B.Z. Zameer Ahmed:(ಜು.4): ಶಾಂತಿ ಸೌಹಾರ್ದತೆಯಿಂದ ಸಹೋದರರಂತೆ ಒಟ್ಟಾಗಿ (Edga Ground) ಬಾಳುತ್ತಿರುವ ನಮ್ಮ ಕ್ಷೇತ್ರದಲ್ಲಿ ಆಟದ ಮೈದಾನದ ಹೆಸರಿನಲ್ಲಿ ಕಿಡಿಗೇಡಿಗಳು ಬಂದ್ ಗೆ ಕರೆ ನೀಡಿದರೆ ಕಿವಿಗೊಡುವವರಲ್ಲ (chamarajapete) ಚಾಮರಾಜಪೇಟೆ ಕ್ಷೇತ್ರದ ಜನ ಎಂದು ಶಾಸಕರಾದ ಶ್ರೀ ಬಿ ಜೆಡ್ ಜಮೀರ್ ಅಹ್ಮದ್ ಖಾನ್ (B Z Zameer Ahmed Khan) ಪ್ರತಿಕ್ರಿಯಿಸಿದ್ದಾರೆ.
ಈ ಹಿಂದೆ ಸಾವಿನಲ್ಲೂ ರಾಜಕಾರಣ ಮಾಡಲು ಹೋಗಿ, ಬಂದ್ ಕರೆ ನೀಡಿದ್ದ ಕಿಡಿಗೇಡಿಗಳಿಗೆ (Chamarajepete Constituency ) ಚಾಮರಾಜಪೇಟೆ ಕ್ಷೇತ್ರದ ಜನ ಕ್ಯಾರೆ ಅಂದಿರಲಿಲ್ಲ. ಇದೀಗ, ಈದ್ಗಾ ಮೈದಾನ ಹಾಗೂ ಆಟದ ಮೈದಾನದ ಹೆಸರಿನಲ್ಲಿ ಇಲ್ಲದ ವದಂತಿಗಳು, ವಿವಾದಗಳನ್ನು ಸೃಷ್ಟಿಸಿ, ಬರುವ 12ನೇ ತಾರೀಖಿನಂದು ಪುನಃ ಬಂದ್ ಕರೆ ನೀಡಿದ್ದಾರೆ. ನಮ್ಮ ಚಾಮರಾಜಪೇಟೆ ಕ್ಷೇತ್ರದ ಜನ ಪ್ರಜ್ಞಾವಂತರು.
ಇಂತಹ ವಿಕೃತ ಮನಸುಗಳು ಬಂದ್ ಗೆ ಕರೆ ನೀಡಿದರೆ ಕಿವಿಗೊಡುವವರಲ್ಲ. (Peacefull) ನಾನು 2005ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಇದುವರೆಗೂ ಎಲ್ಲರೂ ಅಣ್ಣ ತಮ್ಮಂದಿರಂತೆ ಶಾಂತಿ ಸೌಹಾರ್ದಯುತವಾಗಿ ಬಾಳುತ್ತಿದ್ದೇವೆ. ಇದನ್ನು ಸಹಿಸದ ವಿಕೃತ ಮನಸುಗಳು ಅಶಾಂತಿ ಸೃಷ್ಟಿಸಲು ಈ ರೀತಿ ಹುನ್ನಾರ ಮಾಡುತ್ತಿದ್ದು, ಇದು ಕೇವಲ 2023 ರ ಚುನಾವಣೆಯ ಗಿಮಿಕ್ ಅಲ್ಲದೇ ಮತ್ತೇನೂ ಅಲ್ಲ.
ಧ್ವಜಾರೋಹಣ ಮಾಡುತ್ತೇವೆ
ಅಷ್ಟಕ್ಕೂ, ಆಟದ ಮೈದಾನ ತೆಗೆಯುತ್ತೇವೆ ಎಂದು ಯಾರು ಹೇಳಿದವರು. ಊಹಾಪೋಹಗಳಿಗೆ ಯಾರೂ ತಲೆಕಡಿಸಿಕೊಳ್ಳಬೇಕಿಲ್ಲ. ನಾನು ಶಾಸಕನಾಗಿರುವವರೆಗೆ (Play Ground) ಆಟದ ಮೈದಾನ ಮತ್ತು ಈದ್ಗಾ ಮೈದಾನ ತೆಗೆಯಲು(Chamarajepete Constituency ) ಯಾರಿಂದಲೂ ಸಾಧ್ಯವಿಲ್ಲ. ನಾವು ಸ್ವಾತಂತ್ರ್ಯ ದಿನಾಚರಣೆ,ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವದಂದು ಮೈದಾನದಲ್ಲಿ ಧ್ವಜಾರೋಹಣ ಮಾಡುತ್ತೇವೆ.
ನನ್ನ ಅಧಿಕಾರಾವಧಿಯಲ್ಲಿ ಈದ್ಗಾ ಮೈದಾನದ ಪಾವಿತ್ರ್ಯತೆಯನ್ನು ಎಲ್ಲ ರೀತಿಯಲ್ಲೂ ಕಾಪಾಡಲಾಗುವುದು ಮತ್ತು ಆಟದ ಮೈದಾನ ತೆಗೆಯುವ ಪ್ರಶ್ನೆಯೇ ಇಲ್ಲ. ಚಾಮರಾಜಪೇಟೆಯಲ್ಲಿ ಶಾಂತಿ ಕದಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದರು.