ಬೆಂಗಳೂರು: (ಜು.3): Peenya Flyover: ರಾಜ್ಯದ 18 ಜಿಲ್ಲೆಗಳನ್ನು ಬೆಂಗಳೂರಿನಿಂದ ಸಂಪರ್ಕಿಸುವ ಪೀಣ್ಯ ಫ್ಲೈಓವರ್ ಮೇಲೆ ಶೀಘ್ರದಲ್ಲೇ ಹೆವಿ ವೆಹಿಕಲ್ ಓಡಾಟ ಕೊಡಲು ತಜ್ಞರು ಸಮ್ಮತಿ ನೀಡಿದ್ದಾರೆ.
ಯೆಸ್… ಕಳೆದ ಡಿಸೆಂಬರ್ 25 ರಂದು 6 ತಿಂಗಳ ಬಳಿಕ ಫ್ಲೈಓವರ್‌ನ ಎರಡು ಪಿಲ್ಲರ್‌ಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಹೆವಿ ವೆಹಿಕಲ್ ನಿರ್ಬಂಧ ಮಾಡಲಾಗಿತ್ತು.
ಇದರಿಂದಾಗಿ ಪೀಣ್ಯ ಫ್ಲೈಓವರ್ ಮೇಲೆ ಹೆವಿ ವೆಹಿಕಲ್ ಓಡಾಟಕ್ಕೆ ನಿರ್ಬಂಧದಿಂದ ಫುಲ್ ಟ್ರಾಫಿಕ್ ಜಾಮ್ ತುಮಕೂರು ರಸ್ತೆ, ಗೊರುಗುಂಟೆಪಾಳ್ಯ ಜಂಕ್ಷನ್ ಬಳಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿತ್ತು. ಬಳಿಕ ರಾಷ್ಟ್ರೀಯ ಹೆದ್ದಾರಿ ಪಾಧಿಕಾರದವರು ಮತ್ತು ಐಐಎಸ್ ಸಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಇದೀಗ ಹೆವಿ ವೆಹಿಕಲ್ ಓಡಾಟಕ್ಕೆ ಅವಕಾಶ ನೀಡುವ ಸಾಧ್ಯತೆಯಿದೆ. ಈ ಬಗ್ಗೆ ಐಐಎಸ್‍ಸಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, 20 ಟನ್‍ವರೆಗಿನ ವೆಹಿಕಲ್ ಓಡಾಟಕ್ಕೆ ಅವಕಾಶ ನೀಡಬಹುದು ಎಂದು ಮಾಹಿತಿ ನೀಡಿದ್ದಾರೆ. ಒಂದು ಟ್ರಕ್ ಭಾರ 10 ರಿಂದ 20 ಟನ್ ಇರುತ್ತದೆ. 20 ಟನ್‍ಗಿಂತ ಹೆಚ್ಚು ಭಾರ ಹಾಕುವ ವೆಹಿಕಲ್‍ಗಳನ್ನು ಹಾಕಬಾರದು. ಫ್ಲೈ ಓವರ್ ಮುಂಭಾಗದಲ್ಲಿ ಲೋಡಿಂಗ್ ಮಿಷನ್ ಇಟ್ಟು ಚೆಕ್ ಮಾಡಿ ವೆಹಿಕಲ್ ಬಿಡಬೇಕಾಗುತ್ತದೆ. ಒಂದು ವಾಹನ 20 ಟನ್‍ಗಿಂತ ಹೆಚ್ಚು ಭಾರ ಹಾಕಬಾರದು. ಅದನ್ನ ಪರಿಶೀಲನೆ ಮಾಡಿ ವೆಹಿಕಲ್ ಮೂಮೆಂಟ್‍ಗೆ ಐಐಎಸ್‍ಸಿ ಸಮ್ಮತಿ ನೀಡಿದೆ.
ಬುಧವಾರ ವಿವಿಧ ಏಜೆನ್ಸಿಗಳ ತಜ್ಞರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದು, ಪರಿಶೀಲನೆ ಬಳಿಕ ಹೆವಿ ವೆಹಿಕಲ್ ಓಡಾಟಕ್ಕೆ ಅವಕಾಶ ಕೊಡಬಹುದು ಅಂತಾ ವರದಿ ಸಿದ್ಧ ಪಡಿಸಿದೆ. ಇದರ ಅನುಸಾರ ಗೂಡ್ಸ್ ಟ್ರಕ್ಸ್, ಬಸ್, ಖಾಲಿ ಲಾರಿ ಓಡಾಡಬಹುದು. ಟ್ರಕ್‍ಗಳು 20 ಟನ್‍ಗಿಂತ ಮೇಲ್ಪಟ್ಟು ಇರಬಾರದು ಎಂದು ತಿಳಿಸಿದೆ.