ಮಣಿಪುರ (ಫೆ.28): Manipur Assembly Election: ಮಣಿಪುರದಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದ್ದ ವೇಳೆ ಅವಗಢ ನಡೆದಿದೆ. ವಿಧಾನಸಭೆ ಮೊದಲ ಹಂತದ ಚುನಾವಣೆಯಲ್ಲಿ ಚುರಚಾಂದ್ಪುರ ತಿಪೈಮುಖ್ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ನವೋರೆಮ್ ಇಬೋಚೌಬಾ ಎಂಬುವರು ಗುಂಡೇಟಿನಿಂದ ಮೃತಪಟ್ಟಿದ್ದಾರೆ. ಮೃತ ಪೊಲೀಸ್ ಅಧಿಕಾರಿ ಕಕ್ಚಿಂಗ್ ಜಿಲ್ಲೆಯವರು ಎಂದು ಹೇಳಲಾಗಿದೆ.
ನವೋರೆಮ್ ಇಬೋಚೌಬಾ ಅವರು ಹಿಡಿದಿದ್ದ ಬಂದೂಕಿನಿಂದ ಆಕಸ್ಮಿಕವಾಗಿ ಫೈರ್ ಆಗಿದೆ. ತಿಳಿಯದೆ ಆಗಿದ ಅವಗಢದಿಂದ ಮೃತಪಟ್ಟಿದ್ದಾರೆ. ತಾವು ಕೈಯಲ್ಲಿ ಹಿಡಿದಿದ್ದ ಬಂದೂಕಿನಿಂದ ಆಕಸ್ಮಿಕವಾಗಿ ತಮಗೇ ಫೈರಿಂಗ್ ಮಾಡಿಕೊಂಡು ಮೃತಪಟ್ಟಿದ್ದಾಗಿ ಮುಖ್ಯ ಚುನಾವಣಾಧಿಕಾರಿ ರಾಜೇಶ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ

ಕಾಂಗ್ರೆಸ್ ಬಿಜೆಪಿ ನಡುವೆ ಸಂಘರ್ಷ
ಬೆಳಗ್ಗೆ 7ಗಂಟೆಯಿಂದ ಮಣಿಪುರದಲ್ಲಿ ಮತದಾನ ಶುರುವಾಗಿದ್ದು, ಮಧ್ಯಾಹ್ನ 3ಗಂಟೆ ಹೊತ್ತಿಗೆ 67.53ರಷ್ಟು ಮತಚಲಾವಣೆಯಾಗಿತ್ತು. ಮುಂದಿನ ಮಾರ್ಚ್ 5ಕ್ಕೆ ಎರಡನೇ ಹಂತದ ಮತದಾನ ನಡೆದಲಿದೆ. ಮಾರ್ಚ್ 10ಕ್ಕೆ ಮತ ಎಣಿಕೆ ನಡೆಯಲಿದೆ. ಇಂದು ಬೆಳಗ್ಗೆ ಚುರ್ಚಾಂದ್ಪುರ ಜಿಲ್ಲೆಯಲ್ಲಿ ಕೂಡ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಕಾರ್ಯಕರ್ತರ ನಡುವೆ ಸಂಘರ್ಷಉಂಟಾಗಿ ಮತ ಹಾಕುವ ಇವಿಎಂ ಮಷಿನ್ ಧ್ವಂಸ ಮಾಡಿದ್ದಾರೆ.
ಇದನ್ನೂ ಓದಿ: ಅಕ್ರಮವಾಗಿ ಗಾಂಜ ಮಾರಟ ಮಾಡುತ್ತಿದ್ದ ಖದೀಮರು ಅರೆಸ್ಟ್ | Ganja Case | Secular Tv