ಮಂಗಳೂರು: (ಜು.3): Mangalore Crime: ಅರ್ಕುಳ ಗ್ರಾಮದಲ್ಲಿ ಶೆಡ್‌ನಲ್ಲಿ ನಡೆಸುತ್ತಿದ್ದ (Illegal beef Meat)ಅಕ್ರಮ ಗೋ ಮಾಂಸದ ಅಡ್ಡೆ ಮೇಲೆ ಮಂಗಳೂರು ಗ್ರಾಮಾಂತರ ಪೊಲೀಸರು (Police Raid) ಇಂದು ದಾಳಿ ನಡೆಸಿದರು. 95 ಕೆಜಿ ಮಾಂಸ, ಮಾಂಸ ಸೀಳುವ ಯಂತ್ರ, ತೂಕದ ಉಪಕರಣಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. (Accused Arrest)ಆರೋಪಿ ಬಶಿತ್ ಸ್ಥಳದಿಂದ ಪರಾರಿಯಾಗಿದ್ದು, ಆತನನ್ನು ಬಂಧಿಸಲು ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅರ್ಕುಳ ಕೋಟೆಯಲ್ಲಿರುವ ಬಿ ಕೆ ಖಾಲಿದ್ ಎಂಬುವರಿಗೆ ಸೇರಿದ ಶೆಡ್‌ನಲ್ಲಿ ಬಾಶಿತ್ ಅಕ್ರಮವಾಗಿ (Illegal beef Meat) ಗೋಮಾಂಸ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ (Police Raid) ಪೊಲೀಸರು ದಾಳಿ ನಡೆಸಿದ್ದಾರೆ.ಜಾನುವಾರುಗಳನ್ನು ಅಕ್ರಮವಾಗಿ ಕಡಿದು ಮಾಂಸವನ್ನು ಶೆಡ್‌ನಿಂದ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿತ್ತು.

ಕೇರಳ – ಕರ್ನಾಟಕದಲ್ಲಿ ಅಕ್ರಮವಾಗಿ ಕಾರ್ಯಚರಿಸುವ ಕಸಾಯಿ ಖಾನೆಗಳನ್ನು (Butcher shop) ನಿರ್ಮಿಸಿ ಗೋಹತ್ಯೆ ನಡೆಸುವ ಕುರಿತು ದೂರುಗಳು ಕೇಳಿಬರುತ್ತಿರುವ ಕಾರಣ ಅಂತಹ ಕಸಾಯಿಖಾನೆಗಳಿದ್ದರೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು( MLA Vedavyas Kamat) ಶಾಸಕ ಕಾಮತ್ ಇಲಾಖೆಗೆ ಸೂಚನೆ ನೀಡಿದ್ದಾರೆ.ಅಕ್ರಮವಾಗಿ ಗೋಸಾಗಾಟ ಮಾಡುವವ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಜಿಲ್ಲೆಯ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ (Police Department) ಕಾರ್ಯೋನ್ಮುಖರಾಗಬೇಕು. ಜಿಲ್ಲೆಯಲ್ಲಿ ತರುವ ಕೃತ್ಯಗಳಿಗೆ ಆಸ್ಪದ ನೀಡಬಾರದು ಎಂದು ಶಾಸಕ ಕಾಮತ್ ಹೇಳಿದ್ದಾರೆ.
ಸಮುದ್ರದ ತೀರದಲ್ಲಿ ಅಪರಿಚಿತ ಶವ ಪತ್ತೆ
ಮಂಗಳೂರು: ಸಸಿಹಿತ್ಲು ಬಳಿಯ ರಾಧಾಕೃಷ್ಣ ಭಜನಾ (Suratkal)ಮಂದಿರದ ಬಳಿ ಸಮುದ್ರದ ತೀರದಲ್ಲಿ ಅಪರಿಚಿತ ಶವ ಪತ್ತೆಯಾಗಿದೆ.ಸುಮಾರು ಮೂವತ್ತರ ಹರಿಯದ ಯುವಕನ ಶವವಾಗಿದ್ದು (unknow Dead Body ) ದೇಹದಲ್ಲಿ ಪ್ಯಾಂಟ್ ಹಾಗು ಬನಿಯನ್ ಮಾತ್ರ ಇದ್ದು ಮುಖವು ಸಂಪೂರ್ಣವಾಗಿ ಕಪ್ಪೆರಿದೆ. ಸೊಂಟದಲ್ಲಿ ಕಪ್ಪು ದಾರವು ಸಹ ಇದೆ.ಈ ಬಗ್ಗೆ ಮಾಹಿತಿ ಇದ್ದಲ್ಲಿ (Surathkal Police Station) ಸುರತ್ಕಲ್ ಪೊಲೀಸ್ ಠಾಣೆಯನ್ನ ಸಂಪರ್ಕಿಸಬೇಕಾಗಿ ಪೊಲೀಸರು ವಿನಂತಿಸಿಕೊಂಡಿದ್ದಾರೆ.
ಮಂಗಳೂರಿನಲ್ಲಿ ಅಕ್ರಮ ಗೋಸಾಗಾಟ ಹಾಗೂ ಗೋವಧೆ ಚಟುವಟಿಕೆಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಗೆ ಶಾಸಕ ಕಾಮತ್ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಾದರೂ ಅಕ್ರಮವಾಗಿ ಗೋಹತ್ಯೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ಇದನ್ನೂ ಓದಿ:Amaravathi Incident: ಅಮರಾವತಿ ಹತ್ಯೆ : ಕೊಲೆಯ ಪ್ರಮುಖ ಆರೋಪಿ ಬಂಧನ