Abhishek Singh: (ಫೆ.24): ಚಿತ್ರರಂಗಕ್ಕೆ ಅನೇಕ ಯುವ ಪ್ರತಿಭೆಗಳು ಪಾದಾರ್ಪಣೆ ಮಾಡುತ್ತಿರುವುದು ಹೊಸದೇನಲ್ಲ. ಕೆಲವರು ರಾಜಕಾರಣದಿಂದ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಾರೆ. ಆದಲ್ಲಿ ಇಲ್ಲಿ ಐಎಎಸ್ ಅಧಿಕಾರಿಯೊಬ್ಬರು ಚಿತ್ರರಂಗ ಪ್ರವೇಶ ಮಾಡಿದ್ದಾರೆ ಅದೂ ಬಾಲಿವುಡ್ ನಲ್ಲಿ!
ಬಾಲಿವುಡ್ ನಲ್ಲಿ ಗಟ್ಟಿಯಾಗಿ ಬೇರೂರುವುದು ಎಂದರೇ ಸಾಮನ್ಯವಲ್ಲ. ಕೇವಲ ಬಾಲಿವುಡ್ ಗೆ ಸೀಮಿತವಲ್ಲ ಯಾವುದೇ ಕ್ಷೇತ್ರದಲ್ಲಿಯೂ ನೆಲೆಯೂರಬೇಕಾದರೆ ಅದಕ್ಕೆ ಅಷ್ಟೆ ತಾಳ್ಮೆ, ಪ್ರತಿಭೆ, ಪರಿಶ್ರಮ ಬೇಕು. ಪ್ರತಿಭೆಯಿದ್ದರೆ ನಟನೆಯಲ್ಲಿ ಗುರುತಿಸಿಕೊಳ್ಳಬಹುದು ಎಂದು ಅಧಿಕಾರಿಯೊಬ್ಬರು ನುಡಿದಿದ್ದಾರೆ. ಅವರು ಮತ್ಯಾರು ಅಲ್ಲ ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್.

ಯಾರು ಈ ಅಭಿಷೇಕ್ ಸಿಂಗ್?
ಅಭಿಷೇಕ್ ಸಿಂಗ್ ಐಎಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಟನೆಯ ಅಪಾರ ಒಲವಿದ್ದ ಕಾರಣ ಆಡಳಿತಾತ್ಮಕ ಸೇವೆಗಳ ಜತೆಜತೆಗೆ ನಟನೆಯಲ್ಲೇ ತೊಡಗಿಸಿಕೊಳ್ಳಲು ನಿರ್ಧಾರ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಕಷ್ಟದಲ್ಲಿರುವವರಿಗೆ ಕ್ಯಾಂಪೇನ್ ಮೂಲಕ ಅವರು ಸಹಾಯ ಮಾಡಿದ್ದರು. .
ಅಭಿಷೇಕ್ ಸಿಂಗ್ ಅವರು ಸಂಗೀತಗಾರರಾದ ಬಾದ್‌ಶಾ, ಜುಬಿನ್ ನೌಟಿಯಾಲ್ ಮತ್ತು ಬಿ ಪ್ರಾಕ್ ಅವರ ಹಲವಾರು ಹಿಟ್ ಆಲ್ಬಂಗಳಲ್ಲಿ ಕಾಣಿಸಿಕೊಂಡ ಖ್ಯಾತಿ ಗಳಿಸಿದರು. ಕಾಣಿಸಿಕೊಂಡಿರುವ ಮ್ಯೂಸಿಕ್ ಆಲ್ಬಂಗಳು ಹೆಚ್ಚು ವೀಕ್ಷಣೆ ಗಳಿಸಿವೆ. ‘‘ಸಣ್ಣ ಹಳ್ಳಿಯ ಮಧ್ಯಮ ವರ್ಗದ ಕುಟುಂಬದಿಂದ ಬಂದವನು ನಾನು. ಶ್ರದ್ಧೆಯಿಂದ ಓದಿ, ಕಠಿಣ ಪರಿಶ್ರಮದಿಂದ ಐಎಎಸ್ ಅಧಿಕಾರಿಯಾದೆ’’ ಎಂದು ಅವರು ಹೇಳಿದ್ದಾರೆ. ಪ್ರಸ್ತುತ ಅವರು ತಮ್ಮ ಕನಸಿನಂತೆ ನಟನಾಗಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ:R J Rachana: ಚಟ್ ಪಟ್ ಎಂದು ಮಾತನಾಡುತ್ತಿದ್ದ ಆರ್.ಜೆ ರಚನಾ ಹೃದಯಾಘಾತದಿಂದ ನಿಧನ