Actress Amulya Jagadish: (ಮಾ.1): ಸ್ಯಾಂಡಲ್ವುಡ್ ನಟಿ ಅಮೂಲ್ಯ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ನಮಗೆ ಅವಳಿ ಮಕ್ಕಳು. ಎರಡೂ ಗಂಡು ಮಕ್ಕಳು. ಅಮ್ಮ, ಮಕ್ಕಳು ಆರಾಮಾಗಿದ್ದಾರೆ. ಎಲ್ಲರ ಪ್ರೀತಿ ಹಾರೈಕೆಗೆ ಧನ್ಯವಾದಗಳು” ಎಂದು ಪತಿ ಜಗದೀಶ್ ಆರ್ ಚಂದ್ರ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಫೇಸ್ಬುಕ್ನಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, ಈ ಪಯಣದಲ್ಲಿ ಜತೆ ನಿಂತ ಎಲ್ಲರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಅಮೂಲ್ಯ ಅವರು ಜಯನಗರದ ಕ್ಲೈಡ್ ನೈಟ್ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ 11.45ಕ್ಕೆ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸ್ಯಾಂಡಲ್ವುಡ್ ನಟಿಯರಾದ ಆಶಿಕಾ ರಂಗನಾಥ್, ಅದ್ವಿತಿ ಶೆಟ್ಟಿ, ಹರ್ಷಿಕಾ ಪೂಣಚ್ಚ, ಸೋನು ಗೌಡ ಮೊದಲಾದವರು ದಂಪತಿಗೆ ಶುಭಾಶಯ ತಿಳಿಸಿದ್ದಾರೆ.