Big Boss Kannada 9: (ಜು.4): ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ನಿರೂಪಣೆಯಲ್ಲಿ ಮೂಡಿಬರುವ ಕಲರ್ಸ್ ಕನ್ನಡ (Colors Kannada) ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ (Big Boss ) ಯಾವಾಗ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿತ್ತು. ಈ ಬಾರಿಯ ಬಿಗ್ ಬಾಸ್ ಮತ್ತಷ್ಟು ವಿಶೇಷವಾಗಿ ಮೂಡಿಬರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹೌದು (August)ಬಹುನಿರೀಕ್ಷೆಯ ಬಿಗ್ ಬಾಸ್ ಆಗಸ್ಟ್ ಮೊದಲ ವಾರದಿಂದ ಆರಂಭವಾಗಲಿದೆ ಎನ್ನುವ ಮಾಹಿತಿ ಬಹಿರಂಗವಾಗಿದೆ.
ಕಳೆದ ಬಾರಿಯಂತೆ ಬಾರಿಯೂ (Voot Select) ಸಹ ವೂಟ್ ಸೆಲೆಕ್ಟ್ ನಲ್ಲಿಯೂ ಬಿಗ್ ಬಾಸ್ ಪ್ರಸಾರವಾಗಲಿದೆ. ಓಟಿಟಿಯಲ್ಲಿ ಮತ್ತು ಕಲರ್ಸ್ ವಾಹಿನಿಯಲ್ಲಿ ಎರಡು ರೀತಿಯ ಬಿಗ್ ಬಾಸ್ ಸೀಸನ್‌ಗಳನ್ನು (Big Boss Sessions) ಪ್ರಸಾರ ಮಾಡಲು ಕಲರ್ಸ್ ಸಂಸ್ಥೆ ನಿರ್ಧರಿಸಿದೆ.
ಕಳೆದ 8 ಸೀಸನ್ ಸಹ ಅದ್ಭುತವಾಗಿ ಮೂಡಿಬಂದಿದೆ. ಕೊರೊನಾ (Corona)ಕಾಲದಲ್ಲೂ ಬಿಗ್ ಬಾಸ್ ಅನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಅವರ ಅದ್ಭುತ ನಿರೂಪಣೆ ಸೈಲಿಯೊಂದಿಗೆ ಬಿಗ್ ಬಾಸ್ ಪ್ರತಿಬಾರಿ ಯಶಸ್ಸು ಕಾಣುತ್ತಿದೆ. ಈ ಬಾರಿ ಸಾಕಷ್ಟು ವಿಶೇಷತೆಗಳೊಂದಿಗೆ ಬರ್ತಿರುವ ಬಿಗ್ ಬಾಸ್ ಶೋನಲ್ಲಿ ಯಾರೆಲ್ಲ ಕಾಣಿಸಿಕೊಳ್ಳುತ್ತಿದ್ದಾರೆ, ಯಾವೆಲ್ಲ ಸೆಲೆಬ್ರಿಟಿಗಳು ಭಾಗಿಯಾಗುತ್ತಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.
ಈ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿ (Colors Kannada) ‘ಕಲರ್ಸ್ ಕನ್ನಡದ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್ ಈ ಸಲ ವಿಭಿನ್ನವಾಗಿ ಪ್ಲಾನ್‌ಗಳನ್ನು ಮಾಡಿಕೊಂಡಿದ್ದಾರೆ. ಬಿಗ್ ಬಾಸ್ ಸೆಟ್‌ಗೆ ಹೋಗಲು ನಾನಂತೂ ಎಕ್ಸೈಟ್ ಆಗಿದ್ದೇನೆ’ ಎಂದು ಹೇಳುತ್ತಾರೆ.