ಮಂಗಳೂರು: (ಫೆ.23) Charles Michael D’Souza: ಚಾರ್ಲ್ಸ್ ಮೈಕಲ್ ಡಿಸೋಜಾ ವಾಹನ ಚಾಲನೆ ಪರವಾನಗಿ ಹೊಂದಿರುವ ಹಿರಿಯಜ್ಜ ಎಂದೇ ಫೇಮಸ್ ಆಗಿದ್ದಾರೆ. ಹೌದು 108 ವಯಸ್ಸಿನ ಶತಾಯುಷಿ ನಿವೃತ್ತ ಸೈನಿಕ ಚಾರ್ಲ್ಸ್ ಮೈಕೆಲ್ ಡಿಸೋಜಾ ಅವರು ಮಂಗಳೂರು ಲೇಡಿಹಿಲ್ ನಿವಾಸಿಯಾಗಿದ್ದಾರೆ.
ಯುವಕರು ನಿಬ್ಬೆರಗಾಗುವಂತೆ ವಾಹನ ಚಾಲನೆಯಲ್ಲಿ ಮಾಡುತ್ತಾರೆ. ಇವರ ಉತ್ಸಾಹ ಹಾಗೂ ನಿಪುಣತೆಯನ್ನು ಕಂಡು ಪ್ರಾದೇಶಿಕ ಸಾರಿಗೆ ಇಲಾಖೆ 2022 ರವರಿಗೆ ಪರವಾನಗಿಯನ್ನು ನವೀಕರಿಸಿದೆ.
ಸರ್ಕಾರದಿಂದ ಬರುವ ಪಿಂಚಣಿ ಹಣದಲ್ಲಿ ಜೀವನವನ್ನು ಸಾಗಿಸುತ್ತಿದ್ದಾರೆ ಇವರ ಪತ್ನಿ ಎಲಿಸಾ ಡಿಸೋಜಾ ಅವರು 9 ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. ಬಟ್ಟೆ ಒಗೆಯುವ ಕೆಲಸದಿಂದ ಹಿಡಿದು ಅಡುಗೆಮನೆ ಕೆಲಸ, ತೋಟದ ಕೆಲಸವನ್ನು ನಿರ್ವಹಿಸಿಕೊಂಡು ಚಟುವಟಿಕೆಯಿಂದ ಇದ್ದಾರೆ.

ಬ್ರಿಟಿಷ್ ಸೇನೆಯಲ್ಲಿ ಸತತ ಹತ್ತು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದರು. 1914ರಲ್ಲಿ ಊಟಿಯಲ್ಲಿ ಜನಿಸಿದವರು ಆಗಿನ ನಿಯಮದ ಪ್ರಕಾರ 18ನೇ ವಯಸ್ಸಿನಲ್ಲಿ ಬ್ರಿಟಿಷ್ ಸೇನೆಗೆ ಸೇರಿದ್ದರು. ಹತ್ತು ವರ್ಷ ಸೇವೆ ಸಲ್ಲಿಸಿ ನಿರ್ಗಮಿಸಿದರು. ಮದ್ರಾಸ ಸರ್ಕಾರದ ಲೋಕೋಪಯೋಗಿ ಇಲಾಖೆಯಲ್ಲಿ ಕಾಂಕ್ರೀಟ್ ಯಂತ್ರ ಚಲಾಯಿಸುವ ವಾಹನದ ಚಾಲಕರಾಗಿ ಮಂಗಳೂರಿನಲ್ಲಿ ಬಂದು ನೆಲೆಸಿದರು.
ಮರಿ ಮೊಮ್ಮಗಳ ಬಟ ಮಾಡ್ತಾರೆ
ಈ ವೇಳೆ ಮಂಗಳೂರು ಭಾಗದಲ್ಲಿ ನಿರ್ಮಿಸಿದ್ದ ಸೇತುವೆಗಳ ಕಥೆಗಳನ್ನು ನೆನಪಿಸಿಕೊಂಡಿದ್ದಾರೆ. ಕಲ್ಮಾಡಿ ಹೊಳೆಗೆ ಸೇತುವೆ ನಿರ್ಮಿಸುವಾಗ ರಾತ್ರಿ ಹಗಲು ಎಲ್ಲದೆ ಕೆಲಸ ನಡೆಯುತ್ತಿತ್ತು. ಹಗಲು ಕಾರ್ಮಿಕರು ಕೆಲಸ ಮಾಡಿದರೆ ರಾತ್ರಿ ಉಡುಪಿಯ ಸಂಸ್ಕೃತ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸೇವಾರೂಪದಲ್ಲಿ ಕೆಲಸ ಮಾಡುತ್ತಿದ್ದರು.
ಚಾರ್ಲ್ಸ್ ಅವರ ತಾಯಿ ಮೇರಿ ಕೂಡ 108 ವರ್ಷ ಆರೋಗ್ಯದಿಂದ ಬದುಕಿದ್ದರು ಎಂದು ಹೇಳಿದ್ದಾರೆ. ಸ್ವತಃ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಂಡು ತಮ್ಮ ಮರಿ ಮೊಮ್ಮಗಳ ಶಾಲಾ ಸಮವಸ್ತ್ರವನ್ನು ಹೋಗಿದ್ದು ಹಾಕುತ್ತಾರೆ. ಸದ್ಯ ಅವರು ಉಡುಪಿಯ ಪರ್ಕಳಕ್ಕೆ ಬಂದು ನೆಲೆಸಿದ್ದಾರೆ.
ಈಗಿನ ಯುವಜನತೆ ನಿಬ್ಬೆರಗಾಗುವಂತೆ ವಾಹನ ಚಾಲನೆಯಲ್ಲಿ ನಿಪುಣರಾಗಿದ್ದರು. ಆಗ ಅವರ ವಯಸ್ಸು 103 ಆಗಿತ್ತು, ಅವರದ್ದು ಕ್ರಿಯಾಶೀಲ ವ್ಯಕ್ತಿತ್ವ ಎಂದು ಉಡುಪಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರ್ ಅವರು ಹೊಗಳಿದ್ದಾರೆ.