Vijay Devarakonda:(ಜು.2): ವಿಜಯ್ ದೇವರಕೊಂಡ ನಾಯಕರಾಗಿರುವ (Vijay Deverakonda) ಪುರಿ ಜಗನ್ನಾಥ್ ಅಭಿನಯದ ‘ಲೈಗರ್’ ಚಿತ್ರದ ಫೋಟೋವೊಂದು (Liger Photo)ಬಿಡುಗಡೆಯಾಗಿದೆ.ಈ ಫೋಟೋದಲ್ಲಿ ವಿಜಯ್ ಅಮೀರ್ ಖಾನ್ ಅಭಿನಯದ ‘ಪಿಕೆ’ ಚಿತ್ರದ ಸ್ಟಿಲ್ ನಂತೆ ಬಟ್ಟೆ ಇಲ್ಲದೆ ಕಾಣಿಸಿಕೊಂಡಿದ್ದರು. ಈ ಬಗ್ಗೆ ಟ್ವಿಟ್ ಮಾಡಿರುವ (Tweet)ವಿಜಯ್, ಚಿತ್ರಕ್ಕಾಗಿ ನಾನು ದೈಹಿಕವಾಗಿ, ಮಾನಸಿಕವಾಗಿ ಎಲ್ಲವನ್ನೂ ನೀಡಿದ್ದೇನೆ.ಇದು ನನ್ನ ವೃತ್ತಿ ಜೀವನದ ಅತ್ಯಂತ ಸವಾಲಿನ ಪಾತ್ರ, ಎಂದು ಟ್ವಿಟ್ ಮಾಡಿದ್ದಾರೆ. ಈ ಚಿತ್ರ ಆಗಸ್ಟ್ 25 (Release) ರಂದು ಬಿಡುಗಡೆಯಾಗಲಿದೆ.
ವಿಜಯ್ ದೇವರಕೊಂಡ ಮತ್ತು (anany Pande)ಅನನ್ಯ ಪಾಂಡೆ ಕಾಂಬಿನೇಷನ್ ನ ಲೈಗರ್ ಸಿನಿಮಾದ ಪೋಟೋವೊಂದನ್ನು(Vijay Deverakonda) ವಿಜಯ್ ದೇವರಕೊಂಡ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ವಿಜಯ್ ಸಂಪೂರ್ಣ ಬೆತ್ತಲಾಗಿ, ಖಾಸಗಿ ಅಂಗಕ್ಕೆ ಹೂಗುಚ್ಚವನ್ನಿಟ್ಟು ಮುಚ್ಚಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗಿದ್ದು, (Viral)ನಟಿ ಅನನ್ಯ ಪಾಂಡೆ ಸೇರಿದಂತೆ ಹಲವರು ಕಲಾವಿದರು ಕಾಮೆಂಟ್ ಮಾಡಿದ್ದಾರೆ. ಸಮಂತಾ, ಅನುಷ್ಕಾ ಶೆಟ್ಟಿ ಮತ್ತು ಕರಣ್ ಜೋಹರ್ ಕೂಡ ವಿಭಿನ್ನವಾಗಿಯೇ ಪ್ರತಿಕ್ರಿಯಿಸಿದ್ದಾರೆ.
A Film that took my everything.
— Vijay Deverakonda (@TheDeverakonda) July 2, 2022
As a performance, Mentally, physically my most challenging role.
I give you everything!
Coming Soon#LIGER pic.twitter.com/ljyhK7b1e1
ವಿಜಯ್ ದೇವರಕೊಂಡ (Vijay Deverakonda) ಅವರ ಬೆತ್ತಲೆ ಫೋಟೋವನ್ನು ಶೇರ್ ಮಾಡಿರುವ ಅನನ್ಯ ಪಾಂಡೆ, ‘ ಬ್ರೀತ್ ಗಾಯ್ಸ್ ಬ್ರೀತ್, ದಿ ಟೆಂಪ್ರೆಚರ್ ಇಸ್ ರೇಸಿಂಗ್ ಆಲ್ ಓವರ್ ಇಂಡಿಯಾ ಟುಡೇ’ ಎಂದು ಬರೆದಿದ್ದಾರೆ. ಈ ಬೆತ್ತಲೆಯ ಫೋಟೋಗೆ ಭಾರತದಲ್ಲಿ ಇಂದು ತಾಪಮಾನ ಹೆಚ್ಚಾಗಿದೆ ಎಂದು ವಿಶ್ಲೇಷಿಸಿದ್ದಾರೆ. ಈ ಕಾಮೆಂಟ್ ಗೆ ಸಾಕಷ್ಟು ಜನರು ಪ್ರತಿಕ್ರಿಯೆ ಕೂಡ ನೀಡಿದ್ದಾರೆ.
ವಿಜಯ್ ಅವರ ಬೋಲ್ಡ್ (Vijay Deverakonda) ಅವತಾರ ಕಂಡು ನೆಟ್ಟಿಗರು ನಾನಾ ರೀತಿಯಲ್ಲಿ (Comments)ಪ್ರತಿಕ್ರಿಯಿಸುತ್ತಿದ್ದಾರೆ. ವಿಜಯ್ ಜೊತೆಗೆ ನಟಿಸಿರುವ ಅನನ್ಯಾ ಪಾಂಡೆ ಕೂಡಾ ಈ ಫೋಸ್ಟರ್ ಹಂಚಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ ಆಗಸ್ಟ್ 25 ರಂದು ತೆರೆಗೆ ಅಪ್ಪಳಿಸಿದೆ.