ಮೈಸೂರು: (ಜು.3):Pavithra Lokesh:ಒಂದೇ ರೂಮಲ್ಲಿ ಪವಿತ್ರಾ ಲೋಕೇಶ್-ನರೇಶ್ ಪತ್ತೆಯಾಗಿದ್ದು, ರೂಂ ಬಾಗಿಲು ತೆರೆಯುವಂತೆ ರಮ್ಯಾ ರಘುಪತಿ ತಾಕೀತು ಮಾಡಿದ್ದಾರೆ. ನರೇಶ್-ಪವಿತ್ರಾ ಲೋಕೇಶ್ ರೂಮಿನಿಂದ ಒಟ್ಟಿಗೆ ಹೊರಬಂದಿದ್ದಾರೆ.ತೆಲುಗು ಸೂಪರ್ ಸ್ಟಾರ್ ಕೃಷ್ಣ (Telugu Super Star Krishna) ಅವರ ಪುತ್ರನೂ ಆಗಿರುವ ಪೋಷಕ ನಟ ನರೇಶ್ ಹೆಂಡತಿಗೆ (Wife) ಡಿವೋರ್ಸ್ (Divorce) ನೀಡದೇ ಪವಿತ್ರಾ ಲೋಕೇಶ್ ಅವರನ್ನು ವಿವಾಹವಾಗಿದ್ದಾರೆ (Marriage) ಎನ್ನುವ ಗುಸುಗುಸು ಕೇಳಿ ಬಂದಿತ್ತು. ಅಲ್ಲಿಂದ ಶುರುವಾದ ವಿವಾದ ಮೂವರ ಬಾಳಲ್ಲಿ ಭಾರೀ ಕೋಲಾಹಲವನ್ನೇ ಎಬ್ಬಿಸಿತ್ತು.
ನರೇಶ್ ಹಾಗೂ ಪವಿತ್ರಾ ಲೋಕೇಶ್ ರಮ್ಯಾ ರಘುಪತಿ ಮೇಲೆ ಆರೋಪಗಳ ಸುರಿಮಳೆ ಸುರಿಸಿದ್ರೆ, ಅತ್ತ ರಮ್ಯಾ ರಘುಪತಿ ಇವರಿಬ್ಬರ ಮೇಲೆ ಪ್ರತ್ಯಾರೋಪ ಮಾಡಿದ್ರು. ಇದೀಗ ಮೈಸೂರಿನ (Mysore) ಖಾಸಗಿ ಹೋಟೆಲ್‌ನ (Hotel) ಒಂದೇ ರೂಮ್‌ನಲ್ಲಿ (Room) ಪವಿತ್ರಾ ಲೋಕೇಶ್ ಹಾಗೂ ನರೇಶ್ ಇದ್ದಾರೆ ಎನ್ನಲಾಗುತ್ತಿದೆ.ಒಂದೇ ರೂಮಲ್ಲಿ ಪವಿತ್ರಾ ಲೋಕೇಶ್-ನರೇಶ್ ಪತ್ತೆಯಾಗಿದ್ದು, ರೂಂ ಬಾಗಿಲು ತೆರೆಯುವಂತೆ ರಮ್ಯಾ ರಘುಪತಿ ತಾಕೀತು ಮಾಡಿದ್ದಾರೆ. ನರೇಶ್-ಪವಿತ್ರಾ ಲೋಕೇಶ್ ರೂಮಿನಿಂದ ಒಟ್ಟಿಗೆ ಹೊರಬಂದಿದ್ದಾರೆ.
ಅಷ್ಟೇ ಅಲ್ಲದೇ ನರೇಶ್ ಪತ್ನಿ ರಮ್ಯಾ ರಘುಪತಿ ಕೂಡ (Ramya Raghupathi)ಅದೇ ಹೋಟೆಲ್‌ನ, ಅದೇ ಕೋಣೆ ಮುಂದೆ ಪಟ್ಟು ಹಿಡಿದು ಕುಳಿತಿದ್ದಾರೆ ಎಂಬ ಗುಸು ಗುಸು ಕೇಳಿ ಬರುತ್ತಿದೆ. ಈ ಹಿಂದೆ ಅವರಿಬ್ಬರು ಒಂದೇ ಮನೆಯಲ್ಲಿದ್ದಾರೆ (Social Media) ಅಂತ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿತ್ತು, ಒಂದೇ ಹೋಟೆಲ್‌ನಲ್ಲಿದ್ದಾರೆ ಎಂಬ ಬಗ್ಗೆ ವದಂತಿ ಕೇಳಿ ಬರುತ್ತಿದೆ.
ನರೇಶ್ ಬಾಬು ಕ್ಯಾಮೆರಾ (naresh)ಮುಂದೆ ಡ್ಯಾನ್ಸ್ ಮಾಡಿಕೊಂಡು ಹೊರಟಿದ್ದಾರೆ. ಕಣ್ಣೆದುರು ಬಂದ ನರೇಶ್ ಬಾಬು ಜೊತೆ ರಮ್ಯಾ ರಂಪಾಟ ಮಾಡಿದ್ದಾರೆ. ರಮ್ಯಾ ರಘುಪತಿ ನರೇಶ್ ಬಾಬು ಜೊತೆ ಜಗಳಕ್ಕಿಳಿದಿದ್ದು, ನರೇಶ್-ಪವಿತ್ರಾ ಕ್ಯಾರೆ ಎನ್ನದೇ ಹೋಟೆಲ್ನಿಂದ ಹೊರಟಿದ್ದಾರೆ. ಮೈಸೂರಿಂದ ಬೆಂಗಳೂರಿಗೆ ಹೊರಟಿದ್ದಾರೆ.