ದಕ್ಷಿಣ ಕನ್ನಡ : (ಜು.4) Pourakarmika Protest: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ (Dakshina Kannada) ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಪೌರ ಕಾರ್ಮಿಕರು, (Pourakarmikas) ವಾಹನ ಚಾಲಕರು, ಸೂಪರ್‌ವೈಸರ್‌ಗಳು ದಕ್ಷಿಣ ಕನ್ನಡ ಜಿಲ್ಲಾ ಕಚೇರಿ ಎದುರು ವಿವಿಧ ಬೇಡಿಕೆಗಳನ್ನು ಮುಂದಿಟ್ಟು (Protest)ನಡೆಸುತ್ತಿರುವ ಮುಷ್ಕರ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿತು. ಇಂದು ಕೂಡಾ ಜಿಲ್ಲಾಧಿಕಾರಿ ಕಚೇರಿ ಎದುರು ಪೌರ ಕಾರ್ಮಿಕರು ಮುಷ್ಕರ ಮುಂದುವರಿಸಿದರು.
ಪೌರ ಕಾರ್ಮಿಕರನ್ನು ಖಾಯಂ ಮಾಡೋಕೇ ನಿಮಗೇನು ತೊಡಕು? : ಯುಟಿ ಖಾದರ್
ವಿವಿಧ ಬೇಡಿಕೆಗಳನ್ನು ಮುಂದಿಟ್ಟು ರಾಜ್ಯಾದ್ಯಂತ ಈ ಮುಷ್ಕರ ನಡೆಯುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ನಡೆಯುತ್ತಿರುವ ಮುಷ್ಕರದಲ್ಲಿ ಪೌರ ಕಾರ್ಮಿಕರು ತಮ್ಮ ಕೆಲಸಗಳನ್ನು ಸ್ಥಗಿತಗೊಳಿಸಿ ಭಾಗವಹಿಸಿದ್ದರು. ಇಂದಿನ ಮುಷ್ಕರದಲ್ಲಿ ಭಾಗವಹಿಸಿ ಬೆಂಬಲ (U T Khader) ನೀಡಿದ ಶಾಸಕ, ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಯುಟಿ ಖಾದರ್ ಅವರು, ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಯಾತಕ್ಕಾಗಿ ಪೌರ ಕಾರ್ಮಿಕರನ್ನು ಖಾಯಂ ಮಾಡೋಕೇ ನಿಮಗೇನು ತೊಡಕು (Pourakarmikas) ಎಂದು ಪ್ರಶ್ನಿಸಿದರು. ಇನ್ನು ಲಿಖಿತ ಭರವಸೆ ದೊರೆಯುವವರೆಗೆ ಮುಷ್ಕರ ನಡೆಸಲು ನಿರ್ಧರಿಸಲಾಗಿದ್ದು, ನಾಳೆಯೂ ಮುಷ್ಕರ ಮುಂದುವರೆಯುವ ಸಾಧ್ಯತೆ ಇದೆ.
ವಾಹನ ಚಲಾಯಿಸಿ ಮನೆ ಮನೆಯ ಕಸ ಸಂಗ್ರಹ ಮಾಡಿದ ಕಾರ್ಪೊರೇಟರ್ ಕಿಶೋರ್ ಕೊಟ್ಟಾರಿ


ಮಂಗಳೂರು ನಗರದಲ್ಲಿಂದು ಪೌರ ಕಾರ್ಮಿಕರ ಪ್ರತಿಭಟನೆ ಹಿನ್ನೆಲೆಯಲ್ಲಿ ಕಸ ಸಂಗ್ರಹ ಸ್ಥಗಿತವಾಗಿತ್ತು. ಹೀಗಾಗಿ ಪದವು ಸೆಂಟ್ರಲ್ ವಾರ್ಡ್ ನ ಕಾರ್ಪೊರೇಟರ್ ಕಿಶೋರ್ ಕೊಟ್ಟಾರಿಯವರು ತಮ್ಮ ಪ್ರದೇಶದಲ್ಲಿ ತಾವೇ ಸ್ವತಃ ವಾಹನ ಚಲಾಯಿಸಿ ಮನೆ ಮನೆಯ ಕಸ ಸಂಗ್ರಹ ಮಾಡಿದರು. ಈ ಕಾರ್ಯಕ್ಕೆ ಹಲವು ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ವಾಹನದಲ್ಲಿ ಕಸ ಸಂಗ್ರಹಿಸಿದ ಎಸ್ ಡಿಪಿಐ ನಾಯಕ ನಿಜಾಮ್ ಉಳ್ಳಾಲ್

ಪೌರಕಾರ್ಮಿಕರು ನಡೆಸಿದ ಧರಣಿಯಿಂದಾಗಿ ತ್ಯಾಜ್ಯ ಗಳು ಹಾಗೂ ಇನ್ನಿತರ ಕಸಗಳು ಕೊಂಡೊಯ್ಯಲು ನಗರ ಸಭೆಯ ಕಸದ ವಾಹನ ಬರಲಿಲ್ಲ. ಹೀಗಾಗಿ ಸ್ವತಹ ತನ್ನ ವಾಹನದಲ್ಲಿ ಮನೆ ಮನೆಗೆ ಭೇಟಿ ನೀಡಿ ಎಸ್ ಡಿಪಿಐ ನಾಯಕ ನಿಜಾಮ್ ಉಳ್ಳಾಲ್ ಹಾಗೂ 11ನೇ ವಾರ್ಡಿನ ಕೌನ್ಸಿರ್ ಕಮರುನ್ನಿಸ ನಿಜಾಮ್ ಅವರ ನೇತೃತ್ವದಲ್ಲಿ ವಾರ್ಡ್ ಸುತ್ತಮುತ್ತಲಿನ ಕಸ ಸಂಗ್ರಹಿಸಲಾಯಿತು.