ಬೆಂಗಳೂರು: (ಫೆ.22): Harassment: ಗಂಡನ ಮನೆಯವರ ಕಿರುಕುಳ ತಾಳಲಾರದೆ ಸೀಮೆಎಣ್ಣೆ ಸುರಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೇವರಜೀವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಡಿ.ಜೆ.ಹಳ್ಳಿಯ ಈದ್ಗಾ ಮೊಹಲ್ಲಾದಲ್ಲಿ ವಾಸವಾಗಿದ್ದ ಅನಿಶಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ಅನಿಶಾ, ನಿಜಾಮುದ್ದೀನ್ ಜೊತೆಗೆ ಎರಡನೇ ಮದುವೆಯಾಗಿದ್ದರು. ಆರಂಭದಲ್ಲಿ ದಂಪತಿ ಅನೋನ್ಯತೆಯಿಂದ ಇದ್ದರು.. ಇದರ ಪ್ರತಿಫಲವಾಗಿ ಎರಡು ವರ್ಷದ ಹಾಗೂ ಆರು ತಿಂಗಳ ಮುದ್ದಾದ ಮಕ್ಕಳಿದ್ದರು.



ಸುಂದರವಾಗಿಲ್ಲ ಎಂದು ಕಿರುಕುಳ:
ಹೀಗಿದ್ದರೂ ನಿಜಾಮುದ್ದೀನ್ ಆಗಾಗ ಹೆಂಡ್ತಿಗೆ ನೀನು ಕುರೂಪಿ, ಸುಂದರವಾಗಿಲ್ಲ. ಬೇಗನೇ ಸತ್ತರೆ ಮತ್ತೊಂದು ಮದುವೆಯಾಗುತ್ತೇನೆ ಎಂದು ಕಿರುಕುಳ ನೀಡುತ್ತಿದ್ದನಂತೆ. ಇದಕ್ಕೆ ಪತಿಯ ತಾಯಿ ಖಲೀಂ ಉನ್ನಿಸಾ ಕೂಡ ಸಾಥ್ ನೀಡಿದ್ದಳಂತೆ. ಮದುವೆಯಾದಾಗಿನಿಂದ ಗಂಡ ಹಾಗೂ ಅತ್ತೆಯಿಂದ ಕಿರುಕುಳ ನೀಡುತ್ತಿದ್ದರಂತೆ. ಅಷ್ಟೆ ಅಲ್ಲದೇ ಇದೇ ತಿಂಗಳು 17 ರಂದು ಗಂಡನ ಮನೆಯವರು ಇನ್ನೂ ಸತ್ತಿಲ್ವಾ ಎಂದು ಹೀಯಾಳಿಸಿದ್ದರಂತೆ. ಇದರಿಂದ ಮನನೊಂದು ಅನಿಶಾ ಮಾರನೇ ದಿನ ಮುಂಜಾನೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿದ್ದಾರೆ. ಮನೆಯವರ ಗಮನಕ್ಕೆ ಬರುತ್ತಿದ್ದಂತೆ ಕೂಡಲೇ ಬೆಂಕಿ ಆರಿಸಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಅನಿಶಾ ಮೃತಪಟ್ಟಿದ್ದಾರೆ.
ಘಟನೆ ಸಂಬಂಧ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ನಿಜಾಮುದ್ದೀನ್ ನನ್ನ ವಶಕ್ಕೆ ಪಡೆದುಕೊಂಡಿದ್ದಾರೆ.