ಮಂಡ್ಯ: (ಫೆ. 24) :ಕಳ್ಳತನ ಮಾಡೋಕೆ ಬಂದು ಅಡುಗೆ ಮಾಡಿ,ಡೈರಿ ಬರೆದಿಟ್ಟು ಹೋಗಿರುವ ವಿಚಿತ್ರ ಘಟನೆ ಸಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ವಿಚಿತ್ರ ಕಳ್ಳತನ ಪ್ರಕರಣವೊಂದು ನಡೆದಿದೆ.
ಕಳ್ಳನೊಬ್ಬ ಬಂದು ಯಾವುದೇ ವಸ್ತು ಸಿಗದೆ ಕೊನೆಗೆ ಅಡುಗೆ ಮನೆಯಲ್ಲಿದ್ದ ವಸ್ತುಗಳನ್ನು ಬಳಕೆ ಮಾಡಿ, ಅಡುಗೆ ಮಾಡಿ ತಿಂದು, ಡೈರಿಯಲ್ಲಿ ನೋಟ್ ಬರೆದಿಟ್ಟು ಹೋಗಿದ್ದಾನೆ.ದೀಪದ ಬೆಳಕಿನಲ್ಲೇ ತನ್ನ ಜೀವನದ ಕಥೆಯನ್ನು ಬರೆದಿದ್ದಾನೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹೆಬ್ಬಣಿ ಗ್ರಾಮದಲ್ಲಿ ಶಿಂಷಾ ರಸ್ತೆಯಲ್ಲಿದ್ದ ಅಂಗನವಾಡಿ ಕೇಂದ್ರಕ್ಕೆ ತಡರಾತ್ರಿ ಕಳ್ಳನೋರ್ವ ಬಂದು ಅಂಗನಾಡಿ ಕೇಂದ್ರದ ಬಾಗಿಲು ಮುರಿದು ಕಳ್ಳತನ ಮಾಡಲು ಯತ್ನಿಸಿದ್ದು,. ಅಲ್ಲಿದ್ದ ಬೀರುವಿನ ಬಾಗಿಲು ಮರಿದು ಹಣಕ್ಕಾಗಿ ಹುಡುಕಾಟ ನಡೆಸಿದ್ದಾನೆ.
ಯಾವುದೇ ಹಣ ಸಿಗದೆ ಇದ್ದ ಸಂದರ್ಭದಲ್ಲಿ ಬೀರುವಿನ ಒಳಗೆ ಇದ್ದ ದಾಖಲೆಗಳನ್ನು ಬಿಸಾಕಿದ್ದಾನೆ ಆನಂತರ ಅಡುಗೆ ಸಾಮಗ್ರಿಗಳನ್ನು ಪುಳಿಯೋಗರೆ ತಯಾರಿಸಿ ತಿಂದಿದ್ದಾನೆ.

ಆತ ಬರೆದದ್ದು ಏನು?
ಊಟ ಮಾಡಿದ ಬಳಿಕ ನೋಟ್ ಪುಸ್ತಕದಲ್ಲಿ ಮಧ್ಯರಾತ್ರಿಯವರೆಗೂ 3 ಪುಟಗಳ ವರೆಗೂ ತನ್ನ ಜೀವನದ ಪ್ರಮುಖ ಘಟನೆಗಳು ಸೇರಿದಂತೆ ತನಗಾಗಿರುವ ಅನುಭವಗಳ ಅನಿಸಿಕೆಯನ್ನು ಬರೆದಿದ್ದಾನೆ.
ಅಂಗನವಾಡಿ ಕಾರ್ಯಕರ್ತೆಯಾದ ಶಿಲ್ಪಾ ಅವರು ಅಂಗನವಾಡಿ ಕೇಂದ್ರದ ಬಾಗಿಲು ತೆರೆಯಲು ಬಂದಾಗ ಈ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಸ್ಥಳೀಯ ಗ್ರಾ. ಪಂ. ನ ಪಿಡಿಒ ಮಹದೇವರವರಿಗೆ ವಿಷಯ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಪಿಡಿಒ ಭೇಟಿ ನೀಡಿ ಪರಿಶೀಲಿಸಿ ಶಿಕ್ಷಕಿಯ ಜೊತೆ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಮಳವಳ್ಳಿ ಗ್ರಾಮಾಂತರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾನೆ.
ಇದನ್ನು ಓದಿ: Shivamogga Harsha Murder: ಶಿವಮೊಗ್ಗದಲ್ಲಿ ಶಾಂತಿ ಸುವ್ಯವಸ್ಥೆಗೆ ಡ್ರೋಣ್ ಕಣ್ಗಾವಲು!