ಅಮರಾವತಿ: (ಜು.2):Amaravathi Incident: ಪ್ರಮುಖ ಸಂಚುಕೋರ ಉಮೇಶ್ ಕೋಲ್ಹೆ ಕೊಲೆಯ ಮಾಸ್ಟರ್ ಮೈಂಡ್ ನನ್ನು ನಾಗ್ಪುರದಲ್ಲಿ ಬಂಧಿಸಲಾಗಿದೆ. ಬಂಧಿತನನ್ನು ನಾಗ್ಪುರದ ಎನ್ಜಿಒ ಮಾಲೀಕ ಇರ್ಫಾನ್ ಖಾನ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ವರದಿಗಳ ಪ್ರಕಾರ ಜೂನ್ 21ರಂದು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಕೊಲೆ ನಡೆದಿದೆ ರಾಜಸ್ಥಾನದ ಉದಯಪುರದಲ್ಲಿ ನಡೆದ ಕನ್ಹಯ್ಯ ಲಾಲ್ ಅವರ ಭೀಕರ ಹತ್ಯೆಗೂ ಮೊದಲು ಕೊಲೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 21 ರಂದು ಮಹಾರಾಷ್ಟ್ರದ ಅಮರಾವತಿ ನಗರದಲ್ಲಿ 54 ವರ್ಷದ ರಸಾಯನಶಾಸ್ತ್ರಜ್ಞನನ್ನು ಚೂರಿಯಿಂದ ಇರಿದು ಕೊಲ್ಲಲಾಯಿತು. ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಫೇಸ್ಬುಕ್ನಲ್ಲಿ ಪೋಸ್ಟ್ ಬರೆದ ನಂತರ ಮಹಾರಾಷ್ಟ್ರದಲ್ಲಿ ಕ್ರೂರ ಕೊಲೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಅವರು ಅಮರಾವತಿಯಲ್ಲಿ ಅಮಿತ್ ಮೆಡಿಕಲ್ ಸ್ಟೋರ್ ಎಂಬ ಹೆಸರಿನ ಔಷಧಿ ಅಂಗಡಿಯನ್ನು ನಡೆಸುತ್ತಿದ್ದರು.ಕೊಲ್ಹೆ ತನ್ನ ಅಂಗಡಿಯನ್ನು ಮುಚ್ಚಿದ ನಂತರ ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುತ್ತಿದ್ದಾಗ ರಾತ್ರಿ 10 ರಿಂದ 10.30 ರ ನಡುವೆ ಈ ಘಟನೆ ಸಂಭವಿಸಿದೆ. ಅವರ ಮಗ ಸಂಕೇತ್ (27) ಮತ್ತು ಅವರ ಪತ್ನಿ ವೈಷ್ಣವಿ ಬೇರೆ ವಾಹನದಲ್ಲಿ ಅವರೊಂದಿಗೆ ಹೋಗುತ್ತಿದ್ದರು. ಹತ್ಯೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸಲಿದೆ ಎಂದು ಗೃಹ ಸಚಿವಾಲಯದ ವಕ್ತಾರರು ಶನಿವಾರ ತಿಳಿಸಿದ್ದಾರೆ.
ವರದಿಗಳ ಪ್ರಕಾರ ಜೂನ್ 21ರಂದು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಕೊಲೆ ನಡೆದಿದೆ ರಾಜಸ್ಥಾನದ ಉದಯಪುರದಲ್ಲಿ ನಡೆದ ಕನ್ಹಯ್ಯ ಲಾಲ್ ಅವರ ಭೀಕರ ಹತ್ಯೆಗೂ ಮೊದಲು ಕೊಲೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಜೂನ್ 21 ರಂದು ಹತ್ಯೆಗೀಡಾದ ರಸಾಯನಶಾಸ್ತ್ರಜ್ಞ ಉಮೇಶ್ ಕೊಲ್ಹೆ ಅವರ ಹತ್ಯೆಯ ಹಿಂದಿನ ಪಿತೂರಿಯ ಬಗ್ಗೆ ಎನ್‌ಐಎ ತನಿಖೆ ನಡೆಸಲಿದೆ ಎಂದು ವಕ್ತಾರರು ಟ್ವೀಟ್ ಮಾಡಿದ್ದಾರೆ.
ಸಂಘಟನೆಗಳು ಮತ್ತು ಅಂತರರಾಷ್ಟ್ರೀಯ ಸಂಪರ್ಕಗಳ ಯಾವುದೇ ಪಾಲ್ಗೊಳ್ಳುವಿಕೆಯ ಬಗ್ಗೆ ಎನ್‌ಐಎ ಸಮಗ್ರ ತನಿಖೆ ನಡೆಸಲಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಘಟನೆ ಏನು?
ಉಮೇಶ್ ಕೊಲೆಯದ ನಂತರ ಮಗ ಸಂಕೇತ್ ಘಟನೆಯನ್ನು ವಿವರಿಸಿದ್ದು, ಜೂನ್ 21ರ ರಾತ್ರಿ 10 ಗಂಟೆಯಿಂದ 10:30ರ ನಡುವೆ ಪ್ರಭ ತ ಚೌಕದಿಂದ ಹೋಗುತ್ತಿದ್ದೆವು, ಆಗಸ್ಟೇ ನಾವು ಮಹಿಳಾ ಕಾಲೇಜು ನ್ಯೂ ಹೈಸ್ಕೂಲ್ ಮುಂದೆ ಬಂದಿದ್ದೆವು ಮೋಟರ್ ಸೈಕಲ್ ನಲ್ಲಿ ಬಂದ ಇಬ್ಬರೂ ನನ್ನ ತಂದೆಯ ಸ್ಕೂಟಿಯ ಮುಂದೆ ಬಂದು ಅಪ್ಪನ ಸ್ಕೂಟಿಯನ್ನು ನಿಲ್ಲಿಸಿ ಕತ್ತಿನ ಎಡಭಾಗದಲ್ಲಿ ಚಾಕುವಿನಿಂದ ಇರಿದಿದ್ದಾನೆ ಇದಾದ ನಂತರ ನನ್ನ ತಂದೆ ಅಲ್ಲಿಯೇ ಬಿದ್ದು ಒದ್ದಾಡುತ್ತಿದ್ದರು ತುಂಬಾ ರಕ್ತಸ್ರಾವವಾಗಿತ್ತು ಸ್ಕೂಟರ್ ನಿಲ್ಲಿಸಿ ಸಹಾಯಕ್ಕಾಗಿ ಕೂಗಲು ಪ್ರಾರಂಭಿಸಿದೆ ಮತ್ತೊಬ್ಬ ವ್ಯಕ್ತಿ ಬಂದಿದ್ದು ಮೂವರು ಬೈಕಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಹೇಳಿದ್ದಾನೆ.