ನವದೆಹಲಿ: Milk Price Hike (ಜು.3): ದೇಶದಲ್ಲಿ ಈಗಾಗಲೇ ದಿನಬಳಕೆ ವಸ್ತುಗಳ ಬೆಲೆ (Price Hike) ಹೆಚ್ಚಾಗಿದ್ದು. ಈ ಮಧ್ಯೆ ಹಾಲು ಹಾಗೂ ಹಾಲಿನ ಉತ್ಪನ್ನಗಳ ದರ ಏರಿಕೆ ಮಾಡುವ (Milk and Milk Products) ಸಾಧ್ಯತೆ ಇದೆ.ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷ ದಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್ 47ನೇ ಸಭೆಯಲ್ಲಿ ಹಾಲಿನ ಉತ್ಪನ್ನಗಳಾದ ಪ್ರಿ ಪ್ಯಾಕ್ ಮಾಡಿದ ಮೊಸರು, ಲಸ್ಸಿ ಮತ್ತು ಮಜ್ಜಿಗೆ (Butter Milk)ಸೇರಿದಂತೆ ಕೆಲವು ಆಹಾರಗಳ ಮೇಲಿನ ತೆರಿಗೆಯ ವಿನಾಯಿತಿಯನ್ನು (GST) ಹಿಂಪಡೆದಿರುವುದೇ ದರದ ಏರಿಕೆಗೆ ಕಾರಣವಾಗಿದೆ
ಜಿಎಸ್ಟಿ ಹೆಚ್ಚುವರಿ ವೆಚ್ಚ ಹಿನ್ನೆಲೆಯಲ್ಲಿ (Dairy)ಡೈರಿ ಕಂಪನಿಗಳು ಉತ್ಪನ್ನಗಳ ಬೆಲೆ ಹೆಚ್ಚಿಸಬಹುದು ಎಂದು ಅಂದಾಜಿಸಲಾಗಿದೆ. ಮೊಸರು ಮತ್ತು ಮಜ್ಜಿಗೆ ಮೇಲಿನ ಜಿ ಎಸ್ ಟಿ ದರವನ್ನು ವಿಧಿಸುವ (GST)ಸಾಧ್ಯತೆ ಇದೆ ಎಂದು ವರದಿ ಎಂದು ತಿಳಿಸಿದೆ.
ಹೆಚ್ಚುತ್ತಿರುವ ಹಾಲಿನ ಸಂಗ್ರಹಣೆ (Storage Price)ಬೆಲೆಗಳು ಮತ್ತು ಶೇಕಡ ಐದರಷ್ಟು ಹೊಸ ಸಂಭಾವನೆಯ ಜಿಎಸ್‌ಟಿಯನ್ನು ಪರಿಗಣಿಸಿ, ಡೈರಿ ಕಂಪನಿಗಳು ಹೆಚ್ಚುವರಿ ವೆಚ್ಚಗಳನ್ನು ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆಗಳು ಇದೆ.
ಈಗಾಗಲೇ ಪೆಟ್ರೋಲ್ ಬೆಲೆ ಡೀಸೆಲ್ ಬೆಲೆ , (Price Hike) ಅಡುಗೆ ಅನಿಲ ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಜಾಸ್ತಿಯಾಗಿರುವುದರಿಂದ ಗ್ರಾಹಕರಿಗೆ ಈಗಾಗಲೇ ಬೆಲೆಯ ಬಿಸಿ ಯಿಂದ ತತ್ತರಿಸಿ ಹೋಗಿದ್ದಾರೆ ಈ ನಡುವೆ ಹಾಲಿನ ಮತ್ತು ಹಾಲಿನ ಉತ್ಪನ್ನಗಳ ಬೆಲೆ ಜಾಸ್ತಿ ಆದರೆ ಮತ್ತಷ್ಟು ಹೊಡೆತ ಬೀಳಬಹುದು.
ಇದನ್ನೂ ಓದಿ: Hindu – Muslim Unity: ಧರ್ಮ ಸಂಘರ್ಷದ ಮಧ್ಯೆ ಸಾಮರಸ್ಯದ ಉದಾಹರಣೆಗೆ ಸಾಕ್ಷಿಯಾಗಿದೆ ಈ ಪ್ರಸಂಗ !