Actor Chetan: (ಮಾ.2): ನಟ, ಸಾಮಾಜಿಕ ಹೋರಾಟಗಾರ ಚೇತನ್ ಅವರನ್ನು ಅಮೆರಿಕಾಗೆ ಗಡಿಪಾರು ಮಾಡುವಂತೆ ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಯಿಂದ ಎಡಿಜಿಪಿ ಪ್ರತಾಪ್ ರೆಡ್ಡಿ ಮೂಲಕ ಗೃಹಮಂತ್ರಿ ಕಛೇರಿಯ ಮುಖ್ಯ ಕಾರ್ಯದರ್ಶಿಗೆ ಶಿಫಾರಸ್ಸು ಪತ್ರ ಬರೆದಿದ್ದಾರೆ
ಸಮುದಾಯ ಒಂದರ ಅವಹೇಳನಕ್ಕೆ ಸಂಬಂಧಿಸಿದಂತೆ ಚೇತನ್ ಅವರ ಮೇಲೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಚೇತನ್ ಸಮಾಜದಲ್ಲಿ ಶಾಂತಿ ಕದಡುವ ಯತ್ನ ಮಾಡುತ್ತಿದ್ದಾರೆ ಎಂದು ಈ ಕುರಿತು ತನಿಖೆ ನಡೆಸಿದ ಪೊಲೀಸ್ ಇಲಾಖೆ ತಿಳಿಸಿತ್ತು. ಇವೆಲ್ಲದರ ಮಧ್ಯ ನಟ ಚೇತನ್ ಅವರನ್ನು ಅಮೆರಿಕಾಗೆ ಗಡಿಪಾರು ಮಾಡುವಂತೆ ಶಿಫಾರಸ್ಸು ಮಾಡಿದ್ದಾರೆ.
ಮೈಸೂರಿನವರಾದ ಚೇತನ್ ಕುಟುಂಬ ಅಮೆರಿಕಾದಲ್ಲಿ ಪ್ರಸ್ತುತ ವಾಸವಾಗಿದ್ದಾರೆ. ಆದರೆ ಚೇತನ್ ಅವರು ಅಮೆರಿಕಾದಲ್ಲೇ ಹುಟ್ಟಿ ಬೆಳೆದಿದ್ದಾರೆ ಜೊತೆಗೆ ಅಮೇರಿಕಾ ಪೌರತ್ವ ಪಡೆದಿದ್ದಾರೆ. ಆದ್ದರಿಂದ ಚೇತನ್ ಅವರನ್ನು ಅಮೆರಿಕಾಗೆ ಗಡಿಪಾರು ಮಾಡುವಂತೆ ಶಿಫಾರಸ್ಸಿನಲ್ಲಿ ಉಲ್ಲೇಖಿಸಲಾಗಿದೆ.
ನಟ ಚೇತನ್ ಅವರು ಸಾಮಾಜಿಕ ಕೆಲಸದ ಮಧ್ಯೆ ಕನ್ನಡ ಹಾಗೂ ತೆಲಗು ಭಾಷೆಯ ಸಿನಿಮಾದಲ್ಲಿ ನಟಿಸುತ್ತಿದ್ದು, ಗಡಿಪಾರು ವಿಷಯ ಕೇಳಿ ಬಂಡವಾಳವನ್ನು ನಿರ್ಮಾಪಕರು ಆತಂಕ ವ್ಯಕ್ತಪಡಿಸಿದ್ದಾರೆ. ಚೇತನ್ ಅವರ ಸಿನಿಮಾ ಬಿಡುಗಡೆಗೆ ಸಿದ್ಧವಾಗಿರುವಾಗ ಅಮೆರಿಕಾಗೆ ಗಡಿಪಾರಾದರೆ, ಸಿನಿಮಾಗಳ ಗತಿಯೇನು? ಎನ್ನುವ ಆತಂಕ ನಿರ್ಮಾಪಕರದ್ದಾಗಿದೆ.
ಚೇತನ್ ಹೇಳಿದ್ದೇನು?
ತಮ್ಮನ್ನು ಗಡಿಪಾರು ಮಾಡುವಂತೆ ಶಿಫಾರಸ್ಸು ಮಾಡಿರುವ ವಿಷಯ ಗೊತ್ತಿಲ್ಲ. ವಕೀಲರ ಗಮನಕ್ಕೂ ಬಂದಿಲ್ಲ ಎಂದಿದ್ದಾರೆ. ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಹೋರಾಟ ನಿರಂತರವಾಗಿ ಇರಲಿದೆ ಎಂದು ಹೇಳಿದ್ದಾರೆ. ನನಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದ್ದಾರೆ.