Hijab Row: (ಫೆ.24) ರಾಜ್ಯದಲ್ಲಿ ಹಿಜಾಬ್ ಕುರಿತು ಕೋರ್ಟಿನಲ್ಲಿ ವಾದ ವಿವಾದಗಳು ಮುಂದುವರಿಯುತ್ತಿದ್ದು ಇಂದು ಕೂಡ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಹಿಜಾಬ್ ಅರ್ಜಿ ವಿಚಾರವಾಗಿ ವಾದ ಪ್ರತಿವಾದಗಳನ್ನು ಆಲಿಸಿದ ನಂತರ ಹೈ ಕೋರ್ಟ್ ವಿಚಾರಣೆಯನ್ನು ನಾಳೆ ಮಧ್ಯಾಹ್ನ 2.30 ಕ್ಕೆ ಮುಂದೂಡಿದೆ. ನಾಳೆ ವಾದ ಮಂಡನೆ ಮುಕ್ತಾಯಗೊಳಿಸಬೇಕು ಎರಡು-ಮೂರು ದಿನಗಳಲ್ಲಿ ಲಿಖಿತವಾದ ಮಂಡನೆ ಸಲ್ಲಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ.
- ಸರ್ಕಾರದ ಪರವಾಗಿ ಈಜಿ ಪ್ರಭುಲಿಂಗ ನಾವದಗಿ ವಾದ ಮಂಡನೆ ಮಾಡಿದರು. ಅರ್ಜಿದಾರರ ಪರ ದೇವದತ್ ಕಾಮತ್ ಅವರು ವಾದ ಮಂಡನೆ ಮಾಡಿದರು.
- ದೇವದತ್ ಕಾಮತ್ ಅವರು, ಸುಜಾತ ಧರಿಸಬೇಕು ಎಂಬುದು ವಿದ್ಯಾರ್ಥಿಗಳ ನಂಬಿಕೆಯಾಗಿದೆ ಸಂವಿಧಾನ ರಚನಾ ಸಭೆಯಲ್ಲಿ ಧಾರ್ಮಿಕ ಗುರುತು ನಿರ್ಮಿಸುವ ಪ್ರಸ್ತಾಪ ಎದುರಾಗಿತ್ತು ಆದರೆ ಸಂವಿಧಾನ ರಚನಾಕಾರರು ಇದಕ್ಕೆ ಸಮ್ಮತಿಸಲಿಲ್ಲ ಇದೀಗ ಸರ್ಕಾರ ಅದನ್ನು ಹೇರಲು ಯತ್ನಿಸುತ್ತಿದೆ ಎಂದು ವಾದ ಮಂಡನೆ ಮಾಡಿದರು.
- ಕೋರ್ಟಿನಲ್ಲಿ ನಡೆಯುತ್ತಿರುವ ವಾದ ಪ್ರತಿವಾದವನ್ನು ಕ್ರಿಕೆಟ್ ಗೆ ಹೋಲಿಸಿದರು. ನಾನು ಬ್ಯಾಟ್ಸ್ಮನ್ ನಂತೆ ಎರಡು ಕಡೆಯಿಂದ ವೇಗ ದೇಶಗಳನ್ನು ಎದುರಿಸುತ್ತೇನೆ ಎಂದು ಹೇಳಿದರು.
ಹಿರಿಯ ವಕೀಲ ದೇವದತ್ ಕಾಮತ್ ಅವರು ಡ್ರೆಸ್ ಕೋಡ್ ಗೆ ಸಂಬಂಧಿಸಿದಂತೆ ಫೆಬ್ರುವರಿ 5, 2022 ಸರ್ಕಾರಿ ಆದೇಶಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನಿಲುವನ್ನು ತೊಂಬತ್ತರಷ್ಟು ಬಿಟ್ಟುಕೊಟ್ಟಿದೆ ಎಂದು ಹೇಳಿದರು. - ದಯವಿಟ್ಟು ಶಿಕ್ಷಣ ಕಾಯ್ದೆಯ 143 ಕಣ್ಣು ನೋಡಿ, ಸಿಡಿಸಿ 2014ರ ಸುತ್ತೋಲೆಯಿಂದ ರಚಿಸಲಾಗಿದೆ. ಆರ್ಟಿಕಲ್ ಇಪ್ಪತೈದರ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಸವಾಲು ಹಾಕಿದಾಗ, ಹೇಳಲು ಕೇಳುವ ಮೊದಲ ಪ್ರಶ್ನೆ ನಿರ್ಬಂಧ ಎಲ್ಲಿದೆ ಎಂದು ಹೇಳಿದರು.
