಿನ್ಸ್ಗೆ ಹ್ಯಾಪಿ ಬತ್ಡೇ…