ಬೆಂಗಳೂರು: (ಫೆ.24): Jewells Loot: ಥಣಿಸಂದ್ರ ಮುಖ್ಯರಸ್ತೆಯಲ್ಲಿರುವ ಸಾರಾಯಿಪಾಳ್ಯದ ಜ್ಯುವೆಲ್ಲರಿ ಶಾಪ್ ನ ಗೋಡೆ ಕೊರೆದ ಖದೀಮರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ.
ಡ್ರಿಲಿಂಗ್ ಮಷಿನ್ ನಿಂದ ಗೋಡೆ ಕೊರೆದ ಕಳ್ಳರು
ಥಣಿಸಂದ್ರ ಮುಖ್ಯರಸ್ತೆಯ ಸಾರಾಯಿಪಾಳ್ಯದ ಶ್ರೀ ರಾಘವೇಂದ್ರ ಜ್ಯುವೆಲ್ಲರಿ ಅಂಗಡಿಯಲ್ಲಿ ತಡರಾತ್ರಿ ಡ್ರಿಲಿಂಗ್ ಮಿಷಿನ್ ನಿಂದ ಗೋಡೆ ಕೊರೆದ ಖದೀಮರು ಸುಮಾರು 1 ಕೆ.ಜಿ.ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಜೊತೆಗೆ ಪೊಲೀಸರಿಗೆ ತಮ್ಮ ಗುರುತು ಸಿಗದಂತೆ ಮಾಡಲು ಕಳ್ಳತನ ಮುಗಿಸಿ ಹೋಗುವಾಗ ಅಂಗಡಿಯಲ್ಲಿದ್ದ ಸಿಸಿಟಿವಿಯ ಡಿವಿಆರ್ ಕೂಡ ಹೊತ್ತೊಯ್ದಿದ್ದಾರೆ.

ಬೆಳಗ್ಗೆ ಎಂದಿನಂತೆ ಮಾಲೀಕರು ಅಂಗಡಿ ಓಪನ್ ಮಾಡಲು ಬಂದಾಗ ದುಷ್ಕರ್ಮಿಗಳು ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಆಗಮಿಸಿದ ಹೆಣ್ಣೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:Shivamogga Harsha Murder: ಶಿವಮೊಗ್ಗದಲ್ಲಿ ಶಾಂತಿ ಸುವ್ಯವಸ್ಥೆಗೆ ಡ್ರೋಣ್ ಕಣ್ಗಾವಲು!