ವಯನಾಡ್: (ಫೆ.22)Hijab:ಹಿಜಾಬ್ ವಿವಾದ ಕರ್ನಾಟಕ ಮಾತ್ರವಲ್ಲದೆ ಕೇರಳದ ಗಡಿ ಭಾಗದಲ್ಲಿರುವ ಸದ್ದು ಮಾಡುತ್ತಿದೆ. ಕಾನ್ವೆಂಟ್ ಪ್ರಿನ್ಸಿಪಾಲ್ ಒಬ್ಬರು ಹಿಜಾಬ್ ತೆಗೆಯಿರಿ ಇಲ್ವಾ ಪಿಸಿ ತೆಗೆದುಕೊಂಡುಹೋಗಿ ಎಂದು ವಿದ್ಯಾರ್ಥಿಗಳಿಗೆ ಹೇಳಿರುವ ಘಟನೆ ವಯನಾಡಿನ ಮಾನಂದವಾಡಿಯ ಲಿಟಲ್ ಫ್ಲವರ್ ಎಂಬ ಕ್ರಿಶ್ಚಿಯನ್ ಕಾನ್ವೆಂಟ್ ನಲ್ಲಿ ನಡೆದಿದೆ.
ಶಾಲೆಗೆ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು. ಪ್ರಿನ್ಸಿಪಾಲ್ ಹಿಜಾಬ್ ತೆಗೆಯಲು ಸೂಚನೆ ನೀಡಿದ್ದರು ಆದರೆ ವಿದ್ಯಾರ್ಥಿನಿಯರ ಪೋಷಕರು ಅವರು ಪ್ರತಿಭಟನೆ ನಡೆಸಿದ್ದಾರೆ. ಇಲ್ಲಿ ಪ್ರಿನ್ಸಿಪಲ್ ಅವರು ನಿಮಗೆ ನಿಮ್ಮ ಮೂಲಭೂತ ಹಕ್ಕು ಮುಖ್ಯವಾದರೆ ಅದು ಸಿಗುವ ಬೇರೆ ಶಾಲೆಯಲ್ಲಿ ಪ್ರವೇಶ ಪಡೆಯಿರಿ ಎಂದು ಟಿಸಿ ನೀಡಲು ಮುಂದಾಗಿದ್ದಾರೆ.

ಪ್ರಿನ್ಸಿಪಾಲರ ವಿರುದ್ಧ ಆಕ್ರೋಶ ತೀವ್ರಗೊಂಡ ಬಳಿಕ ಪ್ರಿನ್ಸಿಪಲ್ ಅವರು ತಮ್ಮ ಹೇಳಿಕೆಯಿಂದ ಹಿಂಪಡೆದಿದ್ದಾರೆ.ಹಿಜಾಬ್ ಮೇಲಿನ ನಿಷೇಧವನ್ನು ಶಾಲೆ ಹಿಂಪಡೆದಿದೆ. ಸ್ವತಹ ಕ್ರೈಸ್ತ ಸನ್ಯಾಸಿಯಾಗಿ ರುವ ಪ್ರಿನ್ಸಿಪಾಲ್ ಅವರು ಸ್ಕಾರ್ಫ್ ಧರಿಸುತ್ತಾರೆ ಆದರೆ ಮುಸ್ಲಿಮ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದರೆ ಓದಿಗೆ ತೊಂದರೆಯಾಗುತ್ತದೆ ಎನ್ನುತ್ತಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಹಿಜಾಬ್ ಕುರಿತು ಅಮಿತ್ ಶಾ ಹೇಳಿಕೆ
ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ಕುರಿತ ವಿವಾದಕ್ಕೆ ಇದೇ ಮೊದಲ ಬಾರಿ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಲ್ಲಾ ಧರ್ಮದವರೂ ಶಿಕ್ಷಣ ಸಂಸ್ಥೆಗಳ ವಸ್ತ್ರಸಂಹಿತೆ ಪಾಲನೆ ಮಾಡಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ವಿಷಯದಲ್ಲಿ ಕೋರ್ಟ್ ತೀರ್ಪು ಏನೇ ಬಂದರೂ ಅದನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದ್ದಾರೆ.
ದೇಶ ಸಂವಿಧಾನದ ಮೇಲೆ ನಡೆಯುತ್ತದೆಯೋ ಅಥವಾ ಹುಚ್ಚಾಟದಲ್ಲಿ ನಡೆಯುತ್ತದೆಯೋ ಎಂಬುದು ನಿರ್ಧಾರವಾಗಬೇಕು. ನನ್ನ ವೈಯಕ್ತಿಕ ನಂಬಿಕೆ ಏನಿದೆಯೋ ಅದು ಕೋರ್ಟ್ ಈ ಕುರಿತು ನಿರ್ಧರಿಸುವವರೆಗೆ ಮಾತ್ರ ಇರುತ್ತದೆ. ಒಮ್ಮೆ ಕೋರ್ಟ್ ನಿರ್ಧಾರ ಕೈಗೊಂಡ ಮೇಲೆ ನಾನು ಹಾಗೂ ಎಲ್ಲರೂ ಆ ನಿರ್ಧಾರ ಒಪ್ಪಿಕೊಳ್ಳಬೇಕು. ಶಾಲೆಗಳು ನಿಗದಿಪಡಿಸಿದ ವಸ್ತ್ರಸಂಹಿತೆ ಹಾಗೂ ಸಮವಸ್ತ್ರವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಅನುಸರಿಸಬೇಕು ಎಂದು ಈಗಲೂ ನಾನು ವೈಯಕ್ತಿಕವಾಗಿ ನಂಬಿದ್ದೇನೆ ಎಂದು ಹೇಳಿದ್ದಾರೆ.