Russia Ukraine War: (ಮಾ.3): ರಷ್ಯಾ ಸೇನೆಯ ಮೇಜರ್ ಜನರಲ್ ಆಂಡ್ರೇ ಸುಖೋವೆಟ್ಸ್ಕಿರನ್ನು ಹತ್ಯೆಗೈದಿದ್ದೇವೆ ಎಂದು ಉಕ್ರೇನ್ ಮಾಹಿತಿ ನೀಡಿದೆ.
ವಿದೇಶಾಂಗ ಇಲಾಖೆಯ ಸಮಾಲೋಚನಾ ಸಭೆ ಮುಕ್ತಾಯವಾಗಿದ್ದು, ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಭಾರತೀಯರ ಏರ್ಲಿಫ್ಟ್ ಬಗ್ಗೆ ಸರ್ವ ಸಮ್ಮತ ನಿರ್ಧಾರಕ್ಕೆ ಬರಲಾಗಿದ್ದು, ಉಕ್ರೇನ್‌ನಲ್ಲಿ ಯುದ್ಧ ಹಿನ್ನೆಲೆ ಭಾರತದ ಕಾರ್ಯತಂತ್ರ ಮತ್ತು ಮಾನವೀಯ ನೆಲೆಯಲ್ಲಿ ಕೈಗೊಳ್ಳಬೇಕಾದ ಕಾರ್ಯದ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಸಭೆ ಬಳಿಕ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಹೇಳಿಕೆ ನೀಡಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದೆ. ಸದ್ಯ ಉಕ್ರೇನ್ ದೇಶಕ್ಕೆ ವಿಶ್ವಸಂಸ್ಥೆಯಿಂದ 1.5 ಬಿಲಿಯನ್ ಡಾಲರ್ ನೆರವು ನೀಡಲಾಗಿದೆ. ತುರ್ತು ಸಹಾಯಕ್ಕಾಗಿ ಉಕ್ರೇನ್‌ಗೆ ಯುಎನ್ ನೆರವು ನೀಡಿದೆ.ಉಕ್ರೇನ್ನ ಜನವಸತಿ ಪ್ರದೇಶಗಳನ್ನ ಗುರಿಯಾಗಿಸಿ ರಷ್ಯಾ ದಾಳಿ ಮುಂದುವರೆಸಿದೆ. ಮರಿಯುಪೋಲ್ ನಗರದಲ್ಲಿ ರಷ್ಯಾದಿಂದ ಶೆಲ್ ದಾಳಿ ನಡೆಯುತ್ತಿದೆ. ಖಾರ್ಕಿವ್, ಮರಿಯುಪೋಲ್, ಕೀವ್ನಲ್ಲಿ ರಷ್ಯಾ ದಾಳಿ ನಡೆಸುತ್ತಿದೆ.
ಇದನ್ನು ಓದಿ: Russia Ukraine War:ಉಕ್ರೇನ್‌ಗೆ ನೆರವಿನ ಹಸ್ತ ನೀಡಿದ ಭಾರತ: ಅಗತ್ಯ ವಸ್ತುಗಳ ಪೂರೈಕೆ