ಬೆಂಗಳೂರು: (ಫೆ.19): Religious Leaders Meeting:ಹಿಜಾಬ್ ಮತ್ತು ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಇಂದು ರಾಜ್ಯಸಭಾ ಸಂಸದರಾದ ಡಾ. ಸಯ್ಯದ್ ನಾಸಿರ್ ಹುಸೇನ್ ಅವರ ನೇತೃತ್ವದಲ್ಲಿ ಸರ್ವಧರ್ಮ ಗುರುಗಳ ಸಭೆ ನಡೆಯಿತು.
ಹೈಕೋರ್ಟ್ ತೀರ್ಪಿಗಾಗಿ ಕಾಯುತ್ತಿದ್ದೇವೆ
ಉಚ್ಚ ನ್ಯಾಯಾಲಯದ ತೀರ್ಮಾನಕ್ಕಾಗಿ ಎದುರುನೋಡುತ್ತಿದ್ದೇವೆ ಹಾಗಾಗಿ ಹೈಕೋರ್ಟ್ ನಿಂದ ಅಂತಿಮ ತೀರ್ಮಾನ ಬರುವವರೆಗೂ ಶಾಂತಿಯಿಂದ ಬಾಳಬೇಕು ಎಂದು ಮುರುಘಾ ಮಠದ ಶಿವಮೂರ್ತಿ ಶರಣರು ತಿಳಿಸಿದರು.

ಹಿಜಾಬ್ ಮತ್ತು ಕೇಸರಿ ಶಾಲು ವಿವಾದದಲ್ಲಿ ನಾವೆಲ್ಲರೂ ವೀಕ್ಷಕರಾಗಿದ್ದೇವೆ. ಇಂತಹ ಸಂದರ್ಭದಲ್ಲಿ ಸಮಸ್ಯೆ ಎದುರಾಗಿದ್ದು ಸಾಮರಸ್ಯ ಮೂಡಿಸುವುದು ಮುಖ್ಯವಾಗಿದೆ. ಹಾಗಾಗಿ ಸಭೆಯಿಂದ ಆಯೋಜಿಸಿ ಚರ್ಚೆ ಮಾಡುತ್ತಿದ್ದೇವೆ. ರಾಜಕೀಯ ಪಕ್ಷಗಳು ಸಾಮಾನ್ಯ ಸಭೆಯ ಇಂದನ ಆಯೋಜಿಸಿ ಚರ್ಚೆ ಮಾಡಿ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಶರಣರು ಹೇಳಿದರು.
ಧರ್ಮದ ಜೊತೆ ಶಿಕ್ಷಣ ಮುಖ್ಯವಾಗಿದೆ
ಹಿಜಾಬ್ ಬಲ ಒಂದು ತಿಂಗಳಿಂದ ಮಾತ್ರ ಧರಿಸುತ್ತಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಯಬೇಕಿದೆ ಎಂದು ಜಮಾಅತೆ ಅಹ್ಲೆ ಸುನ್ನತ್ ಕರ್ನಾಟಕದ ಅಧ್ಯಕ್ಷ ಮೌಲನ ಸೈಯದ್ ತನ್ವೀರ್ ಹಾಶ್ಮಿ ಪೀರ ಅವರು ಹೇಳಿದರು. ಸರ್ವಧರ್ಮ ಸಾಮರಸ್ಯ ಕೂಡಿದ ರಾಜ್ಯದಲ್ಲಿ ಕೋಮು ವಾತಾವರಣ ಸೃಷ್ಟಿಯಾಗಿದೆ. ಶಿಕ್ಷಣ ಮುಖ್ಯವಾಗಿದೆ ಧರ್ಮದ ಹೆಸರಿನಲ್ಲಿ ಹಾಳು ಮಾಡುವುದು ಸರಿಯಲ್ಲ ಎಂದರು.
