Russia Ukraine War: (ಮಾ.1): ತನ್ನ ಪ್ರದೇಶಗಳ ಮೇಲಿನ ರಷ್ಯಾದ ದಾಳಿಯ ನಂತರ ಉಕ್ರೇನ್ ನಲ್ಲಿ ಬಿಗಡಾಯಿಸುತ್ತಿರುವ ಸನ್ನಿವೇಶಕ್ಕೆ ಸಂಬಂಧಿಸಿದಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೇರ್ಮೆನ್ ಒ.ಎಂ.ಎ.ಸಲಾಂ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ರಷ್ಯಾ ದಾಳಿಯ ನಂತರ ಉಕ್ರೇನ್ ನಿಂದ ವರದಿಯಾಗುತ್ತಿರುವ ನಾಗರಿಕರ ಮತ್ತು ಸೈನಿಕರ ಸಾವು-ನೋವುಗಳು ಅತ್ಯಂತ ದುರದೃಷ್ಟಕರವಾಗಿದೆ. ಇದು ವಿಸ್ತರಣಾವಾದಿ ಮಹತ್ವಾಕಾಂಕ್ಷೆಗಳಿಂದ ಪ್ರೇರಿತವಾದ ರಷ್ಯಾದ ಮತ್ತೊಂದು ಕ್ರೂರ ಸೇನಾ ಕಾರ್ಯಾಚರಣೆಯಾಗಿದ್ದು, ಇದು ಸಂಭಾವ್ಯ ರೂಪದಲ್ಲಿ ಹರಡಬಹುದು ಮತ್ತು ಜಗತ್ತನ್ನು ಅರಾಜಕತೆಗೆ ತಳ್ಳಬಹುದು.
ಎಂದಿನಂತೆ ಇದೀಗ, ಸಾರ್ವಭೌಮ ರಾಷ್ಟ್ರದ ಮೇಲಿನ ದಾಳಿಯನ್ನು ಸಮರ್ಥಿಸಲು ಭದ್ರತಾ ಕಾರಣಗಳನ್ನು ಬಳಸಲಾಗುತ್ತಿದೆ. ರಷ್ಯಾ ಮತ್ತು ಅಮೆರಿಕಾದಂತಹ ಬಲಿಷ್ಠ ರಾಷ್ಟ್ರಗಳು ಆರ್ಥಿಕ ಮತ್ತು ಸೈನಿಕ ಕಾರಣಗಳಿಗಾಗಿ ಬಡ ರಾಷ್ಟ್ರಗಳ ಮೇಲೆ ದಾಳಿ ನಡೆಸಿ ಅವುಗಳನ್ನು ನಾಶಪಡಿಸಿದಾಗಲೂ ಇದೇ ರೀತಿಯ ನೆಪಗಳನ್ನು ಬಳಸಲಾಗುತ್ತಿತ್ತು.

ಜಗತ್ತು ಮತ್ತು ಜಾಗತಿಕ ಸಮುದಾಯಕ್ಕೆ ಜಗತ್ತಿನಾದ್ಯಂತ ಲಕ್ಷಾಂತರ ಜೀವಗಳನ್ನು ಬಲಿ ಪಡೆದ ಮತ್ತು ಲಕ್ಷಾಂತರ ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಇಂತಹ ಯಾವುದೇ ಯುದ್ಧಗಳನ್ನು ತಡೆಯಲು ಸಾಧ್ಯವಾಗಲಿಲ್ಲ. ಈ ನೈತಿಕ ಮತ್ತು ರಾಜಕೀಯ ವೈಫಲ್ಯಗಳೇ ಜಗತ್ತನ್ನು ಮತ್ತೊಂದು ಯುದ್ಧದ ಅಂಚಿಗೆ ತಂದು ನಿಲ್ಲಿಸಿಬಿಟ್ಟಿದೆ. ಪಾಪ್ಯುಲರ್ ಫ್ರಂಟ್ ಈ ರೀತಿಯ ಎಲ್ಲಾ ವಿಸ್ತರಣಾವಾದಿ ನೀತಿಗಳನ್ನು ಖಂಡಿಸುತ್ತದೆ.
ಪರಿಸ್ಥಿತಿ ಬೇಗನೆ ನಿಯಂತ್ರಣಕ್ಕೆ ಬರಲಿದೆ ಮತ್ತು ಮತ್ತೊಂದು ರಕ್ತಪಾತದ ದಾಳಿಯಿಂದ ರಷ್ಯಾ ಹಿಂದೆ ಸರಿಯಲಿದೆ ಎಂಬ ಆಶಾವಾದವನ್ನು ಪಾಪ್ಯುಲರ್ ಫ್ರಂಟ್ ವ್ಯಕ್ತಪಡಿಸುತ್ತದೆ. ನಮ್ಮ ಪ್ರಾರ್ಥನೆ ತೀವ್ರ ಭೀತಿಯಿಂದ ಬದುಕುತ್ತಿರುವ ಉಕ್ರೇನ್ ಜನರೊಂದಿಗಿದೆ.
ಯುದ್ಧ ವಲಯದಲ್ಲಿ ಸಿಲುಕಿಕೊಂಡಿರುವ ಭಾರತೀಯ ನಾಗರಿಕರ ಸುರಕ್ಷಿತ ಮರಳುವಿಕೆಯನ್ನು ಭಾರತ ಸರಕಾರವು ಖಾತರಿಪಡಿಸಬೇಕೆಂದೂ ಪಾಪ್ಯುಲರ್ ಫ್ರಂಟ್ ಆಗ್ರಹಿಸುತ್ತದೆ.