Russia Ukraine Crisis: (ಮಾ.2):ಉಕ್ರೇನ್‌ನಲ್ಲಿ ನವೀನ್ ನಂತರ ಭಾರತದ ಮತ್ತೊರ್ವ ವಿದ್ಯಾರ್ಥಿ ಮೃತ ಪಟ್ಟಿದ್ದಾರೆ. ಪಂಜಾಬ್ ಮೂಲದ ಚಂದನ್ ಜಿಂದಾಲ್ ಉಕ್ರೇನ್ ನಲ್ಲಿ ಸಾವನ್ನಪ್ಪಿದ್ದಾರೆ. ಈತ ಉಕ್ರೇನ್‌ನಲ್ಲಿರುವ ವಿನ್ನಿಟ್ಸಿಯಾ ಮೆಮೋರಿಯಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ವೈದ್ಯಕೀಯ ಕೋರ್ಸ್ ಮಾಡುತ್ತಿದ್ದ ಎನ್ನಲಾಗಿದ್ದು. ರಷ್ಯಾ ದಾಳಿಯಿಂದ ಮೃತ ಪಟ್ಟಿಲ್ಲ ಎಂಬ ಮಾಹಿತಿ ಸಿಕ್ಕಿದ್ದು, ಚಂದನ್ಗೆ ಇಸ್ಕೆಮಿಕ್ ಸ್ಟ್ರೋಕ್ ಆಗಿತ್ತು ಎನ್ನಲಾಗಿದೆ. ಮಿದುಳಿಗೆ ರಕ್ತ ಸಂಚಾರ ಆಗದೆ ಸ್ಟ್ರೋಕ್ ಆಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಹೊರಬರಬೇಕಿದೆ.
.