Russia Ukraine War: (ಮಾ.3): ಉಕ್ರೇನ್ನಲ್ಲಿದ್ದ 20 ಸಾವಿರ ಭಾರತೀಯ ವಿದ್ಯಾರ್ಥಿಗಳ ಪೈಕಿ 17 ಸಾವಿರ ಜನ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಆಗಿದ್ದಾರೆ. 3,000 ಭಾರತದ ವಿದ್ಯಾರ್ಥಿಗಳು ಉಕ್ರೇನ್ನಲ್ಲಿದ್ದಾರೆ ಎಂದು ನವದೆಹಲಿಯಲ್ಲಿ ವಿದೇಶಾಂಗ ಇಲಾಖೆ ವಕ್ತಾರ ಅರೀಂದಮ್ ಬಗಚಿ ಅವರು ನೀಡಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ ಹಿನ್ನೆಲೆಯಲ್ಲಿ ಭಾರತ ಉಕ್ರೇನ್‌ಗೆ ಮಾನವೀಯ ನೆರವು ನೀಡಲು ಮುಂದಾಗಿದೆ. ಉಕ್ರೇನ್‌ಗೆ ಔಷಧ, ಬ್ಲಾಂಕೆಟ್, ಟಾರ್ಪಾಲಿನ್, ಪರಿಹಾರ ಸಾಮಗ್ರಿ ಸೇರಿದಂತೆ ಇತರ ಅವಶ್ಯಕ ವಸ್ತುಗಳನ್ನು ಭಾರತದಿಂದ ರವಾನಿಸಿದೆ.

ಉಕ್ರೇನ್-ರಷ್ಯಾ ಮಧ್ಯೆ 8ನೇ ದಿನವೂ ಯುದ್ಧ ಮುಂದುವರಿದಿದ್ದು, ರಷ್ಯಾದ ಸರಟೋವ್ ಯುನಿಟ್‌ನ ಶೇ.80ರಷ್ಟು ಸೈನಿಕರ ಹತ್ಯೆ ಮಾಡಲಾಗಿದೆ ಎಂದು ಉಕ್ರೇನ್ ಹೇಳಿಕೊಂಡಿದೆ. ಮಾರ್ಚ್ 2ರವರೆಗೆ ರಷ್ಯಾ ಸೇನಾ ಪಡೆಯ 5,840 ಸೈನಿಕರ ಹತ್ಯೆ ಮಾಡಲಾಗಿದೆ. ರಷ್ಯಾದ 30 ಜೆಟ್, 31 ಹೆಲಿಕಾಪ್ಟರ್, 211 ಯುದ್ಧ ಟ್ಯಾಂಕರ್, 862 ಸೇನಾ ವಾಹನ, 2 ಹಡಗು ಧ್ವಂಸ ಮಾಡಿದ್ದೇವೆ ಎಂದು ಉಕ್ರೇನ್ ಹೇಳಿದೆ. ಆದರೆ ರಷ್ಯಾ ನೀಡಿರುವ ಅಂಕಿಅಂಶಗಳು ಇದಕ್ಕೆ ವ್ಯತಿರಿಕ್ತವಾಗಿದ್ದು, ತನ್ನ ಸೇನೆಯ 498 ಸೈನಿಕರು ಮೃತಪಟ್ಟಿದ್ದಾಗಿ ಹೇಳಿಕೊಂಡಿತ್ತು.
ನವೀನ್ ಮೃತದೇಹ ತರಿಸುವ ಪ್ರಯತ್ನ ಮಾಡುತ್ತಿದ್ದೇವೆ: ಬಿಜೆಪಿ ಶಾಸಕ ಅರವಿಂದ ಬೆಲ್ಲದ್
ಉಕ್ರೇನ್ನಿಂದ ವಿದ್ಯಾರ್ಥಿ ನವೀನ್ ಮೃತದೇಹ ತರುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಅರವಿಂದ ಬೆಲ್ಲದ್, ಅವರು, ವಿದೇಶಾಂಗ ಇಲಾಖೆ ಮೃತದೇಹ ತರುವ ಕೆಲಸ ಮಾಡುತ್ತಿದೆ. ಜೀವಂತವಾಗಿರುವವರನ್ನೇ ಏರ್ಲಿಫ್ಟ್ ಮಾಡುವುದು ಕಷ್ಟ. ಸಾಧ್ಯವಾದರೆ ನವೀನ್ ಮೃತದೇಹ ತರುವ ಕೆಲಸ ಆಗಲಿದೆ. ವಿಮಾನದಲ್ಲಿ ಮೃತದೇಹ ತರಲು ಹೆಚ್ಚು ಜಾಗ ಬೇಕು. ಮೃತದೇಹದ ಜಾಗದಲ್ಲಿ 8 ರಿಂದ 10 ಜನ ಬರಬಹುದು ಎಂದು ಹೇಳಿದ್ದಾರೆ.