ಬೆಂಗಳೂರು: (ಫೆ.21): Red Sandal: ತೈವಾನ್‌ಗೆ ರಫ್ತು ಮಾಡಲು ಸಿದ್ಧಪಡಿಸಲಾಗಿದ್ದ ರಕ್ತ ಚಂದನ ಜಪ್ತಿ ಮಾಡಿಕೊಂಡಿರುವ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಷ್ಟೇ ಅಲ್ಲದೇ ಆರೋಪಿಗಳನ್ನು ಹೆಚ್ಚಿನ ಮಾಹಿತಿಗೊಳಪಡಿಸಿದ್ದಾರೆ.
ವೈಟ್ ಫೀಲ್ಡ್ ನ ಕಂಟೇನರ್ ಡಿಪೋವೊಂದರಲ್ಲಿ ಮೂವರು ಆರೋಪಿಗಳ ತಂಡ ಪ್ಲೈವುಡ್ ಬಾಕ್ಸಿನಲ್ಲಿ ರಕ್ತಚಂದನದ ತುಂಡುಗಳ ಇರಿಸಿರುವ ಖಚಿತ ಮಾಹಿತಿ ದೊರಕಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು 2.4 ಕೋಟಿ ಮೌಲ್ಯದ 4.82 ಟನ್ ರಕ್ತಚಂದನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮೂವರು ಆರೋಪಿಗಳಿಂದ ತೈವಾನ್ ಗೆ ರಕ್ತಚಂದನ ತುಂಡುಗಳನ್ನು ಸರಬರಾಜು ಮಾಡಲು ಸಿದ್ಧತೆ ನಡೆಸಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಆದ್ರೆ ಆರೋಪಿಗಳು ಎಲ್ಲಿಂದ ರಕ್ತ ಚಂದನ ತರಿಸಿಕೊಳ್ಳುತ್ತಿದ್ದರು ಎಂಬುದರ ಬಗ್ಗೆ ಹೆಚ್ಚಿನ ತನಿಖೆಯನ್ನು ಅಧಿಕಾರಿಗಳು ಕೈಗೊಂಡಿದ್ದಾರೆ.
ನೈಸ್ ರಸ್ತೆಯಲ್ಲಿ ಸಂಚಾರಿ ಪೊಲೀಸರ ಕಾರ್ಯಾಚರಣೆ – ಒಂದೇ ದಿನ 126 ಕೇಸ್ ದಾಖಲಿಸಿ 1,27 ಲಕ್ಷ ದಂಡ ವಸೂಲಿ
ಬೆಂಗಳೂರು:(ಫೆ.21): ಇತ್ತೀಚಿನ ದಿನಗಳಲ್ಲಿ ನೈಸ್ ರಸ್ತೆಯಲ್ಲಿ ರಸ್ತೆ ಅಪಘಾತ ಹೆಚ್ಚಾದ ಹಿನ್ನೆಲೆಯಲ್ಲಿ ರಾತ್ರಿ ವೇಳೆ ನಗರ ಸಂಚಾರ ಪೊಲೀಸರು ಬೈಕ್ ಚಾಲನೆ ವೇಳೆ ನಿಷೇಧಿಸಿದ್ದರು. ಆದಾಗ್ಯೂ ಆಕ್ಸಿಡೆಂಟ್ ಪ್ರಮಾಣ ಕಡಿಮೆ ಆಗಿರಲಿಲ್ಲಾ. ಹೀಗಾಗಿ ನಿನ್ನೆ ನೈಸ್ ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ಇನ್ನೂ ನಿನ್ನೆಯ ಈ ಒಂದು ದಿನದ ಕಾರ್ಯಾಚರಣೆಯಲ್ಲಿ ಬರೋಬ್ಬರಿ 126 ಪ್ರಕರಣ ದಾಖಲಿಸಿ 1, 27 ಲಕ್ಷ ದಂಡ ವಸೂಲಿ ಮಾಡಿದ್ದಾರೆ.

ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣೆಯ ಇನ್ ಸ್ಪೆಕ್ಟೆರ್ ವೆಂಕಟೇಶ್ ನೇತೃತ್ವದಲ್ಲಿ ಎಎಸ್ಐ ಜಿ.ಎನ್.ನಾಗರಾಜು ತಂಡವು ಸಂಚಾರ ಅರಿವಿನ ಜೊತೆಗೆ ಅತಿ ವೇಗವಾಗಿ ಚಾಲನೆ ಮಾಡಿದ ಚಾಲಕರ ವಿರುದ್ಧ ಕಾರ್ಯಾಚರಣೆ ನಡೆಸಿತು. ನೈಸ್ ಮುಖ್ಯರಸ್ತೆಯಲ್ಲಿ ಕನಕಪುರ ರಸ್ತೆಯ ಟೋಲ್ ಸಮೀಪ ಅತಿ ವೇಗದ ಚಾಲನೆಯಿಂದ ಮಾರಣಾಂತಿಕ ರಸ್ತೆ ಅಪಘಾತ ಹೆಚ್ಚಾಗುತ್ತಿವೆ.
ಇದನ್ನು ಓದಿ: ಸಿನಿಮಿಯಾ ರೀತಿಯಲ್ಲಿ ತಲ್ವಾರ್ ಹಿಡಿದು ಹಣ ವಸೂಲಿಗೆ ನಿಂತ ರೌಡಿಗಳು | Secular Tv