ಬೆಂಗಳೂರು: (ಫೆ.28) ನೆರೆ ರಾಜ್ಯದಿಂದ ಮಾದಕ ವಸ್ತುಗಳನ್ನು ತಂದು ಪೊದೆಗಳಲ್ಲಿ ಬಚ್ಚಿಟ್ಟು ಲಾರಿ ಚಾಲಕರು ಸೇರಿದಂತೆ ಹಲವರಿಗೆ ಮಾರಾಟ ಮಾಡುತ್ತಿದ್ದ ಆಂಧ್ರ ಮೂಲದ ಆರೋಪಿಯನ್ನು ಬಂಧಿಸುವಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ವಂತಲಾ ಕೇಶವ ರಾವ್ ಬಂಧಿತ ಆರೋಪಿ. ಬಂಧಿತ ಆರೋಪಿಯಿಂದ 65 ಕೆ.ಜಿ.ಗಾಂಜಾ ವಶ ಪಡಿಸಿಕೊಳ್ಳಲಾಗಿದೆ.ಶಿವರಾತ್ರಿಯಂದು ನಗರದಲ್ಲಿ ಗಾಂಜಾ ಹೆಚ್ಚಿನ ಬೇಡಿಕೆ ಹೆಚ್ಚಿರುವುದರಿಂದ ಗಾಂಜಾ ದಾಸ್ತಾನು ಮಾಡಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಎಂಬುದು ತಿಳಿದು ಬಂದಿದೆ.
ಹಿಂದಿನ ಪ್ರಕರಣದಿಂದ ಈ ಪ್ರಕರಣ ಪತ್ತೆ
ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 18 ರಂದು ನಾಲ್ವರ ಬಂಧನವಾಗಿತ್ತು.
ಸೈಯದ್ ಇಮ್ತಿಯಾಜ್, ರಂಜಿತ್, ಪವನ್, ವಿನೋದ್ ಕುಮಾರ್ ಎಂಬುವರನ್ನು ನಾಗರಬಾವಿ ಎರಡನೇ ಹಂತದಲ್ಲಿ ಬಂಧಿಸಲಾಗಿತ್ತು. ಬಂಧಿತರಿಂದ 7.35 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಇನ್ನೂ ವಿಚಾರಣೆ ವೇಳೆ ವಂತಲ್ ಕೇಶವ ರಾವ್ ಹೆಸರು ಬೆಳಕಿಗೆ ಬಂದಿತ್ತು. ಈ ಮಾಹಿತಿ ಮೇರೆಗೆ ಫೆ.27 ರಂದು ವಂತಲ್ ಕೇಶವ ರಾವ್ ಅರೆಸ್ಟ್ ಮಾಡಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಪಾಟೀಲ್ ತಿಳಿಸಿದ್ದಾರೆ.
ಚಕ್ಕಲಿ-ನಿಪ್ಪಟ್ಟು ಮಾರಾಟದಲ್ಲಿ ನಷ್ಟ ಹಿನ್ನಲೆ ಗಾಂಜಾ ಮಾರಾಟಕ್ಕೆ ಇಳಿದಿದ್ದ ಇಬ್ಬರು ಅರೆಸ್ಟ್
ಬೆಂಗಳೂರು: (ಫೆ.28) Bangalore Crime: ಹೊರರಾಜ್ಯಗಳಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಮೂಲದ ಪ್ರಕಾಶ್ ಹಾಗೂ ಸುಂದರ್ ಪಾಂಡೆ ಬಂಧಿತ ಆರೋಪಿಗಳಾಗಿದ್ದಾರೆ.


ಬಂಧಿತ ಆರೋಪಿಗಳಿಂದ 21 ಕೆ.ಜಿ. ಗಾಂಜಾ ಜಪ್ತಿ ಮಾಡಿಕೊಳ್ಳಲಾಗಿದೆ. ಈ ಮೊದಲು ಆರೋಪಿಗಳು ಚಕ್ಕಲಿ-ನಿಪ್ಪಟ್ಟು ತಯಾರಿಸಿ ಕಿರಾಣಿ ಅಂಗಡಿಗಳಿಗೆ ಕೊಡುವ ಕೆಲಸ ಮಾಡುತ್ತಿದ್ದರು. ಆದ್ರೆ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದರು. ನಷ್ಟ ಹೊಂದಿದ್ದರಿಂದ ಹಣಕ್ಕಾಗಿ ಗಾಂಜಾ ದಂಧೆಗೆ ಇಳಿದಿದ್ದರು.
ಆಂಧ್ರದ ವಿಶಾಖಪಟ್ಟಣದಿಂದ ಗಾಂಜಾ ತರಿಸಿಕೊಂಡು ಮನೆಯಲ್ಲಿ ಇರಿಸಿ ಸಣ್ಣ-ಸಣ್ಣ ಪ್ಯಾಕೇಟ್ ಗಳಲ್ಲಿ ಗಾಂಜಾ ಇರಿಸಿಕೊಂಡು ಪ್ರತಿಷ್ಠಿತ ಕಾಲೇಜುಗಳ ಮುಂದೆ ಮಾರಾಟ ಮಾಡುತ್ತಿದ್ದರು. ಫೆಬ್ರವರಿ 26 ರಂದು ಪೀಣ್ಯ ಬಳಿ ಬೈಕ್ ನಲ್ಲಿ ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಹನುಮಂತ ಹಾದಿಮನಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನು ಓದಿ: Robbery: ದ್ವಿಚಕ್ರ ವಾಹನಗಳನ್ನು ಅಡ್ಡಗಟ್ಟಿ ಸುಲಿಗೆ – ಇಬ್ಬರನ್ನು ಬಂಧಿಸಿದ ಪೊಲೀಸರು