Karnataka Budget 2022- 23 Live: (ಮಾ.4) ಬಂದರು ಅಭಿವೃದ್ಧಿಗೆ 1,800 ಅನುದಾನ: ಅಭಿವೃದ್ಧಿ, ಕಡಲು ವ್ಯಾಪಾರಕ್ಕೆ ₹1,880 ಕೋಟಿ ಮೀಸಲಿಡಲಾಗುವುದು. 250 ಕೋಟಿರೂ ವೆಚ್ಚದಲ್ಲಿ ಅತ್ಯಾಧುನಿಕ ಮೀನುಗಾರಿಕಾ ಬಂದರು ನಿ್ರ್ಮಾಣ, ಉತ್ತರ ಕನ್ನಡ ಜಿಲ್ಲೆಯ ಮಾಜಾಳಿಯಲ್ಲಿ ಬಂದರು ನಿರ್ಮಾಣ, 350 ಕೋಟಿ ವೆಚ್ಚದಲ್ಲಿ ಮಂಗಳೂರು ಬಂದರು ವಿಸ್ತರಣೆ, ಕಾರವಾರದಲ್ಲಿ ಜಲಸಾರಿಗೆ, ಮೀನುಗಾರಿಕಾ ಸಂಸ್ಥೆ ಸ್ಥಾಪನೆ, ತದಡಿ-ಅಘನಾಶಿನಿ ಮಧ್ಯೆ ದೋಣಿ ಮಾರ್ಗ ನಿರ್ಮಾಣ ಮಾಡಲಾಗುವುದು ಎಂದು ಘೋಷಿಸಿದ್ದಾರೆ.
_____________
ಗ್ರಾಮೀಣ ರಸ್ತೆಗಳ ಸುಧಾರಣೆಗೆ ₹1,600 ಕೋಟಿ
2 ವರ್ಷದಲ್ಲಿ 25 ಲಕ್ಷ ಮನೆಗಳಿಗೆ ನೀರು ಸಂಪರ್ಕ ಒದಗಿಸಲಾಗುವುದು, ನಲ್ಲಿಗಳ ಮೂಲಕ ನೀರು ಸಂಪರ್ಕ ಒದಗಿಸಲಾಗುವುದು. ಕುಡಿಯುವ ನೀರು ಸಂಪರ್ಕಕ್ಕೆ 7 ಸಾವಿರ ಕೋಟಿ ರೂ. ಮೀಸಲಿಡಲಾಗಿದ್ದು, ಗ್ರಾಮೀಣ ಭಾಗದ ರಸ್ತೆಗಳ ಸುಧಾರಣೆಗೆ ₹1,600 ಕೋಟಿ ನೀಡಲಾಗುತ್ತಿದೆ. ಮಳೆಗಾಲದಲ್ಲಿ ಹಾನಿಯಾದ ರಸ್ತೆ ಅಭಿವೃದ್ಧಿಗೆ ₹300 ಕೋಟಿ, ಅಮೃತ್ ಗ್ರಾಮ ಪಂಚಾಯಿತಿ ಯೋಜನೆಗೆ ₹188 ಕೋಟಿ, 750 ಗ್ರಾ.ಪಂ.ಗಳಿಗೆ ತಲಾ 25 ಲಕ್ಷ ರೂಪಾಯಿ, ಪ್ರಸಕ್ತ ವರ್ಷದಲ್ಲಿ ರಾಜ್ಯದ 1000 ಕೆರೆಗಳ ಅಭಿವೃದ್ಧಿ, ತಲಾ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ, ಗ್ರಾಮ ಒನ್ ಯೋಜನೆ ರಾಜ್ಯಾದ್ಯಂತ ವಿಸ್ತರಣೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
_________________
ಕೃಷಿ ಜಮೀನು ಡ್ರೋನ್ ಸರ್ವೆಗೆ ₹287 ಕೋಟಿ ಅನುದಾನ ಘೋಷಣೆ.
