ಬೆಂಗಳೂರು: (ಫೆ.23) :Car Theft: ಮಾರಾಟ ಮಳಿಗೆ ಎದುರು ನಿಲ್ಲಿಸಿದ್ದ ಕಾರು ಕಳ್ಳತನ ಮಾಡಿದ್ದ ಆರೋಪದಡಿ ನಜೀರ್ ಅಹ್ಮದ್ ಎಂಬುವರನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೇರಳದ ನಜೀರ್ ಪೋಷಕರ ಜೊತೆ ಬಾಲ್ಯದಲ್ಲಿ ಸೌದಿಗೆ ಹೋಗಿ ನೆಲೆಸಿದ್ದರು. ಅಲ್ಲಿಯೇ ಪೊಲೀಸ್ ಇಲಾಖೆಗೆ ಸೇರಿ 10 ವರ್ಷ ಕೆಲಸ ಮಾಡಿದ್ದರು. ಆದರೆ ಕೆಲವು ವೈಯಕ್ತಿಕ ಕಾರಣಗಳಿಂದ ಪೊಲೀಸ್ ಕೆಲಸಕ್ಕೆ ರಾಜೀನಾಮೆ ನೀಡಿ, ಕೇರಳಕ್ಕೆ ವಾಪಸು ಬಂದಿದ್ದರು.
ಬಳಿಕ ನಜೀರ್ ಮಗನಿಗೆ ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಸಿಕ್ಕಿತ್ತು. ಮಗನ ಜೊತೆ ನಜೀರ್ ಬೆಂಗಳೂರಿಗೆ ನಗರಕ್ಕೆ ಬಂದಿದ್ದರು. ಮಗನ ಜೊತೆ ವಾಸವಾಗಿದ್ದರು. ಆದ್ರೆ ಖರ್ಚಿಗೆ ಮಗ ಹಣ ಕೊಡುತ್ತಿರಲಿಲ್ಲ. ಹೀಗಾಗಿ ನಜೀರ್ ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೂ ಟಾಟಾ ಹ್ಯಾರಿಯರ್ ಕಾರನ್ನು ಮಾಲೀಕರು, ಸರ್ವೀಸ್‌ಗೆಂದು ಮಳಿಗೆ ಬಳಿ ನಿಲ್ಲಿಸಿ ಹೋಗಿದ್ದರು. ಮಳಿಗೆ ಬಂದಿದ್ದ ಆರೋಪಿ ನಜೀರ್ ಅಹ್ಮದ್ ಕಾರು ಕದ್ದುಕೊಂಡು ಪರಾರಿಯಾಗಿದ್ದರು. ಕಾರಿನಲ್ಲಿ ಅಳವಡಿಸಿದ್ದ ಬ್ಲ್ಯೂಟೂತ್ ಸಹಾಯದಿಂದ ಆರೋಪಿ ನಜೀರ್ ಸುಳಿವು ಸಿಕ್ಕಿತ್ತು. ನಜೀರ್ ಬಂಧಿಸಿದ ಪೊಲೀಸರು ಅವರಿಂದ ಕಾರು ಹಾಗೂ ಎರಡು ದ್ವಿಚಕ್ರ ವಾಹನ ಜಪ್ತಿ ಮಾಡಿಕೊಂಡಿದ್ದಾರೆ.
ಇದನ್ನು ಓದಿ:Uroos Festival: ಜಾಯಿಂಟ್ ವ್ಹೀಲ್ ತುಂಡಾಗಿ ನಾಲ್ವರು ಮಕ್ಕಳಿಗೆ ಗಾಯ!