- ಇದಕ್ಕೆ ನ್ಯಾಯಮೂರ್ತಿಗಳಾದ ದೀಕ್ಷಿತ್ ಅವರು ಪ್ರತಿಕ್ರಿಯಿಸಿ, ನಿಮ್ಮ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಬಂದಿದ್ದೀರಿ, ನಾವು ನಿರ್ಬಂಧದ ಬಗ್ಗೆ ಮಾತನಾಡುವಾಗ ಅದು ಒದಗಿಸಲಾಗಿದೆ ಎಂದು ಹೇಳಲಾದ ಹಕ್ಕನ್ನು ಉಲ್ಲೇಖಿಸುತ್ತದೆ ಎಂದರು.
- ಹಿಜಾಬ್ ಅಗತ್ಯ ಎಂದು ಹೇಳುವ ಕೇರಳ ಹೈಕೋರ್ಟ್ ಎರಡು ತೀರ್ಪುಗಳನ್ನು ವಕೀಲರು ಏಕೆ ವಾದಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಬುರ್ಖಾವನ್ನು ಧರಿಸುವ ಮದ್ರಾಸ್ ಹೈಕೋರ್ಟ್ ತೀರ್ಪು ತಲೆಗೆ ಸ್ಕಾರ್ಫ್ ಅಗತ್ಯ ಅಭ್ಯಾಸವಾಗಿದೆ ಎಂದು ಹೇಳಿದರು
- ಇಷ್ಟು ದೊಡ್ಡ ರಾಷ್ಟ್ರಕ್ಕೆ ಹಿಜಾಬ್ ಸಣ್ಣ ವಿಚಾರ. ಹಿಜಾಬ್ ಧರಿಸಲು ಅನುಮತಿ ನೀಡಬೇಕು. ಮಹಿಳೆಯರಿಗೆ ತಲೆ, ಮುಖ, ಎದೆ ಮುಚ್ಚುವುದು ಅತ್ಯಗತ್ಯ. ನೈತಿಕತೆ ಕಾಪಾಡಲು ಇದು ಅಗತ್ಯವಾಗಿದೆ. ಭಾರತ ಹಿಂದೂ ರಾಷ್ಟ್ರವಲ್ಲ, ಮುಸ್ಲಿಂ ರಿಪಬ್ಲಿಕ್ ಕೂಡಾ ಅಲ್ಲ. ಇದು ಜಾತ್ಯಾತೀತ ರಾಷ್ಟ್ರವಾಗಿದೆ ಎಂದು ವಿದ್ಯಾರ್ಥಿನಿಯರ ಪರ ಎ.ಎಂ ಧರ್ ವಾದ ಮಂಡಿಸಿದರು. ಅರ್ಜಿದಾರರ ಪರ ಹಿರಿಯ ವಕೀಲೆ ಕೀರ್ತಿ ಸಿಂಗ್ ವಾದ ಮಾಡಿದ್ದು, ಹಿಜಾಬ್ ಧರಿಸುವುದು ಮೂಲಭೂತ ಹಕ್ಕಾಗಿದೆ. ವಿದ್ಯಾರ್ಥಿನಿಯರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಬಾರದು ಎಂದಿದ್ದಾರೆ.
- ಉಪನ್ಯಾಸಕರ ಪರ ವಕೀಲ ಗುರು ಕೃಷ್ಣಕುಮಾರ್ ವಾದ ಮಂಡನೆ ಮಾಡಿದ್ದು, ವಿದ್ಯಾರ್ಥಿಗಳಿಗೆ ತಾರತಮ್ಯರಹಿತ ಶಿಕ್ಷಣಕ್ಕಾಗಿ ಸಮವಸ್ತ್ರ ಮಾಡಲಾಗಿದೆ. ಸಮವಸ್ತ್ರ ನಿಯಮವನ್ನು ಸಂವಿಧಾನದ 25(1) ಆಧರಿಸಿ ಪ್ರಶ್ನಿಸಬಾರದು. ಜಾತಿ, ಧರ್ಮ, ಅಂತಸ್ತುಗಳ ತಾರತಮ್ಯ ಇರಬಾರದು ಎಂದರು.
ಇನ್ನು ವಾದ-ವಿವಾದಗಳನ್ನು ಆಲಿಸಿದ ಹೈಕೋರ್ಟ್ ಪೀಠವು ಮುಂದಿನ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ ಹಾಗೆ ವಾದಗಳು ನಾಳೆಗೆ ಮುಕ್ತಾಯ ಮಾಡಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