ದಕ್ಷಿಣ ಕನ್ನಡ: (ಫೆ.25) Crime: ಬಿಜೆಪಿ ಕಾರ್ಯಕರ್ತ, ಬಜರಂಗದಳದ ಮುಖಂಡ ಜಾಗದ ದಾಖಲೆಗಳ ಕಾರಣಕ್ಕಾಗಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿ ಸಾವನ್ನಪ್ಪಿದ ಘಟನೆ ಧರ್ಮಸ್ಥಳದ ಕನ್ಯಾಡಿಯಲ್ಲಿ ನಡೆದಿದೆ.
ದಿನೇಶ್ ಎಂಬವರು ಕೊಲೆಯಾದ ವ್ಯಕ್ತಿ. ಪುತ್ತೂರು ಜಿಲ್ಲಾ ಬಜರಂಗದಳದ ಸಹ ಸಂಚಾಲಕ ಭಾಸ್ಕರ್ ಧರ್ಮಸ್ಥಳ ಎಂಬುವವರ ಸಹೋದರರ ಬಜರಂಗದಳ ಹಾಗೂ ಬಿಜೆಪಿ ಮುಖಂಡ ಕಿಟ್ಟಿ ಅಲಿಯಾಸ್ ಕೃಷ್ಣ ಕೊಲೆ ಮಾಡಿದ ಆರೋಪಿಯನ್ನು ಗುರುತಿಸಲಾಗಿದೆ.
ಕಳೆದ ಫೆಬ್ರವರಿ 23ರಂದು ಜಾಗದ ದಾಖಲೆಗಳನ್ನು ಮಾಡಿಕೊಟ್ಟಿರುವ ವಿಚಾರಕ್ಕೆ ಕುರಿತು ಆರೋಪಿ ಕೃಷ್ಣ ಇಬ್ಬರು ದಲಿತ ವ್ಯಕ್ತಿ ದಿನೇಶ್ ಅವರಿಗೆ ಗಂಭೀರ ಹಲ್ಲೆ ನಡೆಸಿದ್ದರು. ಹಲ್ಲೆ ನಡೆಸಿರುವ ದೃಶ್ಯಗಳು ಸಿಸಿಟಿವಿ ಸೆರೆಯಾಗಿದೆ.
ಸತ್ಯ ಮುಚ್ಚಿಟ್ಟು ಆಸ್ಪತ್ರೆಗೆ ದಾಖಲು
ಆರ್ಥಿಕ ಸಮಸ್ಯೆಯಿರುವ ದಿನೇಶ್ ಅವರು ಹಲ್ಲೆಗೊಳಗಾದ ಬಳಿಕ ತಮ್ಮ ತಾಯಿಯ ಬಳಿ ನಡೆದ ವಿಚಾರವನ್ನೆಲ್ಲ ತಿಳಿಸಿದ್ದಾರೆ. ಅನಂತರ ಹೊಟ್ಟೆ ನೋವು ಎಂದು ತಾಯಿಯ ಬಳಿ ಹೇಳಿಕೊಂಡಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಆರೋಪಿ ಕೃಷ್ಣನ ಬಳಿ ದಿನೇಶ್ ಅವರ ತಾಯಿ ತೆರಳಿ ನೀನು ಹಲ್ಲೆ ಮಾಡಿದ್ದರಿಂದಲೇ ನನ್ನ ಮಗನಿಗೆ ಹೊಟ್ಟೆನೋವು ಬಂದಿದೆ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗು ಎಂದು ಹೇಳಿದ್ದಾರೆ.
ಹಲ್ಲೆ ಮಾಡಿರುವ ವಿಷಯವನ್ನು ಮುಚ್ಚಿಟ್ಟು, ಮೆಟ್ಟಿಲಿನಿಂದ ಬಿದ್ದು ಗಾಯಗೊಂಡಿದ್ದಾನೆ ಎಂದು ಸುಳ್ಳು ಹೇಳಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಧರ್ಮಸ್ಥಳದ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ. ಇತ್ತ ಗಾಯಾಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ದಿನೇಶ್ ಸಾವನ್ನಪ್ಪಿದ ಮಾಹಿತಿ ತಿಳಿದ ಬಳಿಕ ಆರೋಪಿ ಕೃಷ್ಣ ಪರಾರಿಯಾಗಿದ್ದಾನೆ. ಘಟನೆಯನ್ನು ಧರ್ಮಸ್ಥಳ ಪೊಲೀಸರು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ,