ಬರ್ಲಿನ್: (ಫೆ.28) Anti War Rally: ಜರ್ಮನಿಯ ಬರ್ಲಿನ್‌ನಲ್ಲಿ 100,000 ಕ್ಕೂ ಹೆಚ್ಚು ಜನರು ಉಕ್ರೇನ್‌ನೊಂದಿಗೆ ಒಗ್ಗಟ್ಟಿನಿಂದ ಭಾನುವಾರ ರ್ಯಾಲಿ ನಡೆಸಿದರು, ರಷ್ಯಾದ ಆಕ್ರಮಣವನ್ನು ಕೊನೆಗೊಳಿಸಬೇಕೆಂದು ಕರೆ ನೀಡಿದರು.

ಇತಿಹಾಸವು ಮರುಕಳಿಸಬಾರದು ಎಂದು ಪ್ರತಿಭಟಿಸಿದರು. ಬರ್ಲಿನ್ ನಲ್ಲಿ ಹಮ್ಮಿಕೊಂಡಿದ್ದ ರ್ಯಾಲಿಯಿಂದ ರಾಜ್ಯಧಾನಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.


ರಷ್ಯಾದ ರಾಯಭಾರ ಕಚೇರಿಯ ಬಳಿ ಸೆಂಟ್ರಲ್ ಬ್ರಾಂಡೆನ್‌ಬರ್ಗ್ ಗೇಟ್‌ಗೆ ಬಳಿ ಸಾವಿರಾರು ಮಂದಿ ಜಮಾಯಿಸಿದರು. ಪ್ರತಿಭಟನಾಕಾರರ ಗುಂಪು ಉಕ್ರೇನಿಯನ್ ಮತ್ತು ಯುರೋಪಿಯನ್ ಯೂನಿಯನ್ ಧ್ವಜಗಳನ್ನು ಪ್ರದರ್ಶಿಸಿ “ಯುದ್ಧವನ್ನು ನಿಲ್ಲಿಸಿ”, “ಪುಟಿನ್ ಅವರ ಕೊನೆಯ ಯುದ್ಧ” ಮತ್ತು “ನಾವು ಉಕ್ರೇನ್ ಜೊತೆ ನಿಲ್ಲುತ್ತೇವೆ” ಎಂಬ ಫಲಕಗಳನ್ನು ಹಿಡಿದು ಪ್ರತಿಭಟಿಸಿದರು.
ಆಪರೇಷನ್ ಗಂಗಾ: 37 ಕನ್ನಡಿಗರು ಭಾರತಕ್ಕೆ
ಉಕ್ರೇನ್‌ನಲ್ಲಿ ಸಿಲುಕಿದ್ದ 249 ಭಾರತೀಯರ ಏರ್‌ಲಿಫ್ಟ್ ಮಾಡಿದ ಆಪರೇಷನ್ ಗಂಗಾ 5ನೇ ವಿಮಾನ ದೆಹಲಿಗೆ ಆಗಮಿಸಿದೆ. ರೊಮೇನಿಯಾದ ಬುಕಾರೆಸ್ಟ್‌ನಿಂದ ದೆಹಲಿಗೆ ಆಗಮಿಸಿದೆ. 5ನೇ ತಂಡದಲ್ಲಿ 6 ಕನ್ನಡಿಗರು ದೆಹಲಿಗೆ ಆಗಮಿಸಿದ್ದಾರೆ. ಉಕ್ರೇನ್‌ನಿಂದ ಈವರೆಗೆ 37 ಕನ್ನಡಿಗರು ಭಾರತಕ್ಕೆ ವಾಪಸ್ ಆಗಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ಯುಕೆ ಪಿಎಂ, ಪೋಲೆಂಡ್ ಅಧ್ಯಕ್ಷರ ಜೊತೆ ಮಾತುಕತೆ ನಡೆಸಲಾಗಿದೆ. ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್‌ಸ್ಕಿ ಚರ್ಚೆ ನಡೆಸಲಾಗಿದೆ. ಸದ್ಯದ ಭದ್ರತಾ ಪರಿಸ್ಥಿತಿಯ ಬಗ್ಗೆ ಝೆಲೆನ್‌ಸ್ಕಿ ಮಾತುಕತೆ ನಡೆಸಿದ್ದಾರೆ. ಆಕ್ರಮಣಕಾರರನ್ನು ಎದುರಿಸಲು ಜಂಟಿ ಕ್ರಮಗಳಿಗೆ ಉಕ್ರೇನ್ ಅಧ್ಯಕ್ಷ, ಯುಕೆ ಪಿಎಂ ಬೋರಿಸ್ ಜಾನ್ಸನ್, ಪೋಲಿಷ್ ಅಧ್ಯಕ್ಷ ದುಡಾ ಜೊತೆ ಚರ್ಚೆ ವೇಳೆ ಒಪ್ಪಿಗೆ ನೀಡಲಾಗಿದೆ.