ಪೋಲಿಸ್ ಗೃಹ ಯೋಜನೆಗೆ 250 ಕೋಟಿ ರೂ ಅನುದಾನ
ಪೊಲೀಸ್ ಗೃಹ ಯೋಜನೆಗೆ 250 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಲಾಗಿದೆ. 2ನೇ ಹಂತದಲ್ಲಿ 250 ಕೋಟಿ ರೂಪಾಯಿ ಮಿಸಲಿಡಲಾಗಿದ್ದು, ಮೊಬಿಲಿಟಿ ಯೋಜನೆಗೆ 50 ಕೋಟಿ ರೂ. ಅನುದಾನ ನೀಡಲಾಗಿದೆ. ರಾಜ್ಯದಲ್ಲಿ ನೂತನ KSRP ಮಹಿಳಾ ಕಂಪನಿ ಆರಂಭಿಸಲು ಯೋಜನೆ ರೂಪಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ವಿಮೆ ಮೊತ್ತ ಹೆಚ್ಚಳ ಮಾಡಲಾಗಿದ್ದು, 1 ಲಕ್ಷ ರೂಪಾಯಿಯಿಂದ 20 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಇನ್ನು ದಾವಣಗೆರೆಯಲ್ಲಿ SDRF ಆರಂಭಿಸಲಾಗುವುದು, ಕಾರಾಗೃಹದಲ್ಲಿ ಅತ್ಯಾಧುನಿಕ ಉಪಕರಣ ನೀಡುತ್ತೇವೆ, ಕಾರಾಗೃಹಗಳಲ್ಲಿ ಮೊಬೈಲ್ ಜಾಮರ್ ಅಳವಡಿಕೆ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನೂತನ ಕಾರಾಗೃಹ ಕಟ್ಟಡಕ್ಕೆ ಅನುಮತಿ ನೀಡಲಾಗಿದೆ.
_____________
ನೋಂದಣಿ ಕಚೇರಿಗಳ ಉನ್ನತೀಕರಣಕ್ಕೆ ₹406 ಕೋಟಿ,10 ಮಹಾನಗರ ಪಾಲಿಕೆ ವ್ಯಾಪ್ತಿಯ ದಾಖಲೆ ಸ್ಕ್ಯಾನಿಂಗ್ಗಾಗಿ 15 ಕೋಟಿ ರೂಪಾಯಿ ಮೀಸಲು. ಮುಜರಾಯಿ ಇಲಾಖೆ ವ್ಯಾಪ್ತಿಯ ದೇಗಲಗಳ ಸ್ವಾಯತ್ತತೆ ಹಾಗೂ ದೇಗುಲಗಳ ಅಭಿವೃದ್ಧಿಗೆ 168 ಕೋಟಿ ರೂಪಾಯಿ ಘೋಷಣೆ ಮಾಡಿದ ಸಿಎಂ.
ಶಿಕ್ಷಣ, ಆರೋಗ್ಯ,ಕೌಶಲ್ಯಾಭಿವೃದ್ಧಿ ಇಲಾಖೆಗಳಿಗೆ 6,329 ಕೋಟಿ
ಶಿಕ್ಷಣ, ಆರೋಗ್ಯ,ಕೌಶಲ್ಯಾಭಿವೃದ್ಧಿ ಮತ್ತು ವಿವಿಧ ಕಲ್ಯಾಣ ಇಲಾಖೆಗಳಿಗೆ 6,329 ಕೋಟಿ ಹೆಚ್ಚುವರಿ ಅನುದಾನ. ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ವಲಯಕ್ಕೆ 55,657 ಕೋಟಿ ಅನುದಾನ ಬೆಂಗಳೂರು ಸಮಗ್ರ ಅಭಿವೃದ್ಧಿ ಗೆ,8,409 ಕೋಟಿ ಅನುದಾನ ನೀಡಲಾಗಿದೆ. ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ವಲಯಕ್ಕೆ 3,012 ಕೋಟಿ, ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವಾ ವಲಯಕ್ಕೆ 56,710 ಕೋಟಿ ಸೇರಿದಂತೆ ಒಟ್ಟು 5 ವಲಯವಾರು ವಿಂಗಡಣೆಯ ಬಜೆಟ್ ಘೋಷಣೆ ಮಾಡಿದ್ದಾರೆ.
__________
ಕಟ್ಟಡ ಕಾರ್ಮಿಕರ ಶ್ರೇಯೋಭಿವೃದ್ಧಿಗೆ 2100 ಕೋಟಿ
ಕಟ್ಟಡ ಕಾರ್ಮಿಕರ ಶ್ರೇಯೋಭಿವೃದ್ಧಿಗೆ 2100 ಕೋಟಿ ಮೀಸಲು ಇಟ್ಟಿದ್ದು, ಕಟ್ಟಡ ಕಾರ್ಮಿಕರಿಗಾಗಿ 100 ಹೈಟೆಕ್ ಸಂಚಾರಿ ಕ್ಲಿನಿಕ್ ಆರಂಭ.
