ಬೆಂಗಳೂರು: (ಫೆ.23) MallathaHalli Lake :ಪ್ರಕೃತಿಯನ್ನು ಉಳಿಸಲು ಸಾಕಷ್ಟು ಕಷ್ಟ ಪಡುತ್ತಿದ್ದೇವೆ. ಬಿಲ್ಡಿಂಗ್ ಮೇಲೆ ಬಿಲ್ಡಿಂಗ್, ಕಾರ್ಖಾನೆಯಿಂದ ಈಗಾಗಲೇ ಪರಿಸರದ ವಾಯು ಗುಣಮಟ್ಟ ಕಡಿಮೆಯಾಗಿದೆ. ಸಾಲುಸಾಲು ಮರಗಳಿಲ್ಲದೆ ಜನರು ಉಸಿರಾಟದ ಕಷ್ಟಪಡುತ್ತಿದ್ದಾರೆ. ಇಷ್ಟಿದ್ದರೂ ಅಭಿವೃದ್ಧಿಯ ಹೆಸರಿನಲ್ಲಿ ಪರಿಸರವನ್ನು ಹಾಳು ಮಾಡಲು ರಾಜರಾಜೇಶ್ವರಿನಗರದ ಕ್ಷೇತ್ರದ ಶಾಸಕ ಮುನಿರತ್ನ ಕೆರೆಗಳ ಪಾಲಿನ ಯಮನಾಗಿ ಅವತಾರವೆತ್ತಿದ್ದಾರೆ. ನಗರದ ಮಲ್ಲತಹಳ್ಳಿ ಕೆರೆಯನ್ನು ಕೊಂಪೆ ಮಾಡಿ ಜಲಚರಗಳನ್ನು ಕೊಂದಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಇವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಕೆರೆಯ ಹೂಳನ್ನು ಹೊರಗೆ ಹಾಕಿ ಕೆರೆಯೊಳಗೆ ಕಟ್ಟಡ ತ್ಯಾಜ್ಯ ಸುರಿದು ಮಾಲಿನ್ಯ ಮಾಡುತ್ತಿದ್ದಾರೆ. ಅಲ್ಲದೆ ಕೆರೆಯ ಸುತ್ತಲೂ ಕಾಂಕ್ರೀಟ ಗೋಡೆ ಕಟ್ಟಿ ಮಳೆಯ ನೀರು ಕೂಡ ಸಂಗ್ರಹವಾಗದಂತೆ ಕಾಮಗಾರಿ ನಡೆಸುತ್ತಿದ್ದಾರೆ. ಕೆರೆಯ ನೀರನ್ನೇ ಅವಲಂಬಿಸಿರುವ ಪಕ್ಷಿಗಳು, ಜಲಚರಗಳು ಎಲ್ಲಿ ಹೋಗಬೇಕು.. ರಾಜರಾಜೇಶ್ವರಿನಗರದ ಶಾಸಕ ಮುನಿರತ್ನ ಅವರ ಕಾಮಗಾರಿಗೆ ಜನರು ಪ್ರಶ್ನೆಯೂ ಮಾಡುತ್ತಿಲ್ಲ. ನಗರದ ಅನೇಕ ಕರೆಗೆಳು ಬತ್ತಿಹೋಗಿದೆ.

ಬೆಂಗಳೂರು ಮಿಷನ್ 2022: ಬೆಂಗಳೂರು ಮಿಷನ್ 2022ರಲ್ಲಿ ಕೆರಗಳ ಅಭಿವೃಧ್ಧಿಯಾಗಬೇಕಾಗಿರುವ ಕೆರಗಳ ಪಟ್ಟಿಯಲ್ಲಿ ಕೋನಪ್ಪನ ಅಗ್ರಹಾರ, ಜೆಂಕೆನಹಳ್ಳಿ, ಗುಂಜೂರ್ ಪಾಳ್ಯ, ಬೈರಸಂದ್ರ(ವಾರ್ಡ್ 58), ಹೂಡಿ ಗಿಡ್ಡನಕೆರೆ, ತಲಘಟ್ಟಪುರ, ಚೊಕ್ಕಬಸ್ತಿ, ಪುಟ್ಟೇನಹಳ್ಳಿ, ಗೌಡನಪಾಳ್ಯ, ಕೆಂಬತ್ತಹಳ್ಳಿ, ದೇವಸಂದ್ರ, ಮಹದೇವಪುರ-2, ಯೆಲೇನಹಳ್ಳಿ, ಕಗ್ಗದಾಸನಪುರ, ಬಸಾಪುರ-2, ಕಮ್ಮನಹಳ್ಳಿ, ವಸಂತಪುರ, ಸುಬ್ಬರಾಯನ ಕೆರೆ(ಗೊಟ್ಟಿಗೆರೆ), ನಾಗೇಶ್ವರ ನಾಗೇನಹಳ್ಳಿ, ಹೊರಮಾವು, ಗಂಗಶೆಟ್ಟಿ ಕೆರೆ, ವಿಭೂತಿಪುರ ಕರೆಗಳು ಸೇರಿದೆ.
ಕೆರೆಗಳನ್ನು ನಾಶಮಾಡದೆ ಕೆರೆ ಹೂಳೆತ್ತುವುದು, ಕೆರೆ ಏರಿ ಸರಿಪಡಿಸುವುದು, ಒಳಚರಂಡಿ ವ್ಯವಸ್ಥೆ, ಕೆರೆ ಸುತ್ತಾ ಬೇಲಿ ಹಾಕುವುದು, ಕಸ ಹಾಕಲು ಪ್ರತ್ಯೇಕ ಕಸದ ಡಬ್ಬಿಗಳನ್ನು ಇಡುವ ವ್ಯವಸ್ಥೆ ಮಾಡಬೇಕಾಗಿದೆ.