Ramya Tweet War:ನನಗೆ ಅವಕಾಶ ಕೊಟ್ಟಿದ್ದು, ಬೆನ್ನೆಲುಬಾಗಿ ನಿಂತಿದ್ದು ರಾಹುಲ್ ಗಾಂಧಿ. ನನಗೆ ಅವಕಾಶ ನೀಡಲಾಗಿದೆ.ಬೆನ್ನೆಲುಬಾಗಿ ನಿಂತಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಂದು ಮಾಜಿ ಸಂಸದೆ ರಮ್ಯಾ ಸರಣಿ ಟ್ವೀಟ್ ಮಾಡಿದ್ದಾರೆ.
ರಮ್ಯಾ ಟ್ವೀಟ್ ವಾರ್ ಪ್ರಾರಂಭಿಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಟಾಂಗ್ ಕೊಟ್ಟಿದ್ದರು. ಈಗ ಮತ್ತೆ ಮುಂದುವರಿದ ಅವರು, ನನಗೆ ಅವಕಾಶ ಕೊಟ್ಟಿದ್ದು, ಬೆನ್ನೆಲುಬಾಗಿ ನಿಂತಿದ್ದು ರಾಹುಲ್ ಗಾಂಧಿ. ನನಗೆ ಅವಕಾಶ ನೀಡಲಾಗಿದೆ ಅಂತ ಯಾರದ್ರೂ ಹೇಳಿದ್ರೆ ಅವರು ಅವಕಾಶವಾದಿಗಳು ಎಂದು ಆಕ್ರೋಶ ಹೊರಹಾಕಿದ್ದಾರೆ.
ನಾನು ಓಡಿ ಹೋಗಿದ್ದೇನೆ ಅಂತಾ ಸುಳ್ಳು ಸುದ್ದಿ ಹರಡಿಸಿದ್ರು. ನನ್ನ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಲಾಯ್ತು. ನಾನು ಎಲ್ಲಿಯೂ ಓಡಿ ಹೋಗಿಲ್ಲ. ನನ್ನ ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿದೆ. ಕಾಂಗ್ರೆಸ್ ನಿಂದ 8 ಕೋಟಿ ಪಡೆದಿದ್ದೇನೆ ಅಂತಾ ಸುಳ್ಳುಸುದ್ದಿ ಹರಿಬಿಡಲಾಗಿದೆ.ಈ ಸುಳ್ಳು ಸುದ್ದಿಯಿಂದ ನನ್ನನ್ನು ಮುಕ್ತಗೊಳಿಸಿ. ಇದು ನೀವು ನನಗೆ ಮಾಡಬಹುದಾದ ಕನಿಷ್ಠ ಸಹಾಯ. ಇಲ್ಲದೇ ಹೋದರೆ ನಾನು ನನ್ನ ಜೀವನದುದ್ದಕ್ಕೂ ಈ ನಿಂದನೆ ಮತ್ತು ಟ್ರೋಲಿಂಗ್‍ನೊಂದಿಗೆ ಇರಬೇಕಾಗುತ್ತೆ ಎಂದು ವೇಣುಗೋಪಾಲ್ ಜೀ ಅವರನ್ನು ಕೇಳಿಕೊಂಡಿದ್ದಾರೆ.
If there’s anyone who gave me opportunities & stood by me it’s @RahulGandhi anyone else claiming to have ‘given’ me opportunities is an opportunist.These opportunists have only backstabbed & tried to suppress me.Everything you see on tv is a farce to conceal their devious mind https://t.co/L33fNS2M4N
— Divya Spandana/Ramya (@divyaspandana) May 12, 2022
ರಮ್ಯಾ ಟ್ವೀಟ್ ವಾರ್ ಅನ್ನು ಬಿಜೆಪಿ ಡಿಕೆ ಶಿವಕುಮಾರ್ ಅವರಿಗೆ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.ಟ್ವೀಟ್ ನಲ್ಲಿ ನೀನೇ ಸಾಕಿದ ಗಿಣಿ, ನಿನ್ನ ಮುದ್ದಿನ ಗಿಣಿ ಹದ್ದಾಗಿ ಕುಕ್ಕಿತಲ್ಲೋ ಇದು ಅಸಹಾಯಕ ಡಿಕೆಶಿ ಅವರ ಸದ್ಯದ ಪರಿಸ್ಥಿತಿ. ಡಿಕೆಶಿ ಅವರೇ ಬೆಳೆಸಿದ ರಮ್ಯ ಈಗ ಡಿಕೆಶಿಗೆ ಸಾಮಾಜಿಕ ಮಾಧ್ಯಮದಲ್ಲಿ ಬುದ್ಧಿಮಾತು ಹೇಳುತ್ತಿದ್ದಾರೆ ಎಂದು ರಮ್ಯ ಮಾಡಿರುವ ಟ್ವೀಟ್ ಫೋಟೋವನ್ನ ಬಳಸಿ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
Humble request to @kcvenugopalmp to please clarify with the media about this whenever you’re in Karnataka next. The least you can do for me Venugopal ji, so I don’t have to live with this abuse and trolling for the rest of my life.
— Divya Spandana/Ramya (@divyaspandana) May 12, 2022
"ನೀನೇ ಸಾಕಿದ ಗಿಣಿ, ನಿನ್ನ ಮುದ್ದಿನ ಗಿಣಿ, ಹದ್ದಾಗಿ ಕುಕ್ಕಿತ್ತಲ್ಲೋ", ಇದು #ಅಸಹಾಯಕಡಿಕೆಶಿ ಅವರ ಸದ್ಯದ ಸ್ಥಿತಿ.
— BJP Karnataka (@BJP4Karnataka) May 12, 2022
ಡಿಕೆಶಿ ಅವರೇ ಬೆಳೆಸಿದ ರಮ್ಯಾ ಈಗ ಡಿಕೆಶಿಗೆ ಸಾಮಾಜಿಕ ಮಾಧ್ಯಮದಲ್ಲಿ ಬುದ್ಧಿ ಮಾತು ಹೇಳುತ್ತಿದ್ದಾರೆ.
ರಮ್ಯಾ ಅವರನ್ನು #ಭ್ರಷ್ಟಾಧ್ಯಕ್ಷ ರ ವಿರುದ್ಧ ಛೂಬಿಟ್ಟಿದ್ದು #ಮೀರ್‌ಸಾದಿಕ್ ಅವರಿರಬಹುದೇ? pic.twitter.com/GUvkZsHQno