ಬೆಂಗಳೂರು: (ಫೆ.26):Robbery: ರಸ್ತೆಗಳಲ್ಲಿ ಹೋಗುವ ದ್ವಿಚಕ್ರ ವಾಹನಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಇಬ್ಬರನ್ನು ಕೆ.ಜಿ.ಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಡಿ.ಜೆ. ಹಳ್ಳಿಯ ನಿವಾಸಿಗಳಾದ ಮಧುರಾಜ್ (23), ಸುಜಯ್ (23) ಬಂಧಿತ ಆರೋಪಿಗಳು


ಫೆಬ್ರವರಿ 22 ರಂದು ರಾತ್ರಿ ಡೆಲಿವರಿ ಬಾಯ್ ವೆಂಕಟೇಶ್ ಕೆಲಸ ಮುಗಿಸಿಕೊಂಡು ಮನೆಗೆ ವಾಪಾಸ್ಸಾಗುತ್ತಿದ್ದಾಗ ಬಿಲಾಲ್ ಮಸೀದಿ ಪಕ್ಕದಲ್ಲಿರುವ ರಸ್ತೆಯಲ್ಲಿ ಆರೋಪಿಗಳು ವೆಂಕಟೇಶ್ ನನ್ನು ಅಡ್ಡಗಟ್ಟಿದ್ದರು. ವೆಂಕಟೇಶ್
ನಿಂದ 1,200 ರೂ. ಕಸಿದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಡೆಲಿವರಿ ಬಾಯ್ ವೆಂಕಟೇಶ್ ಕೆ.ಜಿ ಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿಸಿಕೊಂಡಿದ್ದರು.
ಸಿಸಿಕ್ಯಾಮರಾದಲ್ಲಿ ಮುಕಚಹರೆ ಪತ್ತೆ
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೃತ್ಯ ನಡೆದ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ್ದರು. ಸಿಸ ಕ್ಯಾಮರಾದಲ್ಲಿ ಸಿಕ್ಕ ಚಹರೆ ಮೇರೆಗೆ ಇಬ್ಬರನ್ನು ಕೆ.ಜಿ. ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಇನ್ನೂ ಆರೋಪಿಗಳು ದ್ವಿ ಚಕ್ರವಾಹನ ಸವಾರರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದರು. ಬಂದ ಹಣದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಇದನ್ನು ಓದಿ:Bangalore Crime: ಐಷಾರಾಮಿ ಜೀವನ ನಡೆಸಲು ಮನೆಗಳ್ಳತನ – ಒಬ್ಬ ವ್ಯಕ್ತಿಯ ಬಂಧನ