ಅನೇಕ ಧರ್ಮಗಳಿಗೆ ಆಶ್ರಯ ನೀಡಿರೋ ನೆಲ ಇದು. ಏನೇ ಆದ್ರೂ ಇದು ನಮ್ಮ ಭಾರತ.. ನಮ್ಮ ಧರ್ಮವನ್ನ ಪಾಲಿಸಿ ಎಲ್ಲರ ಧರ್ಮದವರನ್ನ ಗೌರವಿಸೋದು ನಮ್ಮ ಆಚರಣೆ. ನಮಗೆ ಭರವಸೆ ಇದೆ.ಎಂದು ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ಮೌಲಾನ ಸುಲೇಮಾನ್ ಖಾನ್ ಮಾತನಾಡಿ, ಈ ಹಿಜಾಬ್ ರಾಜ್ಯದಲ್ಲಿ ವಾತಾವರಣವನ್ನು ಹಾಳು ಮಾಡಿದೆ. ಹಾಗಾಗಿ ನಾವು ಇದರ ಬಗ್ಗೆ ಗಮನ ಕೊಡಬೇಕು ಎಂದರು. ಬೆಂಗಳೂರು ಕರಗ ಹಿಂದೂ, ಮುಸ್ಲಿಮರ ಏಕತೆಯ ಹಬ್ಬ. ಒಂದೇ ಸತ್ಯವನ್ನೂ ನೂರಾರು ರೀತಿಯಲ್ಲಿ ವರ್ಣಿಸಲಾಗ್ತಿದೆ. ನಮ್ಮ ರಾಜ್ಯದಲ್ಲೂ ಸಾಮರಸ್ಯ, ಏಕತೆ, ವೈವಿಧ್ಯತೆಯನ್ನ ನಾವು ನೋಡ್ಕೊಂಡು ಬಂದಿದ್ದೇವೆ.
ಕರಗ ಮೆರವಣಿಯಲ್ಲೂ ಬರುವ ವಿಜಯ ಕುಮಾರರಿಗೆ ಎಲ್ಲವೂ ಪಾನಕ ಹಂಚುತ್ತಾರೆ. ಎಲ್ಲಾ ಧರ್ಮದವರೂ ಪ್ರದಕ್ಷಿಣೆ ಕೂಡ ಹಾಕ್ತಾರೆ. ಎಲ್ಲರ ಜೊತೆ ಪ್ರೀತಿಯಿಂದ ಬಾಳಬೇಕು ಅನ್ನೋದೇ ನಮ್ಮ ಸಂದೇಶ. ನಮ್ಮ ದೇಶದಲ್ಲಿ ಭಾವೈಕ್ಯತೆ, ಸಾಮರಸ್ಯ, ಏಕತೆ ಎಲ್ಲವೂ ಇದೆ. ನಾವು ನಮ್ಮ ಜವಾಬ್ದಾರಿಯನ್ನ ಉಳಿಸಿಕೊಂಡಿದ್ದೇವೆ. ಫೈನಲ್ ಆರ್ಡರ್ ಕೋರ್ಟ್ ನಿಂದ ಇನ್ನೂ ಬಂದಿಲ್ಲ. ಸರ್ಕಾರ ಮತ್ತು ರಾಜಕೀಯ ವ್ಯಕ್ತಿಗಳು ಈ ವಿವಾದವನ್ನ ಬೆಳೆಯೋಕೆ ಬಿಡಬಾರದು. ಕ್ಲಾಸ್ ರೂಂಗೆ ಹಿಜಾಬ್ ಹಾಕಬಾರದು ಅಂಥ ಹೇಳಿದ್ದಾರೆ. ಅದನ್ನ ವಿದ್ಯಾರ್ಥಿನಿಯರು, ಪೋಷಕರು ಅರ್ಥ ಮಾಡಿಕೊಳ್ಳಬೇಕು.
ಸುನ್ನಿ ಜಮಾತ್ ಅಧ್ಯಕ್ಷರಾದ ಸೈಯದ್ ಮೊಹಮ್ಮದ್ ತನ್ವೀರ್ ಹಾಶ್ಮಿಪೀರ, ನಾಸೆ ಫೌಂಡೇಶನ್ ಅಧ್ಯಕ್ಷರಾದ ಮೌಲಾನ ಶಬ್ಬೀರ್ ನಖ್ವಿ, ಮೌಲಾನ ಮಕ್ಸೂದ್ ಇಮ್ರಾನ್ ಸಾಹೇಮ್ ಸೇರಿದಂತೆ 10ಕ್ಕೂ ಹೆಚ್ಚು ಧಾರ್ಮಿಕ ಮುಖಂಡರು ಭಾಗಿಯಾಗಿದ್ದರು.