ಮಂಗಳೂರು: (ಫೆ.23) Sabita Koraga: ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಶ್ರೇಣಿ, ಎನ್‌ಇಟಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದೊಂದಿಗೆ ತೇರ್ಗಡೆ ಹೊಂದಿರುವ ಕೊರಗ ಸಮುದಾಯದ ಸವಿತಾ ಕೊರಗ ಮೊದಲನೆಯವರಾಗಿದ್ದಾರೆ.
ಇದೀಗ ಅವರು ಸಮುದಾಯದ ಮೊದಲ ಮಹಿಳಾ ಡಾಕ್ಟರೇಟ್ ಪದವಿಯನ್ನು ಪಡೆದಿರುವುದು ಸಮುದಾಯ ಹೆಮ್ಮೆ ಪಟ್ಟಿದೆ.ಬಾಲ್ಯದಲ್ಲೇ ತಂದೆ ತಾಯಿಯನ್ನು ಕಳೆದುಕೊಂಡು ಕಡುಬಡತನದಲ್ಲಿ ದೊಡ್ಡಮ್ಮನ ಆಶ್ರಯದಲ್ಲಿ ಬೆಳೆದರು. ಶಿಕ್ಷಣದಲ್ಲಿ ಸಾಧನೆ ಮಾಡುವ ಗುರಿಯನ್ನು ಹೊಂದಿದ್ದ ಇವರು, ಆರ್ಥಿಕತೆ, ಬಡತನ ಮೊದಲಾದ ಸಂಕಷ್ಟಗಳನ್ನು ಮೆಟ್ಟಿನಿಂತು ಸಾಧನೆ ಮಾಡಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡಿರುವ ಸಬಿತಾ ಕೊರಗ ಅವರು ಸಮಾಜಶಾಸ್ತ್ರ ವಿಭಾಗದಲ್ಲಿ ಪಿಎಚ್ಡಿಗೆ ಅವಕಾಶ ಸಿಕ್ಕಿತು. ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರದ ವಿಭಾಗ ವಿಶ್ರಾಂತ ಪ್ರಾಧ್ಯಾಪಕ ಹಾಗೂ ಕುವೆಂಪು ವಿವಿ ವಿಶ್ರಾಂತ ಕುಲಪತಿ ಪ್ರೊ ಜೋಗನ್ ಶಂಕರ್ ಮಾರ್ಗದರ್ಶನದಲ್ಲಿ ಇವ್ಯಾಲ್ಯುವೇಷನ್ ಆಫ್ ಪಾಲಿಸೀಸ್ ಆಂಡ್ ಪ್ರೋಗ್ರಾಮ್ಸ್ ಆಫ್ ಟ್ರೈಬಲ್ ಡೆವಲಪ್‌ಮೆಂಟ್ ಆಫ್ ಕರ್ನಾಟಕ ಸ್ಟೇಟ್’ ಎಂಬ ವಿಷಯದಲ್ಲಿ ಮಂಗಳೂರು ವಿವಿಗೆ ಮಂಡಿಸಿದ ಪ್ರಬಂಧವನ್ನು ಪಿಎಚ್‌ಡಿಗೆ ಅಂಗೀಕರಿಸಲಾಗಿದೆ.
ನನ್ನ ಬಾಲ್ಯದಿಂದಲೂ ಬದುಕಿನಲ್ಲಿ ಸಂಕಷ್ಟವನ್ನು ಎದುರಿಸಿದ್ದೆ. ಇದೀಗ ಶೈಕ್ಷಣಿಕ ಸಾಧನೆಯಿಂದ ನಾನು ಕಂಡಿದ್ದ ಕನಸು ಈಡೇರಿದೆ. ಸಮುದಾಯದ ಏಳಿಗೆಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಸಬಿತಾ ಕೊರಗ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ:New Guidelines: ಶಿಕ್ಷಣ ಸಂಸ್ಥೆಗಳಿಗೆ ನೂತನ ಮಾರ್ಗಸೂಚಿ ಪ್ರಕಟ