ಬೆಂಗಳೂರು: (ಮಾ.2):Maha Shivarathri : ನಾಡಿನಾದ್ಯಂತ ಮಹಾಶಿವರಾತ್ರಿ ಹಬ್ಬದ ಸಂಭ್ರಮ ಸಡಗರ ಮನೆ ಮಾಡಿದೆ. ರಾಜ್ಯದ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಮಾಡಿ ದೇವರಿಗೆ ಪೂಜೆ ಸಲ್ಲಿಸಲಾಗುತ್ತಿದೆ.
ಇನ್ನೂ ಮಹಾಶಿವರಾತ್ರಿ ಹಬ್ಬವನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿಯೂ ಆಚರಿಸಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೈದಿಗಳು ಭಕ್ತಿ ಪೂರ್ವಕವಾಗಿ ಮಹಾಶಿವರಾತ್ರಿ ಹಬ್ಬವನ್ನಾ ಆಚರಣೆ ಮಾಡಿದ್ದಾರೆ.
ಶಿವನಿಗೆ ವಿವಿಧ ಬಗೆಯ ಹೂವಿನ ಅಲಂಕಾರ ಮಾಡಿ ಭಕ್ತಿ ಪೂರ್ವಕವಾಗಿ ನಮನ ಸಲ್ಲಿಸಿದ್ದಾರೆ.ಜೈಲಿನ ಆವರಣದಲ್ಲಿರುವ ದೇವಸ್ಥಾನದ ಮುಂದೆ ಸಜಾಬಂಧಿಗಳು ಒಗ್ಗೂಡಿ ಹಾರ್ಮೋನಿಯಂ ನುಡಿಸಿ ಢಮರು ಭಾರಿಸಿ ದೇವರ ಶ್ಲೋಕ ಪಠಿಸಿದ್ದು ವಿಶೇಷವಾಗಿತ್ತು.
ಪ್ರತಿವರ್ಷವೂ ಶಿವರಾತ್ರಿ ಹಬ್ಬವನ್ನಾ ಪರಪ್ಪನ ಅಗ್ರಹಾರದಲ್ಲಿ ಆಚರಿಸಲಾಗ್ತಿದ್ದು, ಈ ವರ್ಷವು ಜೈಲುವಾಸಿಗಳು ಸಡಗರ ಸಂಭ್ರಮದಿಂದ ಶಿವರಾತ್ರಿ ಹಬ್ಬ ಆಚರಿಸಿದರು.
Fire in Apartment: ಬಾಣಸವಾಡಿ ಅಪಾರ್ಟ್ಮೆಂಟ್ ನಲ್ಲಿ ಬೆಂಕಿ ಅವಗಢ – ಲಕ್ಷಾಂತರ ರೂಪಾಯಿ ಬೆಲೆಯ ಪಿಠೋಪಕರಣ ಬೆಂಕಿಗಾಹುತಿ
ಬೆಂಗಳೂರು: (ಮಾ.2): Fire in Apartment: ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್‌ಮೆಂಟ್ ವೊಂದರ ಎರಡನೇ ಮಹಡಿಯಲ್ಲಿ ನಿನ್ನೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಘಟನೆಯಲ್ಲಿ ಸಾವು-ನೋವು ಸಂಭವಿಸಿಲ್ಲ. ಆದರೆ ಲಕ್ಷಾಂತರ ರೂಪಾಯಿ ಪೀಠೋಪಕರಣಗಳು ಅಗ್ನಿ ಆಹುತಿಯಾಗಿವೆ.

ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕಣ್ಣಳತೆ ದೂರದಲ್ಲಿರುವ ಸನ್ಸರ್ ಅಪಾರ್ಟ್ ಮೆಂಟ್ ನ ಎರಡನೇ ಮಹಡಿಯಲ್ಲಿ ಏಕಾಏಕಿ ಬೆಂಕಿ ಕಾಣಸಿಕೊಂಡಿದೆ. ಕ್ಷಣಾರ್ಧದಲ್ಲಿ ಅಗ್ನಿ ದೊಡ್ಡದಾಗಿ ವಿಸ್ತರಿಸುತ್ತಿದ್ದಂತೆ ಮನೆಯವರು ಹಾಗೂ ನೆರೆಮನೆಯವರು ಎಚ್ಚೆತ್ತುಕೊಂಡು ಮನೆಯಿಂದ ಹೊರಬಂದಿದ್ದಾರೆ.
ಈ ಸಂಬಂಧ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಮೂರು ಅಗ್ನಿಶಾಮಕದಳ ವಾಹನ ದೌಡಾಯಿಸಿ ಅಗ್ನಿಯನ್ನು ನಂದಿಸಿದೆ.
ಬೆಂಕಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದರಿಂದ ಮನೆಯಲ್ಲಿದ್ದ ಬಹುತೇಕ ಪೀಠೋಪಕರಣಗಳು ಸೇರಿದಂತೆ ಇನ್ನಿತರ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ದುರ್ಘಟನೆಗೆ ಶಾಕ್ ಸರ್ಕ್ಯೂಟ್ ಕಾತಣ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಇದನ್ನು ಓದಿ:Russia Ukraine War: ಟಿವಿ ಟವರ್ ಮೇಲೆ ದಾಳಿ: ಚಾನೆಲ್ ಪ್ರಸಾರ ಸ್ಥಗಿತ; ದಾಳಿಯಲ್ಲಿ ಐವರು ಮೃತ