ರಿಯಾಯಿತಿ ಬಸ್ ಪಾಸ್ ಯೋಜನೆ, ಹುಬ್ಬಳ್ಳಿ & ದಾವಣಗೆರೆ ESI ಆಸ್ಪತ್ರೆಗಳ ಬೆಡ್ 100ಕ್ಕೆ ಹೆಚ್ಚಳ ಯೆಲ್ಲೊ ಬೋರ್ಡ್ ಡ್ರೈವರ್ ಮಕ್ಕಳಿಗಾಗಿ ವಿದ್ಯಾನಿಧಿ ಸ್ಕೀಮ್ ಹಾಗೂ ಡ್ರೈವರ್ಸ್ ಮಕ್ಕಳ ಆರೋಗ್ಯ ಸೌಲಭ್ಯಕ್ಕೂ ವಿಶೇಷ ಯೋಜನೆ ಘೋಷಿಸಿದ ಸಿಎಂ ಬೊಮ್ಮಾಯಿ
ಕಾಶಿಯಾತ್ರೆ ಕೈಗೊಳ್ಳುವವರಿಗೆ ₹5 ಸಾವಿರ ಸಹಾಯಧನ ಸುಮಾರು 30 ಸಾವಿರ ಯಾತ್ರಾರ್ಥಿಗಳಿಗೆ ಸಹಾಯಧನ,ಧರ್ಮಸ್ಥಳ, ಕುಕ್ಕೆ, ಕೊಲ್ಲೂರು, ತಿರುಪತಿ, ಮಂತ್ರಾಲಯ, ಮೇಲ್ಮರವತ್ತೂರುಗೆ ಪ್ಯಾಕೇಜ್ ಟ್ರಿಪ್ ಸೇವೆ ಆರಂಭ ಮಾಡಲಾಗುವುದು.
ಬೀದರ್, ಕಲಬುರಗಿ ಕೋಟೆಗಳು ಪುನರುಜ್ಜೀವನ ರಾಜ್ಯದ ಸ್ಮಾರಕಗಳನ್ನು ದತ್ತು ಪಡೆದು ಅಭಿವೃದ್ಧಿ, ಶ್ರೀಶೈಲದಲ್ಲಿ ₹85 ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸ , ಮೊದಲ ಹಂತದಲ್ಲಿ 45 ಕೋಟಿ ರೂಪಾಯಿ,
_______________
ಸಿಎಂ ಬಸವರಾಜ್ ಬೊಮ್ಮಾಯಿ ಅವರು ವಿವಿಧ ಕ್ಷೇತ್ರಗಳಿಗೆ ಅನುದಾನ ಘೋಷಿಸಿದ್ದಾರೆ. ಆಹಾರ ಇಲಾಖೆಗೆ – 2,288 ಕೋಟಿ ರೂ, ವಸತಿ ಇಲಾಖೆಗೆ – 3,594 ಕೋಟಿ ರೂಪಾಯಿ ಅನುದಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ – 4,713 ಕೋಟಿ ಅನುದಾನ ಕೃಷಿ ಮತ್ತು ತೋಟಗಾರಿಕೆ ಇಲಾಖೆ – 8,457 ಕೋಟಿ ರೂ ಅನುದಾನ, ,ಸಮಾಜ ಕಲ್ಯಾಣ ಇಲಾಖೆ – 9,389 ಕೋಟಿ ರೂ ಅನುದಾನ, ಲೋಕೋಪಯೋಗಿ ಇಲಾಖೆ – 10,447 ಕೋಟಿ ರೂ ಅನುದಾನ, ಒಳಾಡಳಿತ ಮತ್ತು ಸಾರಿಗೆ ಇಲಾಖೆ – 11,222 ಕೋಟಿ ರೂ ಅನುದಾನ, ಜಲ ಸಂಪನ್ಮೂಲ ಇಲಾಖೆ – 20,601 ಕೋಟಿ ರೂ ಅನುದಾನ , ಶಿಕ್ಷಣ ಇಲಾಖೆ – 31,980 ಕೋಟಿ ರೂಅನುದಾನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ – 17,325 ಕೋಟಿ ರೂಪಾಯಿ, ನಗರಾಭಿವೃದ್ಧಿ ಇಲಾಖೆ – 16,076 ಕೋಟಿ ರೂಪಾಯಿ ಅನುದಾನ. ಕಂದಾಯ ಇಲಾಖೆ – 16,388 ಕೋಟಿ ರೂಪಾಯಿ ಅನುದಾನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ – 13,982 ಕೋಟಿ ರೂಪಾಯಿ ಅನುದಾನ, ಇಂಧನ ಇಲಾಖೆ – 12,655 ಕೋಟಿ ರೂಅನುದಾನ ಘೋಷಣೆ ಮಾಡಿದ್ದಾರೆ.
