ನವದೆಹಲಿ: (ಫೆ.20): T20 Test Match: ಶ್ರೀಲಂಕಾ (Shri lank) ವಿರುದ್ಧದ ಮೂರು ಟಿ–20 ಹಾಗೂ ಎರಡು ಟೆಸ್ಟ್ ಪಂದ್ಯಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) (BCCI) ಭಾರತ ತಂಡವನ್ನು ಪ್ರಕಟಿಸಿದೆ. ಭಾರತ ಟೆಸ್ಟ್ ತಂಡದ ಪಟ್ಟಿ (Test cricket team) ಪ್ರಕಟವಾಗಿದ್ದು ಹಿಟ್‌ಮ್ಯಾನ್ ರೋಹಿತ್ ಶರ್ಮಾ (Rohith Sharma) ನಾಕಯಕನಾಗಿ ಹಾಗೂ ಬೂಮ್ರಾ ಉಪನಾಯಕನಾಗಿ ಆಯ್ಕೆ ಮಾಡಲಾಗಿದೆ. ಆದರೆ ವಿರಾಟ್ (Virat Kohli) ಹಾಗೂ ಪಂಥ್‌ಗೆ ವಿಶ್ರಾಂತಿ ನೀಡಿರುವುದು ಅಭಿಮಾನಿಗಳಲ್ಲಿ ಕೊಂಚ ಬೇಸರ ತರಿಸಿದೆ
ಫೆ.24ರಂದು ಲಖನೌದಲ್ಲಿ ಮೊದಲ ಟಿ–20 ಪಂದ್ಯ ನಡೆಯಲಿದ್ದು, ಫೆ.26, 27ರಂದು ಧರ್ಮಶಾಲಾದಲ್ಲಿ ಎರಡು ಮತ್ತು ಮೂರನೇ ಪಂದ್ಯ ನಡೆಯಲಿದೆ. ಮಾ.4ರಂದು ಮೊಹಾಲಿಯಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಮಾ.12ರಿಂದ ಬೆಂಗಳೂರಿನಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ.
ಟಿ–20 ಸರಣಿಗೆ ಪ್ರಕಟಗೊಂಡಿರುವ ತಂಡ: ರೋಹಿತ್ ಶರ್ಮಾ (ನಾಯಕ), ಜಸ್‌ಪ್ರೀತ್ ಬುಮ್ರಾ (ಉಪನಾಯಕ), ಋತುರಾಜ್ ಗಾಯಕವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಇಶಾನ್ ಕಿಶನ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ದೀಪಕ್ ಚಾಹರ್, ದೀಪಕ್ ಹೂಡಾ, ರವೀಂದ್ರ ಜಡೇಜಾ, ಯಜುವೇಂದ್ರ ಚಾಹಲ್, ಕೆ.ಬಿಶ್ವೇಂದ್ರ ಚಾಹಲ್, ಕೆ. ಯಾದವ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆವೇಶ್ ಖಾನ್

ಹಿಟ್‌ಮ್ಯಾನ್ (Hit man) ಗೆ ಟೆಸ್ಟ್ ನಾಯಕನ ಪಟ್ಟ:
ಭಾರತ ಟೆಸ್ಟ್ ತಂಡದ ಪಟ್ಟಿ ಪ್ರಕಟವಾಗಿದ್ದು ಹಿಟ್‌ಮ್ಯಾನ್ ರೋಹಿತ್ ಶರ್ಮಾ ನಾಕಯಕನಾಗಿ ಹಾಗೂ ಬೂಮ್ರಾ ಉಪನಾಯಕನಾಗಿ ಆಯ್ಕೆ ಮಾಡಲಾಗಿದೆ. ಉಳಿದಂತೆ ಪ್ರಿಯಾಂಕ್ ಪಾಂಚಾಲ್, ಮಯಂಕ್ ಅಗರವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಶುಭಮನ್ ಗಿಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಕೆ.ಎಸ್ ಭರತ್, ರವೀಂದ್ರ ಜಡೇಜಾ, ಜಯಂತ್ ಯಾದವ್, ಕುಲದೀಪ್ ಯಾದವ್, ಸೌರಭ್ ಕುಮಾರ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಮೊಹಮ್ಮದ್ ಶಮಿ ತಂಡದಲ್ಲಿ ಇರಲಿದ್ದಾರೆ. ಪ್ರಸ್ತುತ್ತ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟಿ–20 ಸರಣಿಯ ಮೊದಲೆರಡು ಪಂದ್ಯಗಳನ್ನು ಭಾರತ ಗೆದ್ದುಕೊಂಡಿದೆ. ಇಂದು 3ನೇ ಹಾಗೂ ಅಂತಿಮ ಟಿ–20 ಪಂದ್ಯ ನಡೆಯಲಿದೆ. ಈ ಪಂದ್ಯವೂ ಸೇರಿದಂತೆ ಶ್ರೀಲಂಕಾ ವಿರುದ್ಧದ ಟಿ–20 ಸರಣಿಯಿಂದ ಮಾಜಿ ನಾಯಕ ವಿರಾಟ್ ಕೊಹ್ಲಿ, ವಿಕೆಟ್ ಕೀಪರ್ ರಿಷಭ್ ಪಂತ್, ವೇಗಿ ಶಾರ್ದೂಲ್ ಠಾಕೂರ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.
Squad announcement and more details on the upcoming Sri Lanka tour of India.
— BCCI (@BCCI) February 20, 2022
Details here – https://t.co/W1tBfjhjBM @Paytm #INDvSL pic.twitter.com/IqD2lRLn5O
ಇದನ್ನು ಓದಿ:IPL 2022: ಮಾರ್ಚ್ 27ರಿಂದ ಐಪಿಎಲ್- 2022 – IPL 2022 ಆರಂಭ; ಮೇ 28ಕ್ಕೆ ಫೈನಲ್?