ಬೆಂಗಳೂರು:(ಜು.4): Rescued from Transgender: ತೃತೀಯ ಲಿಂಗಿಗಳನ್ನಾ ನಾಗರಿಕ ಸಮಾಜ ತಾತ್ಸಾರ ಮನೋಭಾವ ನೋಡುವುದೇ ಹೆಚ್ಚು. ಆದರೆ ಇಲ್ಲಿ ನಡೆದ ಘಟನೆ ಅವರ ಮೇಲಿನ ಗೌರವ ಹೆಚ್ಚಾಗುವಂತೆ ಮಾಡಿದೆ. ಇಬ್ಬರು ಮಂಗಳಮುಖಿಯರು ಕಿಡಿಗೇಡಿಯೊಬ್ಬನಿಂದ ಯುವತಿಯ ಮಾನ-ಪ್ರಾಣ ಕಾಪಾಡಿದ್ದಾರೆ.
ಘಟನೆ ವಿವರ
ರಾತ್ರೋ ರಾತ್ರಿ ಅಪರಿಚಿತ ಯುವತಿ ಮನೆಗೆ ನುಗ್ಗಿ ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿದ್ದ ಆರೋಪಿಯನ್ನು ಸ್ಥಳೀಯ ಮಂಗಳಮುಖಿಯರ ಸಹಾಯದಿಂದ ವಿವೇಕನಗರ ಪೊಲೀಸರು ಬಂಧಿಸಿದ್ದಾರೆ.
ಉದ್ಯೋಗ ಹರಸಿ ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ಬಂದಿದ್ದ ಯುವತಿ ವಿವೇಕನಗರದಲ್ಲಿ ವಾಸವಾಗಿದ್ದಳು. ಒಬ್ಬಳೇ ಇರೋದನ್ನ ಗಮನಿಸಿದ ಅದೇ ಏರಿಯಾದಲ್ಲಿ ವೆಸ್ಟ್ ಬೆಂಗಾಲ್ ಮೂಲದ ಆರೋಪಿ ಮಸೂರಲ್ ಶೇಕ್ ಆಕೆ ಮನೆ ಬಳಿ ಎರಡು-ಮೂರು ದಿನಗಳಿಂದ ಓಡಾಡುತ್ತಿದ್ದ. ಇದೇ ತಿಂಗಳು 2 ರಂದು ಮುಂಜಾನೆ ನಾಲ್ಕು ಗಂಟೆಗೆ ಬಾಗಿಲು ಬಡಿದಿದ್ದಾನೆ. ಬಾಗಿಲು ಓಪನ್ ಮಾಡ್ತಿದ್ದಂತೆ ಯುವತಿ ಮೇಲೆ ಮೃಗದಂತೆ ಎರಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಹಣ ಎಷ್ಟು ಬೇಕಾದರೂ ಕೊಡುತ್ತೇನೆ ಬಿಟ್ಟು ಬಿಡು ಎಂದು ಅಂಗಲಾಚಿದ್ದಾಳೆ. ಆದರೂ ಬಿಡದೇ ಆತ ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ. ಆ ಸಂದರ್ಭ ಯುವತಿ ಕಿರುಚಾಡಿದ್ದಾಳೆ.
ಯುವತಿ ಕಿರುಚಾಡುತ್ತಿದ್ದಂತೆ ಮೇಲಿನ ಪ್ಲ್ಯಾಟ್ ನಲ್ಲಿ ವಾಸವಿದ್ದ ತೃತೀಯ ಲಿಂಗಿ ಮಹಿರಾ ಸಿಂಗ್ ಮತ್ತು ಆಕೆಯ ಸ್ನೇಹಿತೆ ಯುವತಿಯನ್ನು ರಕ್ಷಿಸಿದ್ದಾರೆ. ಲಾಕ್ ಮಾಡಿಕೊಂಡು ಒಳಗಿದ್ದ ಆರೋಪಿಯನ್ನ ಬಾಗಿಲು ಮುರಿದು ಹೊರ ಹಾಕಿ ಆರೋಪಿಯನ್ನ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇನ್ನೂ ವಿವೇಕನಗರ ಠಾಣೆಯಲ್ಲಿ ಪ್ರಕಣ ದಾಖಲಾಗಿದ್ದು ಆರೋಪಿ ಮಸೂರಲ್ ಖಾನ್ ಬಂಧಿಸಲಾಗಿದೆ.
ಆರೋಪಿ ಹಿನ್ನೆಲೆ
ಇನ್ನೂ ಈ ಆರೋಪಿ ಮಸೂರಲ್ ವೆಸ್ಟ್ ಬೆಂಗಾಲ್ ಮೂಲದವನಾಗಿದ್ದು ಹೋಟೇಲ್‌ನಲ್ಲಿ ಕೆಲಸಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.ತೃತೀಯಲಿಂಗಿ ಮಹಿರಾ ಮತ್ತು ಆಕೆಯ ಸ್ನೇಹಿತೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಈ ಬಗ್ಗೆ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Mangalore Crime: ಅಕ್ರಮ ಗೋ ಮಾಂಸದ ಅಡ್ಡೆ ಮೇಲೆ ದಾಳಿ | ಸಮುದ್ರದ ತೀರದಲ್ಲಿ ಅಪರಿಚಿತ ಶವ ಪತ್ತೆ !