ಹೊಸದಿಲ್ಲಿ: (ಫೆ.21): New Education Policy: ಹೊಸ ಶಿಕ್ಷಣದ ನೀತಿಯಲ್ಲಿ ಐದು ವಿಷಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಅವುಗಳು ಸಾರ್ವತ್ರಿಕ ಗುಣಮಟ್ಟದ ಶಿಕ್ಷಣದ, ಪರಿಸರ ವ್ಯವಸ್ಥೆಯ ಅಭಿವೃದ್ಧಿ ಡಿಜಿಟಲ್ ಕೌಶಲ್ಯ, ನಗರ ಅಭಿವೃದ್ಧಿ ಮತ್ತು ವಿನ್ಯಾಸ, ಉತ್ತಮ ದರ್ಜೆಯ ವಿಶ್ವವಿದ್ಯಾನಿಲಯಗಳು ಮತ್ತು AVGC ಉದ್ಯಮಗಳನ್ನು ನಿರ್ಮಿಸಿ ಜಾಗತಿಕರಣದ ಕಡೆ ಹೆಚ್ಚು ಒತ್ತು ಕೊಟ್ಟಿರುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.
2022-23 ರ ಬಜೆಟ್ ನ ಅನುಷ್ಠಾನವು ಹೊಸ ಶಿಕ್ಷಣ ನೀತಿ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದರು.ದೇಶದ ಭವಿಷ್ಯಕ್ಕೂ ಉತ್ತಮವಾಗಿದೆ. ಭಾರತದಲ್ಲಿ ಡಿಜಿಟಲ್ ಸಂಪರ್ಕ ಹೆಚ್ಚಿಸುವಲ್ಲಿ ಕೆಲಸ ಮಾಡಲಾಗುತ್ತಿದೆ.ಇಂದಿನ ಪೀಳಿಗೆಯ ಸಹಾಯದಿಂದಲೇ ದೇಶದ ಭವಿಷ್ಯಕ್ಕೂ ದಾರಿಯಾಗಲಿದೆ. ಯುವ ಪೀಳಿಗೆಯೇ ಮುಂದಿನ ಭವಿಷ್ಯವನ್ನು ಸಶಕ್ತಗೊಳಿಸುವುದು ಎಂದು ಹೇಳಿದರು.

ಆನ್‌ಲೈನ್ ತರಬೇತಿಯ ಮೂಲಕ ನಾಗರಿಕರಿಗೆ ಕೌಶಲ್ಯವನ್ನು ಹೆಚ್ಚಿಸುವುದು, ಜೀವನೋಪಾಯಕ್ಕಾಗಿ ಡಿಜಿಟಲ್ ಪರಿಸರ ವ್ಯವಸ್ಥೆ – DESH-ಸ್ಟಾಕ್ ಇ-ಪೋರ್ಟಲ್ ಅನ್ನು ಪ್ರಾರಂಭಿಸಲಾಗುವುದು,ಇದರಿಂದ ಸಂಸ್ಥೆಗಳಲ್ಲಿ ಸೀಟುಗಳ ಸಮಸ್ಯೆಯನ್ನು ತಡೆಯಬಹುದು ಎಂದು ತಿಳಿಸಿದ್ದಾರೆ.
21 ನೇ ಶತಮಾನಕ್ಕೆ ಕಲಿಕೆ ಮತ್ತು ಮರು-ಕಲಿಕೆಯನ್ನು ಹೇಗೆ ಮತ್ತಷ್ಟು ಹೆಚ್ಚಿಸುತ್ತದೆ ಎಂಬುದನ್ನು ಪ್ರಸ್ತಾಪ ಮಾಡಿದ್ದಾರೆ.”ಇ-ವಿದ್ಯಾ, ಒನ್ ಕ್ಲಾಸ್ ಒನ್ ಚಾನೆಲ್, ಡಿಜಿಟಲ್ ಲ್ಯಾಬ್‌ಗಳು ಮತ್ತು ಡಿಜಿಟಲ್ ವಿಶ್ವವಿದ್ಯಾಲಯದಂತಹ ಮೂಲಸೌಕರ್ಯ ಅಭಿವೃದ್ಧಿಯು ಎಲ್ಲರಿಗೂ ಶಿಕ್ಷಣವನ್ನು ಖಚಿತಪಡಿಸುತ್ತದೆ” ಎಂದು ಹೇಳಿದ್ದಾರೆ.
Talking about how this year’s Budget will give a boost to the crucial education sector. https://t.co/c4YpiOKL2S
— Narendra Modi (@narendramodi) February 21, 2022