Harshika Poonacha:(ಜು.3): ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ (harshika poonacha) ಅವರು ಕೊರೊನಾ ಸಂದರ್ಭದಲ್ಲಿ (Corona)ಹಲವು ಕುಟುಂಬಗಳಿಗೆ ನೆರವಾಗಿದ್ದರು. ಭುವನ್ ಸಂಸ್ಥೆಯ ಮೂಲಕ ನಟ ಭುವನ್ ಜತೆ (Actor Bhuvan) ಸೇರಿ ಜನ ಸೇವೆ ಮಾಡಿದ್ದರು. ಈ ಸಾಧನೆಯನ್ನು ಗುರುತಿಸಿ ಸಂಸ್ಥೆಗೆ (Mother Teresa Memorial National Award) ಮದರ್ ತೆರೆಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗಿದ್ದು, ಈ ಅವಾರ್ಡ್ ಅನ್ನು ಹರ್ಷಿಕಾ ಪೂಣಚ್ಚ ಸ್ವೀಕರಿಸಿದರು.ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ (instagram)ಪೋಸ್ಟ್ ಮಾಡಿರುವ ಅವರು, ‘ಇದು ನನ್ನ ಜೀವನದ ಹೆಮ್ಮೆಯ ಕ್ಷಣ’ ಎಂದು ಬರೆದುಕೊಂಡಿದ್ದಾರೆ.
ಬೆಳ್ಳಿಪರದೆಯಲ್ಲಿ ಸ್ಟಾರ್ ಆಗಿ ಮಿಂಚುವ ಅದೆಷ್ಟು ಕಲಾವಿದರು ನಿಜ (real Star) ಜೀವನದಲ್ಲೂ ಸ್ಟಾರ್ ಆಗಿ ಇನ್ನೊಬ್ಬರಿಗೆ ಸಹಾಯ ಮಾಡುವುದು ಬಲು ಅಪರೂಪ. ಆದರೆ ರಿಯಲ್ ಲೈಫ್‌ನಲ್ಲೂ ತಾವು ಹೀರೋನೇ (Bhuvan and Harshika Poonacha)ಅಂತಾ ನಟ ಭುವನ್ ಮತ್ತು ಹರ್ಷಿಕಾ ಪೂಣಚ್ಚ ತೋರಿಸಿ ಕೊಟ್ಟಿದ್ದರು. ಭುವನಂ ಸಂಸ್ಥೆಯ (Bhuvan Insittution) ಮೂಲಕ ಅದೆಷ್ಟೋ ಸಂಕಷ್ಟದಲ್ಲಿರುವವರಿಗೆ ನೆರವಾಗಿ ಭುವನ್ ಜೊತೆ ಹರ್ಷಿಕಾ ಸಾಥ್ ನೀಡಿದ್ದರು

ಇದೀಗ ಇವರ ಸಮಾಜಮುಖಿ ಕಾರ್ಯ ಗುರುತಿಸಿ ಭವನಂ ಸಂಸ್ಥೆಯ (Bhuvan Insittution) ಪರವಾಗಿ ನಟಿ ಹರ್ಷಿಕಾ, ಮದರ್ ತೆರೇಸಾ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಅನ್ನು ಸ್ವೀಕರಿಸಿದ್ದಾರೆ. (The News Papers Association of Karnataka)ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ ನಟಿ ಹರ್ಷಿಕಾ ಅವರಿಗೆ ಮದರ್ ತೆರೇಸಾ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದ್ದರು. ಈ ಪ್ರಶಸ್ತಿಯಿಂದ ಭುವನಂ ಸಂಸ್ಥೆಯ ಮೂಲಕ ಮತ್ತಷ್ಟು ಸಮಾಜಮುಖಿ ಕೆಲಸ ಮಾಡಲು ನಟಿಗೆ ಪ್ರೇರಣೆ ಸಿಕ್ಕಂತಾಗಿದೆ..