ಬೆಂಗಳೂರು: (ಫೆ.26) Bangalore Crime: ಐಷಾರಾಮಿ ಜೀವನ ನಡೆಸಲು ಮನೆಗಳ್ಳತನವನ್ನು ವೃತ್ತಿ ಮಾಡಿಕೊಂಡಿದ್ದ ಕುಖ್ಯಾತ ಕಳ್ಳನನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ತಿರುಪತಿಯ ಲಾಡ್ಜ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಚಿತ್ತೂರು ಮೂಲದ ಸತೀಶ ಅಲಿಯಾಸ್ ಸತ್ಯಾ ಬಂಧಿತ ಆರೋಪಿ. ಐಷಾರಾಮಿ ಜೀವನ ನಡೆಸುವುದನ್ನು ಅಭ್ಯಾಸ ಮಾಡಿಕೊಂಡಿದ್ದ ಸತ್ಯಾ ಈಗ ಪೊಲೀಸರ ಅತಿಥಿಯಾಗಿದ್ದಾನೆ.


ಇತನ ವಿರುದ್ಧ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಫಾರ್ಚುನರ್ ಕಾರಿನ ಗಾಜು ಒಡೆದು ಹಣ ಹಾಗೂ ವಾಚ್ ಕಳ್ಳತನ ಮಾಡಿದ್ದ ಪ್ರಕರಣದ ಕುರಿತು ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ಅನ್ನಪೂರ್ಣೇಶ್ವರಿ ನಗರ, ಚಂದ್ರಾಲೇಔಟ್, ಹಾಗೂ ಜ್ಞಾನ ಭಾರತಿ ಠಾಣೆಗಳಲ್ಲಿ ಮೋಸ್ಟ್ ವಾಂಟೆಡ್ ಅಗಿದ್ದ. ಸದ್ಯ ಬಂಧಿತ ಆರೋಪಿಯಿಂದ ಪೊಲೀಸರು 9 ಲಕ್ಷ ರೂ ಮೌಲ್ಯದ 200 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಬೆನಕ ಜ್ಯೂವೆಲರಿ ಶಾಪ್ ಮಾಲೀಕನಿಂದ ಹಲ್ಲೆ ಆರೋಪ – ಗಿರಿನಗರ ಠಾಣೆಯಲ್ಲಿ ಎಫ್ಐಆರ್
ಬೆಂಗಳೂರು: (ಫೆ.26) Bangalore Crime: ಜಗಳ ಆಡುತ್ತಿದ್ದ ಇಬ್ಬರು ಯುವಕರನ್ನು ಬಿಡಿಸಲು ಹೋದ ಇನ್ಫೋಸಿಸ್ ಕಂಪೆನಿಯ ಉದ್ಯೋಗಿ ಮೇಲೆ ಬೆನಕ ಜ್ಯೂವೆಲ್ಲರಿ ಶಾಪ್ ಮಾಲೀಕ ಹಾಗೂ ಅತನ ಸಹಚರರು ಹಲ್ಲೆ ನಡೆಸಿರುವ ಅರೋಪ ಕೇಳಿಬಂದಿದೆ. ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ಫೋಸಿಸ್ ಕಂಪೆನಿಯಲ್ಲಿ ಸೀನಿಯರ್ ಅನಾಲಿಸ್ಟ್ ಆಗಿರುವ ಮನೋಹರ್ ನೀಡಿದ ದೂರಿನ ಮೇರೆಗೆ ಬೆನಕ ಆಭರಣ ಕಂಪೆನಿಯ ಮಾಲೀಕ ಭರತ್ ಹಾಗೂ ಆತನ ಸಹಚರರ ಮೇಲೆ ಎಫ್ಐಆರ್ ದಾಖಲಾಗಿದೆ.

ಘಟನೆ ವಿವರ
ಫೆಬ್ರುವರಿ 20 ರಂದು ಮನೋಹರ್ ಹಾಗೂ ಆತನ ಸಹೋದರಿಬ್ಬರು ಹೊಸಕೆರೆಹಳ್ಳಿ ರಸ್ತೆಯಲ್ಲಿರುವ ಅಕ್ಷಯ್ ಬಾರ್ ಗೆ ಹೋಗಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿ ಇನ್ನೊಬ್ಬ ವ್ಯಕ್ತಿ ಮೇಲೆ ಹಲ್ಲೆ ಮಾಡುತ್ತಿರುವುದನ್ನು ಕಂಡು ಗಲಾಟೆ ಬಿಡಿಸಲು ಮುಂದಾಗಿದ್ದಾರೆ. ಈ ವೇಳೆ ಅಲ್ಲೇ ಇದ್ದ 8 ಮಂದಿ ಹುಡುಗರ ಹಲ್ಲೆ ಮಾಡಿದ್ದಾರೆ. ಬಿಯರ್ ಬಾಟೆಲ್ ನಿಂದ ಮನೋಹರ್ ಸಹೋದರನಿಗೆ ಹೊಡೆದಿದ್ದಾರೆ. ಈ ಸಂಬಂಧ ಗಿರಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೆಲವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.