______________
2,53,165 ಕೋಟಿ ರೂಗಳ ಬಜೆಟ್ ಮಂಡಿಸಲಿದ್ದಾರೆ ಸಿಎಂ ಬಸವರಾಜ್ ಬೊಮ್ಮಾಯಿ. ರಾಜ್ಯದ ಅಭಿವೃದ್ಧಿಗಾಗಿ ಪಂಚಸೂತ್ರಗಳನ್ನು ಹಾಕಿಕೊಂಡಿದ್ದು ಬಜೆಟ್ ವಿಂಗಡನೆ ಮಾಡಿದ್ದಾರೆ. ಇದರಲ್ಲಿ ಕೃಷಿಗೆ – 33,700 ಕೋಟಿ. -ಬೆಂಗಳೂರು ಅಭಿವೃದ್ಧಿಗೆ – 8,409 ಕೋಟಿ, ಸಂಸ್ಕೃತಿ, ಪರಂಪರೆ ಸಂರಕ್ಷಣೆ- 3,102 ಕೋಟಿ ಆದ್ಯತೆ ನೀಡಿ ಅನುದಾನ ಘೋಷಿಸಿದ್ದಾರೆ.
______________
ಕರ್ನಾಟಕ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಫೈಲ್ ಜೊತೆ ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಬೊಮ್ಮಾಯಿ.ಬಜೆಟ್ ಮಂಡನೆಗೂ ಮೊದಲು ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಆರಂಭವಾಗಿದೆ
______________
ಜೆಟ್ ಮೂಲಕ ಪ್ರಚಾರ: ಮೊದಲ ಬಾರಿಗೆ ಜೆಟ್ ಮೂಲಕ ಬಜೆಟ್ ಪ್ರಚಾರ ಮಾಡಿದ್ದಾರೆ.ವಿಧಾನ ಸೌಧ ಸುತ್ತ ಜೆಟ್ ಅನ್ನು ರೌಂಡ್ಸ್ ಹಾಕಿದ್ದಾರೆ. ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಕುಟುಂ ಸದಸ್ಯರು ವಿಧಾನಸೌಧಕ್ಕೆ ಆಗಮಿಸಿದ್ದಾರೆ.
______________
ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಚೊಚ್ಚಲ ಬಜೆಟ್ (Budget) ಮಂಡಿಸಲಿದ್ದಾರೆ. ಚೊಚ್ಚಲ ಬಜೆಟ್ ಮಂಡಿಸಲಿರುವ ಸಿಎಂ ಬೊಮ್ಮಾಯಿ ಅವರಿಗೆ ಹಣಕಾಸು ಇಲಾಖೆ ಅಧಿಕಾರಿಗಳು ಜೆಟ್ ಪ್ರತಿ ಹಸ್ತಾಂತರ ಮಾಡಿದ್ದಾರೆ. ರೇಸ್ ಕೋರ್ಸ್ ನಿವಾಸದಲ್ಲಿ 2022-23ನೇ ಸಾಲಿನ ಬಜೆಟ್ ಪುಸ್ತಕ ಪ್ರತಿ ಹಸ್ತಾಂತರ ಮಾಡಿದ್ದಾರೆ. ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಸ್ ಎನ್ ಪ್ರಸಾದ್, ಕಾರ್ಯದರ್ಶಿಗಳಾದ ಎಕ್ ರೂಪ್ ಕೌರ್, ಪಿ ಸಿ ಜಾಫರ್ ಅವರು ನೀಡಿದ್ದಾರೆ. ಈ ವೇಳೆ ಸಚಿವರಾದ ಗೋವಿಂದ ಕಾರಜೋಳ, ಸಿಸಿ ಪಾಟೀಲ್, ಬೈರತಿ ಬಸವರಾಜ ಉಪಸ್ಥಿತರಿದ್ದರು.