Peter Brook: (ಜು.3):’ದಿ ಮಹಾಭಾರತ’ ನಿರ್ದೇಶಕ ಪೀಟರ್ ಬ್ರೂಕ್ ನಿಧನ. (theater Artist) ಫ್ರಾನ್ಸ್ ಸಂಜಾತ ಪ್ರಸಿದ್ದ (Peter Brook) ರಂಗಭೂಮಿ ನಿರ್ದೇಶಕ ಪೀಟರ್ ಬ್ರೂಕ್ ಇಂದು ಇಹಲೋಕ ತ್ಯಜಿಸಿದ್ದಾರೆ.
20ನೇ ಶತಮಾನದ ಪ್ರತಿಭಾನ್ವಿತ ನಿರ್ದೇಶಕರಲ್ಲಿ ಒಬ್ಬರಾಗಿದ್ದ ಬ್ರೂಕ್, 90ನೇ ವಯಸ್ಸಿನಲ್ಲಿಯೂ ತಮ್ಮ ನಟನೆ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. 1985ರಲ್ಲಿ ಅವರು ನಿರ್ದೇಶಿಸಿದ್ದ 9 ಗಂಟೆಗಳ (The Mahabharata) ಹಿಂದೂ ಮಹಾಕಾವ್ಯ ‘ದಿ ಮಹಾಭಾರತ’ ವಿಶ್ವವ್ಯಾಪಿ ಜನಪ್ರಿಯವಾಗಿತ್ತು.
ಪೀಟರ್ ಬ್ರೂಕ್ ಅವರು 1970ರಲ್ಲಿ (Paris)ಪ್ಯಾರಿಸ್‌ನಲ್ಲಿ ನೆಲೆಸಿದ್ದ ವೇಳೆ ರಂಗಭೂಮಿ ಸಂಶೋಧನೆಗಾಗಿ (International Center) ಅಂತರರಾಷ್ಟ್ರೀಯ ಕೇಂದ್ರ ಸ್ಥಾಪಿಸಿದ್ದರು.

ಯಾರು ಈ ಪೀಟರ್ ಬ್ರೂಕ್?
1925ರ ಮಾರ್ಚ್ 21ರಂದು ಲಂಡನ್‌ನ (Landon) ಯಹೂದಿ ವಿಜ್ಞಾನಿಗಳ ಕುಟುಂಬದಲ್ಲಿ ನಿರ್ದೇಶಕ ಪೀಟರ್ ಬ್ರೂಕ್ ಜನಿಸಿದರು. ಲಂಡನ್ ವೆಸ್ಟ್ ಎಂಡ್‌ನಲ್ಲಿ ಉತ್ತಮ ನಿರ್ದೇಶಕ(director) ಎಂಬ ಮೆಚ್ಚುಗೆಗಳಿಸಿದ್ದರು.
1970ರಲ್ಲಿ ಪ್ಯಾರೀಸ್‌ಗೆ ತೆರಳಿದ (paris)ಪೀಟರ್ ಬ್ರೂಕ್ ಅವರು, ಹಲವು (Drama) ನಾಟಕಗಳನ್ನು ನಿರ್ದೇಶಿಸಿದ್ದರು. 1997ರಲ್ಲಿ ಲಂಡನ್‌ಗೆ ಮರಳಿದ್ದರು. ಇವರು ನಿರ್ದೇಶಿಸಿದ್ದ ಹಲವು ನಾಟಕಗಳಲ್ಲಿ ಪತ್ನಿ ನತಾಶಾ ಪ್ಯಾರಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು. ರಂಗಭೂಮಿಯ ಅತ್ಯಂತ ಪ್ರಭಾವಶಾಲಿ ಪಠ್ಯಗಳಲ್ಲಿ ಒಂದಾದ(The Empty Space) ‘ದಿ ಎಂಪ್ಟಿ ಸ್ಪೇಸ್’ ಅನ್ನು ಪೀಟರ್ ಬರೆದಿದ್ದಾರೆ.
ಇದನ್ನೂ ಓದಿ: Jobs in Ikea: ಬೆಂಗಳೂರಿನ ಐಕಿಯಾದಲ್ಲಿ ಭರ್ಜರಿ ಉದ್ಯೋಗಾವಕಾಶ! ಅರ್ಜಿ ಸಲ್ಲಿಸುವುದು ಹೇಗೆ?