ಶಿವಮೊಗ್ಗ: (ಫೆ.26): Shivamogga Murder: ಶಿವಮೊಗ್ಗದಲ್ಲಿ ನಡೆದ ಬಜರಂಗ ಕಾರ್ಯಕರ್ತ ಹರ್ಷ ಹತ್ಯೆ ನಂತರ ಪರಿಸ್ಥಿತಿ ಹತೋಟಿಗೆ ಬಾರದ ಹಿನ್ನೆಲೆ ಫೆಬ್ರವರಿ 28 ರ ಬೆಳಗ್ಗೆ 9 ಗಂಟೆಯವರೆಗೂ ಶಿವಮೊಗ್ಗ ಜಿಲ್ಲಾದ್ಯಂತ ನಿಷೇದಾಜ್ಞೆ ವಿಸ್ತರಣೆ ಮಾಡಿದೆ.
ಬಜರಂಗದಳ ಕಾರ್ಯಕರ್ತರು ಶವಯಾತ್ರೆಯಲ್ಲಿ ನಗರದಲ್ಲಿ ವ್ಯಾಪಕವಾಗಿ ಹಿಂಸಾಚಾರ ನಡೆದಿತ್ತು. ಇಂದಲೇ ಜಿಲ್ಲಾಡಳಿತ ನಿಷೇಧ ವಿಧಿಸಿತ್ತು ಆದರೆ ಶಿವಮೊಗ್ಗ ನಗರದಲ್ಲಿ ಸಹಜಸ್ಥಿತಿ ಬಾರದ ಕಾರಣ ನಿಷೇಧಾಜ್ಞೆ ಅವಧಿಯನ್ನು ವಿಸ್ತರಿಸಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.

ಹರ್ಷ ಕೊಲೆ ಪ್ರಕರಣಕ್ಕೆ ಬಳಸಿದ್ದ ಕಾರು ಜಪ್ತಿ:
ಫೆಬ್ರವರಿ 26 ರ ಶನಿವಾರ ಮತ್ತು ಫೆ.27ರ ಭಾನುವಾರ ಬೆಳಿಗ್ಗೆ 6 ರಿಂದ 4 ಗಂಟೆಯವರೆಗೆ ಅಗತ್ಯ ವಸ್ತುಗಳಿಗೆ ಅವಕಾಶ ನೀಡಲಾಗಿದೆ. ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಶಿವಮೊಗ್ಗದ ಎರಡನೇ ಜೆಎಂಎಸಿ ಕೋಟಿಗೆ ಹಾಜರುಪಡಿಸುವಂತೆ ಆದೇಶ ಮಾಡಿದ್ದಾರೆ.
ಕಳೆದ ಫೆಬ್ರವರಿ 20ರಂದು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹರ್ಷನನ್ನು ಕೊಲೆ ಮಾಡಿದ್ದರು. ಇದರಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಸಿಟ್ಟಿಗೆದ್ದ ಜನರು ಮನಬಂದಂತೆ ಕಲ್ಲುತೂರಾಟ ನಡೆಸಿದ್ದಾರೆ. ಕಲ್ಲುತೂರಾಟ ನಿಯಂತ್ರಿಸಲು ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ ಬಳಿಕ ಶಿವಮೊಗ್ಗ ನಗರದಾದ್ಯಂತ ನಿಷೇಧ ಹೇರಲಾಗಿತ್ತು.
ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಬಳಸಿದ್ದ ಕಾರು ಪತ್ತೆಯಾಗಿದ್ದು ಪೋಲಿಸರಿಂದ CG13,C4496 ನೋಂದಣಿ ಕಾರು ಜಪ್ತಿ ಮಾಡಲಾಗಿದೆ.
ಆದರೆ ಹರ್ಷ ಮೊಬೈಲ್ ಇನ್ನೂ ಪತ್ತೆಯಾಗಿಲ್ಲ ಆದರೆ ಹರ್ಷ ಕೊಲೆ ನಡೆದ ಜಾಗ ಮತ್ತು ಆರೋಪಿಗಳ ಸೇರಿ ಸುಮಾರು 6 ಸಾವಿರ ಮೊಬೈಲ್ ಕಾಲ್ ಗಳನ್ನು ಪರಿಶೀಲನೆ ಮಾಡಲಾಗಿದೆ.
ನೋಟಗಳು ಹಂತಕರಿಗೆ ಯಾರ್ಯಾರ ಸಂಪರ್ಕವಿದೆ ಇನ್ನಿತರ ಕುರಿತು ಆಳವಾದ ತನಿಖೆ ನಡೆಯುತ್ತಿದೆ ಈಗಾಗಲೇ ಗೃಹಸಚಿವರು ಕೊಲೆಯ ಹಿಂದೆ ಸಂಘಟನೆಯ ಕೈವಾಡ ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Crime: ಜಾಗದ ದಾಖಲಾತಿ ವಿಷಯಕ್ಕೆ ಬಿಜೆಪಿ ಕಾರ್ಯಕರ್ತನಿಂದ ದಲಿತನ ಮೇಲೆ ಹಲ್ಲೆ!