Russia Ukraine War: (ಫೆ.26): ಉಕ್ರೇನ್ನ ಆಗ್ನೇಯ ಝಪೊರಿಜ್ಜಿಯಾ ಪ್ರದೇಶದಲ್ಲಿರುವ ಮೆಲಿಟೊಪೋಲ್ ನಗರವನ್ನು ರಷ್ಯಾ ಸೇನೆ ವಶಪಡಿಸಿಕೊಂಡಿದೆ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ತಿಳಿಸಿದೆ. ಉಕ್ರೇನ್ ಮೇಲೆ ಮಾಸ್ಕೋ ಆಕ್ರಮಣ ಮಾಡಿದಾಗಿನಿಂದಲೂ ಇಲ್ಲಿಯವರೆಗೆ ವಶಪಡಿಸಿಕೊಂಡ ಅತ್ಯಂತ ಮಹತ್ವದ, ಜನಸಂಖ್ಯಾ ನಿಬಿಡ ಪ್ರದೇಶ ಈ ಮೆಲಿಟೊಪೋಲ್. ಇಲ್ಲಿನ ಪೊಲೀಸ್ ಠಾಣೆಯ ಮೇಲೆ ರಷ್ಯಾ ಸೇನೆ ತಮ್ಮ ರಾಷ್ಟ್ರದ ಧ್ವಜ ಹಾರಿಸಿದೆ. ಅಷ್ಟೇ ಅಲ್ಲ, ಉಕ್ರೇನ್ನ ನೂರಾರು ಮಿಲಿಟರಿ ಉಪಕರಣಗಳ ವ್ಯವಸ್ಥೆಯನ್ನು ನಾಶ ಪಡಿಸಿದ್ದೇವೆ, ಸೇನಾ ವಿಮಾನಗಳು, ಫಿರಂಗಿಗಳನ್ನು ನಾಶ ಮಾಡಿದ್ದಾಗಿಯೂ ಹೇಳಿದೆ.
1 ಲಕ್ಷ 20 ಸಾವಿರ ಜನರು ಉಕ್ರೇನ್ ತೊರೆದಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯಿಂದ ಮಾಹಿತಿ ನೀಡಲಾಗಿದೆ. ಕೀವ್‌ನಲ್ಲಿ ಕಠಿಣ ಕರ್ಫ್ಯೂ ಜಾರಿ ಮಾಡಿ ಮೇಯರ್ ಆದೇಶ ಹೊರಡಿಸಿದ್ದು, ಸಂಜೆ 5 ಗಂಟೆಯಿಂದ ಬೆಳಗ್ಗೆ 8 ಗಂಟೆವರೆಗೆ ಕಠಿಣ ಕರ್ಫ್ಯೂ ಜಾರಿಯಲ್ಲಿರಲಿದೆ. ಮನೆಯಿಂದ ಹೊರಬಂದವರನ್ನು ದೇಶದ್ರೋಹಿಗಳೆಂದು ಪರಿಗಣಿಸಲಾಗುತ್ತೆ ಎಂದು ಕೀವ್ ಮೇಯರ್ ಆದೇಶಿಸಿದ್ದಾರೆ.
ಯುರೋಪ್ ಒಕ್ಕೂಟ ಉಕ್ರೇನ್ ಬೆಂಬಲಕ್ಕೆ ನಿಂತುಕೊಂಡಿದೆ. ಶಸ್ತ್ರಾಸ್ತ್ರ ಸೇರಿ ಇತರೆ ಸಹಾಯ ಮಾಡುವುದಾಗಿ ಘೋಷಣೆ ಮಾಡಿದ್ದು, ಈ ಕುರಿತು ಪೋಲೆಂಡ್ ರಾಯಭಾರ ಕಚೇರಿ ಮಾಹಿತಿ ನೀಡಿದೆ.ಪ್ರಧಾನಿ ಮೋದಿ ಜತೆ ಉಕ್ರೇನ್ ಅಧ್ಯಕ್ಷರ ಮಾತುಕತೆ ಮಾಡಿದ್ದು, ರಷ್ಯಾ ದಾಳಿಯ ಬಗ್ಗೆ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಪ್ರಧಾನಿಗೆ ವಿವರಿಸಿದ್ದಾರೆ. ಯುಎನ್ಎಸ್ಸಿಯಲ್ಲಿ ಉಕ್ರೇನ್ಗೆ ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ. 1 ಲಕ್ಷಕ್ಕೂ ಹೆಚ್ಚು ರಷ್ಯಾ ಸೈನಿಕರು ಉಕ್ರೇನ್‌ನಲ್ಲಿದ್ದಾರೆ.
ಅಮೆರಿಕ ಉಕ್ರೇನ್ ದೇಶದ ನೆರವಿಗೆ ₹350 ಮಿಲಿಯನ್ ಹೆಚ್ಚುವರಿ ಮಿಲಿಟರಿ ನೆರವು ನೀಡಿದ್ದು, ರಷ್ಯಾ ವಿರುದ್ಧ ರಕ್ಷಿಸಿಕೊಳ್ಳಲು ಉಕ್ರೇನ್ಗೆ ಯುಎಸ್ ನೆರವಾಗಿದೆ.
ಉಕ್ರೇನ್‌ನಿಂದ 219 ವಿದ್ಯಾರ್ಥಿಗಳನ್ನು ಕರೆತಂದಿರುವ ವಿಮಾನ ಮುಂಬೈ ತಲುಪಿದೆ. ರೊಮೇನಿಯಾದ ಬುಕಾರೆಸ್ಟ್ನಿಂದ ವಿದ್ಯಾರ್ಥಿಗಳನ್ನು ಶಿಫ್ಟ್ ಮಾಡಲಾಗಿದ್ದು, ಏರ್ ಇಂಡಿಯಾ ವಿಮಾನದಲ್ಲಿ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ. ನಾಳೆ ದೆಹಲಿಗೆ ಎರಡನೇ ವಿಮಾನ ಬರಲಿದೆ.ದೆಹಲಿಗೆ ಎರಡನೇ ಬ್ಯಾಚ್ ಆಗಮಿಸಲಿದ್ದು, ಎಲ್ಲ ಭಾರತೀಯರನ್ನ ಕರೆತರುವವರೆಗೂ ನಿಲ್ಲಿಸುವುದಿಲ್ಲ ಎಂದು ಏರ್ಪೋರ್ಟ್ ಬಳಿ ಕೇಂದ್ರ ಸಚಿವ ಗೋಯಲ್ ಹೇಳಿಕೆ ನೀಡಿದ್ದಾರೆ.