ಚಿಕ್ಕಮಗಳೂರು:(ಫೆ.28) Sump Incident: ನಾಯಿ ಮರಿಗೆ ಸ್ನಾನ ಮಾಡಿಸಲು ಹೋಗಿ ಸಂಪ್ ಒಳಗೆ ಬಿದ್ದು ಒಂದು ವರ್ಷದ ಮಗು ಪ್ರಾಣ ಕಳೆದುಕೊಂಡಿರುವ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕೂವೆ ಗ್ರಾಮದ ಕಾಫಿ ಎಸ್ಟೇಟ್ ನಲ್ಲಿ ನಡೆದಿದೆ.
ತಂದೆ ತಾಯಿರರಿಬ್ಬರು ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗಿರುವ ವೇಳೆ ಈ ಘಟನೆ ನಡೆದಿದೆ. ನಾಯಿ ಮರಿಯೊಂದನ್ನ ಸಂಪ್ ಬಳಿ ಸ್ನಾನ ಮಾಡಿಸಲು ಹೋಗಿ ತಾನೇ ಸಂಪಿಗೆ ಬಿದ್ದದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೂವೆ ಗ್ರಾಮದ ಇಂದ್ರಾವತಿ ಕಾಫಿ ಎಸ್ಟೇಟ್ನಲ್ಲಿದ್ದ ನೀರಿನ ಸಂಪ್, ಮುದ್ದು ಕಂದಮ್ಮನ ಜೀವವನ್ನ ತೆಗೆದಿದೆ. ತಂದೆ-ತಾಯಿ ಕಾಫಿ ತೋಟದಲ್ಲಿ ಕೆಲಸಕ್ಕೆ ಹೋಗಿದ್ದಾಗ ಮನೆಯ ಪಕ್ಕದ ಮತ್ತೊಂದು ಮಗುವಿನೊಂದಿಗೆ ಆಟವಾಡಿಕೊಂಡಿದ್ದ ಪ್ರಾರ್ಥನಾ, ಸಂಪ್ ಬಳಿ ಚಿಕ್ಕ ನಾಯಿಮರಿಯೊಂದನ್ನ ಕರೆದುಕೊಂಡು ಹೋಗಿದ್ದಾಳೆ. ಆ ನಾಯಿ ಮರಿಗೆ ಸ್ನಾನ ಮಾಡಿಸಲು ಹೋದಾಗಕಾಲು ಜಾರಿ ಸಂಪ್ಗೆ 7 ವರ್ಷದ ಪ್ರಾರ್ಥನಾ ಬಿದ್ದಿದ್ದಾಳೆ.
ಸುಮಾರು 15 ಅಡಿ ಆಳವಿರುವ ಸಂಪ್ಗೆ ಬಿದ್ದಾಗ, ಪಕ್ಕದಲ್ಲಿದ್ದ ಪುಟ್ಟ ಹುಡುಗಿ ಮನೆಗೆ ಓಡಿ ಹೋಗಿದ್ದಾಳೆ. ಎಲ್ಲರೂ ಸಂಪ್ ಬಳಿ ಬರುವಷ್ಟರಲ್ಲಿ ಪುಟ್ಟ ಕಂದಮ್ಮನ ಪ್ರಾಣ ಹಾರಿಹೋಗಿದೆ.
ಎಸ್ಟೇಟ್ ನವರ ಬೇಜವಾಬ್ದಾರಿತನದಿಂದ ಮಗುವಿನ ಪ್ರಾಣ ಹೋಗಿದೆ. ಇನ್ನು ಪ್ರಾರ್ಥನಾ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟದೆ. ಸಂಪ್ ಬಹಳಾ ಆಳವಾಗಿದ್ದೂ ಅದನ್ನು ಮುಚ್ಚದೇ ಇರುವುರಿಂದ ಹೀಗೆ ಆಗಿದೆ.ಗೀತಾ-ಶೇಷಪ್ಪ ದಂಪತಿಗೆ ಪ್ರಾರ್ಥನಾ ಸೇರಿದಂತೆ ಮೂವರು ಮಕ್ಕಳು ಇದ್ದಾರೆ. ಇದರಲ್ಲಿ ಇಬ್ಬರು ಗಂಡು ಮಕ್ಕಳು, ಅವರಿಬ್ಬರು ಕಾಲೇಜು ವ್ಯಾಸಂಗ ಮಾಡುತ್ತಿದ್ದಾರೆ.
ಇದನ್ನು ಓದಿ: Manipur Assembly Election: ಕರ್ತವ್ಯನಿರತ ಪೋಲಿಸ್ ಅಧಿಕಾರಿ ಗುಂಡು ಹಾರಿಸಿಕೊಂಡು ಮೃತ್ಯು