Pavithra Lokesh Vs Ramya:(ಜು.2): ನಟಿ ಪವಿತ್ರ ಲೋಕೇಶ್ ತೆಲುಗು ನಟ ನರೇಶ್ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಮತ್ತೆ ಆಗುತ್ತಿದೆ. ಈ ಮಧ್ಯೆ ನರೇಶ್ ಅವರ ಪತ್ನಿ ರಮ್ಯಾ ರಘುಪತಿ ಪವಿತ್ರ ಲೋಕೇಶ್ ಅವರಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ..
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ನರೇಶ್ ಪತ್ನಿ ರಮ್ಯಾ ರಘುಪತಿ ಯವರು, ನನ್ನ ಅತ್ತೆಯ (ನರೇಶ್ ತಾಯಿ ವಿಜಯ ನಿರ್ಮಲ) ಡೈಮಂಡ್ ಆಣೆ ಕ್ಲಾಸ್ ಈಗ ಪವಿತ್ರ ಲೋಕೇಶ್ ಅವರ ಕೊರಳಲ್ಲಿದೆ ಎಂದು ಹೇಳಿದ್ದಾರೆ.
ಹುಟ್ಟುಹಬ್ಬದ ದಿನದಂದು ಪವಿತ್ರ ಲೋಕೇಶ್ ಅವರ ಕೊರಳಲ್ಲಿ ಡೈಮಂಡ್ ನೆಕ್ಲೆಸ್ ಅನ್ನ ನೋಡಿದ್ದೆ ಅದು ನನ್ನ ಅತ್ತೆಯವರ ಒಡವೆ. ನನ್ನ ಅತ್ತೆ ಅವರ ಒಡವೆಯನ್ನ ಯಾರಿಗೂ ಕೊಡುತ್ತಿರಲಿಲ್ಲ ಆದರೆ ದುಡ್ಡು ಹಾಗೂ ಒಡವೆಗಳನ್ನ ತಂದು ಕೊಡುತ್ತಿದ್ದರು ಎಷ್ಟು ಜನರಿಗೆ ಬಂಗಾರ ಕೊಟ್ಟಿದ್ದಾರೆ ಎಂದು ಲೆಕ್ಕವೇ ಇಲ್ಲ ಅದರಲ್ಲೂ ನನ್ನ ಮನೆಯಲ್ಲಿ ಏನಿದೆ ಎಂದು ನನಗೆ ಗೊತ್ತಿದೆ ಹೀಗಾಗಿ ನರೇಶ್ ಅವರೇ ಪವಿತ್ರ ಲೋಕೇಶ್ ಅವರಿಗೆ ಒಡವೆ ಕೊಟ್ಟಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಇದಕ್ಕೆ ಪವಿತ್ರ ಲೋಕೇಶ್ ಅವರು ಕೂಡ ಉತ್ತರ ಕೊಟ್ಟಿದ್ದು, ನಾನು ದುಡಿಯುತ್ತಿದ್ದೆನೆ, ನನಗೆ ಬೇಕಾದ ವಸ್ತುಗಳನ್ನ ಖರೀದಿ ಮಾಡುವ ಶಕ್ತಿ ಇದೆ ಎಂದು ಹೇಳಿದಲ್ಲದೆ ನನಗೆ ಪ್ರಾಪರ್ಟಿ ಖರೀದಿ ಮಾಡುವಷ್ಟೋ ಶಕ್ತಿ ಇದೆ, ಈಗಾಗಲೇ ನನ್ನ ಹೆಸರಿನಲ್ಲಿ ಎರಡು ಫ್ಲಾಟ್ ಗಳಿದೆ ಬೇರೆಯವರ ದುಡ್ಡಿನಲ್ಲಿ ಬದುಕುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ನನ್ನ ಕಷ್ಟ ನರೇಶ್ ಅವರು ಕೇಳಿದ್ದಾರೆ ಹಾಗೆ ಅವರ ಕಷ್ಟವನ್ನು ನಾನು ಕೇಳಿದ್ದೇನೆ ನನ್ನ ಹತ್ತಿರ ಒಡವೆ ಕೊಂಡುಕೊಂಡಿದ್ದಕ್ಕೆ ಸಾಕ್ಷಿ ಇದೆ ಎಂದು ಪ್ರತ್ಯುತ್ತರ ನೀಡಿದ್ದಾರೆ.ಕಳೆದ ಎರಡು ವರ್ಷಗಳ ಹಿಂದೆ ಪವಿತ್ರ ಲೋಕೇಶ್ ಅವರು ಡೈಮಂಡಾ ಕ್ಲಾಸ್ ಧರಿಸಿರುವ ಬಗ್ಗೆ ನರೇಶ್ ಪತ್ನಿ ರಮ್ಯಾ ರಘುಪತಿ ಅವರು ಆರೋಪ ಮಾಡಿದ್ದಾರೆ
ಪವಿತ್ರ ಲೋಕೇಶ್ ಹಾಗೂ ನರೇಶ್ ಮದುವೆಯಾಗಿದ್ದಾರೆ , ಮದುವೆಯಾಗಲಿದ್ದಾರೆ ಎಂಬ ಗಾಸಿಪ್ಗಳು ಹಬ್ಬಿತ್ತು ಈ ನಡುವೆ ರಮ್ಯಾ ರಘುಪತಿ ಅವರು ಮಾಧ್ಯಮಗಳ ಮುಂದೆ ಬಂದು ನರೇಶ್ ಹಾಗೂ ಪವಿತ್ರ ಲೋಕೇಶ್ ಅವರ ಬಗ್ಗೆ ಮಾತನಾಡಿದ್ದಾರೆ.