International Mother Language Day:(ಫೆ.21): ಬಹುಭಾಷೆ ಮತ್ತು ಬಹುಸಂಸ್ಕೃತಿಯನ್ನು ಪ್ರತಿಬಿಂಬಿಸಲು ಮತ್ತು ಪ್ರೋತ್ಸಾಹಿಸಿ ಉಳಿಸಲು ಫೆ . 21 ನ್ನು ವಿಶ್ವ ಮಾತೃ ಭಾಷಾ ದಿನವಾಗಿ ಆಚರಿಸಲಾಗುತ್ತದೆ.1999 ರಲ್ಲಿ ಯುನೆಸ್ಕೋ ಇದನ್ನು ಘೋಷಿಸಿತು. ವಿಶ್ವಸಂಸ್ಥೆಯು 2008 ನ್ನು “ವಿಶ್ವ ಭಾಷೆಗಳ ವರ್ಷ” ಎಂದು ಆಚರಿಸಿತು. 2000 ನೆಯ ಇಸವಿಯಿಂದ ಪ್ರತಿ ವರ್ಷ ವಿಶ್ವ ಮಾತೃಭಾಷಾ ದಿವಸವನ್ನು ಆಚರಿಸಲಾಗುತ್ತಿದೆ.1952 ರ ಫೆ .21 ರಂದು ಢಾಕಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ತೀವ ಸ್ವರೂಪ ಪಡೆಯಿತು. ಪೊಲೀಸ್ ಗೋಲಿಬಾರಿನಲ್ಲಿ ಕೆಲವು ವಿದ್ಯಾರ್ಥಿಗಳು ಅಸುನೀಗಿದರು . ಆ ನೆನಪಿಗಾಗಿ ವಿಶ್ವ ಮಾತೃಭಾಷಾ ದಿನ ಆಚರಣೆ ರೂಢಿಗೆ ಬಂತು.
ಕರ್ನಾಟಕದಲ್ಲಿ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತದೆ. ಪ್ರತಿ ವ್ಯಕ್ತಿಯು ಜನನದಿಂದ ಮಾತನಾಡುತ್ತಿರುವ ಅಥವಾ ಆ ವ್ಯಕ್ತಿಯ ಮನೆಯಲ್ಲಿ, ಸಮುದಾಯದಲ್ಲಿ ಮಾತನಾಡುವ ಭಾಷೆಯನ್ನು ಮಾತೃಭಾಷೆ ಎಂದು ಪರಿಗಣಿಸಲಾಗುತ್ತದೆ. ಈ ಭಾಷೆಯಲ್ಲಿ ಜ್ಞಾನವನ್ನು ನೀಡಿದರೆ ಹೆಚ್ಚು ಪರಿಣಾಮಕಾರಿಯಾಗಿ ಅರ್ಥವಾಗುತ್ತದೆ, ಮಾತೃಭಾಷೆಯಿಂದ ಜ್ಞಾನ ಹೆಚ್ಚಾಗುತ್ತದೆ ಎಂದು ಅನೇಕ ಸಂಶೋಧನೆಗಳು ಹೇಳಿವೆ.

ಸಂವಿಧಾನದ ಪರಿಚ್ಛೇದದಲ್ಲಿದೆ ಈ ಭಾಷೆಗಳು
ಆಸ್ಸಾಮಿ, ಬಂಗಾಲಿ, ಗುಜರಾತಿ, ಹಿಂದಿ , ಕನ್ನಡ, ಕಾಶ್ಮೀರಿ, ಕೊಂಕಣಿ, ಮಲಯಾಳ, ಮಣಿಪುರಿ, ಮರಾಠಿ, ನೇಪಾಲಿ, ಒರಿಯಾ, ಪಂಜಾಬಿ, ಸಂಸ್ಕೃತ, ಸಿಂಧಿ, ತಮಿಳು, ತೆಲುಗು, ಉರ್ದು, ಬೋಡೋ, ಸಂಥಲಿ, ಮೈಥಿಲಿ ಹಾಗೂ ಡೊಗ್ರಿ ಭಾಷೆಗಳು ಮಾತ್ರ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸ್ಥಾನ ಪಡೆದ 22 ಭಾಷೆಗಳಾಗಿವೆ.
2022ನೇ ಸಾಲಿನ ‘ಮಾತೃಭಾಷೆ ದಿನ’ದ ಘೋಷವಾಕ್ಯ ” ಬಹುಭಾಷೆಗಳ ಕಲಿಕೆಗೆ ತಂತ್ರಜ್ಞಾನ ಬಳಕೆ: ಸವಾಲುಗಳು ಮತ್ತು ಅವಕಾಶಗಳು” ಎಂದು ಆಗಿದೆ. ಹೆಚ್ಚು ಪದ ಶೋಧನೆಗೆ ಒಳಪಟ್ಟಿರುವ ಪದ ಎಂದು ಗೂಗಲ್ ಇಂಡಿಯಾ ಟ್ವೀಟ್ ಮಾಡಿದೆ. ಇದಲ್ಲಿ ಬಾರಿಸು ಕನ್ನಡ ಡಿಂಡಿಮವ ಎನ್ನುವ ಪದ 5 ನೇ ಅತೀ ಹೆಚ್ಚು ಜನ ಹುಡುಕಿರುವ ಪದ ಎಂದು ಗುರುತಿಸಿದೆ.
0:00🔘━━━━━━━━42:28:54
— Google India (@GoogleIndia) February 21, 2022
↻ ⊲ Ⅱ ⊳ ↺
volume: ▁▂▃▄▅▆▇ 100%
Just us on #InternationalMotherLanguageDay, repeatedly listening to *drumroll* ಬಾರಿಸು ಕನ್ನಡ ಡಿಂಡಿಮವ, the 5th highest Search trend in Kannada over the last 6 months 🥁🥁🥁
ಭಾರತದಲ್ಲಿ 19,500 ಕ್ಕೂ ಹೆಚ್ಚು ಆಡುಭಾಷೆಗಳಿವೆ ಇವೆಲ್ಲವನ್ನು ತಾಯ್ನುಡಿ ಎಂದು ಪರಿಗಣಿಸಬಹುದಾಗಿದೆ ಎಂದು ಇತ್ತೀಚಿನ ಜನಗಣತಿ ಆಧರಿಸಿ ರೂಪಿಸಲಾದ ವರದಿ ತಿಳಿಸಿದೆ. 2011 ರ ಜನಗಣತಿ ವರದಿ ಪ್ರಕಾರ, 19,569 ಕ್ಕೂ ಅಧಿಕ ಮಾತೃಭಾಷೆಗಳಿವೆ. ಆದರೆ ಶೇ. 96.71 ರಷ್ಟು ಜನಸಂಖ್ಯೆ 22 ಅಧಿಸೂಚಿತ ಭಾಷೆಗಳನ್ನೇ ತಮ್ಮ ಮಾತೃಭಾಷೆಯನ್ನಾಗಿ ಬಳಸುತ್ತಾರೆ. ಒಟ್ಟಾರೆ 270 ಕ್ಕೂ ಅಧಿಕ ಗುರುತು ಸಿಗದ ತಾಯ್ನುಡಿಗಳಿದ್ದು 10 ಸಾವಿರಕ್ಕೂ ಅಧಿಕ ಮಂದಿ ಮಾತನಾಡುತ್ತಿದ್ದಾರೆ .