ಬೆಂಗಳೂರು: (ಫೆ.22): R J Rachana: ಸಾಲು ಸಾಲಾಗಿ ಅನೇಕ ಕಲಾವಿದರು, ಹೆಸರಾಂತ ವ್ಯಕ್ತಿಗಳು ಕಣ್ಮರೆಯಾಗುತ್ತಿದ್ದಾರೆ ಅಂತಹ ಸಾಲಿನಲ್ಲಿ ಪಟ ಪಟ ಅಂತ ಮಾತನಾಡುತ್ತ, ಎಲ್ಲರ ಮನ ಗೆದ್ದಿದ್ದ ಆರ್.ಜಿ ( ರೇಡಿಯೋ ಜಾಕಿ) ರಚನಾ ಅಕಾಲಿಕ ಮರಣ ಹೊಂದಿದ್ದಾರೆ. ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ’ ಖ್ಯಾತಿಯ ರೇಡಿಯೋ ಜಾಕಿ ರಚನಾ ಹೃದಯಾಘಾತದಿಂದ ಅವರು ನಿಧನರಾಗಿದ್ದುಅವರ ಅನಿರೀಕ್ಷಿತ ನಿಧನ ಅಭಿಮಾನಿಗಳಿಗೆ ಶಾಕ್ ನೀಡಿದೆ. ರಚನಾ ಅವರ ನಿಧನಕ್ಕೆ ಚಿತ್ರರಂಗ, ಸಹದ್ಯೋಗಿಗಳು, ಅಪಾರ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.

ಅವರಿಗೆ 35 ವರ್ಷ ವಯಸ್ಸಾಗಿತ್ತು ರಚನಾ ರೇಡಿಯೋ ಮಿರ್ಚಿಯಲ್ಲಿ ಆರ್ಜೆ ಆಗಿದ್ದ ಅವರು, ತಮ್ಮ ಮಾತು, ಧ್ವನಿಯಿಂದ ಅಪಾರ ಕೇಳುಗ ಅಭಿಮಾನಿಗಳನ್ನು ಹೃದಯವನ್ನು ಗೆದ್ದಿದ್ದರು. ರಚನಾ ಧ್ವನಿ ಮತ್ತು ಮಾತಿನ ಮೋಡಿಗೆ ಒಳಗಾದವರು ಅದೆಷ್ಟೋ ಮಂದಿ. ಅದಕ್ಕಾಗಿಯೇ ರೆಡಿಯೋ ಮಿರ್ಚಿ ಕೇಳುತ್ತಿದ್ದವರು ಅನೇಕರಿದ್ದಾರೆ. ಸದಾ ನಗು ನಗುತ್ತಲೇ ಇರುತ್ತಿದ್ದ ರಚನಾಗೆ ಸಾಕಷ್ಟು ಸ್ನೇಹಿತರೂ ಇದ್ದರು. ಜೆಪಿ ನಗರದ ಪ್ಲಾಟ್ನಲ್ಲಿ ರಚನಾಗೆ ಎದೆ ನೋವು ಕಾಣಿಸಿಕೊಂಡಿತ್ತು, ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ಅವರು ನಿಧನರಾಗಿದ್ದಾರೆ.
ರಚನಾ ಅವರು ಅರ್ಜೆ ಕೆಲಸ ಬಿಟ್ಟಿದ್ದರು ಎನ್ನಲಾಗಿದೆ. ರಚನಾ ತಂದೆ-ತಾಯಿ ಚಾಮರಾಜಪೇಟೆಯಲ್ಲಿ ವಾಸವಿದ್ದು, ರಚನಾ ಪಾರ್ಥೀವ ಶರೀರವನ್ನು ಚಾಮರಾಜ ಪೇಟೆ ನಿವಾಸಕ್ಕೆ ಕೊಂಡೊಯ್ಯುತ್ತಿರುವುದಾಗಿ ರಚನಾ ಅವರ ಸ್ನೇಹಿತರು ಮಾಹಿತಿ ನೀಡಿದ್ದಾರೆ.